ಬಿಂಗಿ ರೋಗ ನಿಯಂತ್ರಣ, ವಿಜ್ಞಾನಿಗಳ ತಂಡ ರಚನೆಗೆ ಮನವಿ
ಕೋಲಾರ,ಜು.೧೪- ಜಿಲ್ಲೆಯಾದ್ಯಂತ ರೈತರ ಬೆಳೆಗಳಿಗೆ ಹೆಚ್ಚಾಗಿರುವ ಬಿಂಗಿ ರೋಗದ ನಿಯಂತ್ರಣಕ್ಕೆ ವಿಶೇಷ ವಿಜ್ಞಾನಿಗಳ ತಂಡವನ್ನು ರಚನೆ ಮಾಡಿ, ನಕಲಿ ಬಿತ್ತನೆ ಬೀಜ ಹಾಗೂ ಕೀಟನಾಶಕಗಳ ಹಾವಳಿಗೆ ಸದನದಲ್ಲಿ ಧ್ವನಿ ಎತ್ತುವಂತೆ ಶಾಸಕ ಕೊತ್ತೂರು ಮಂಜುನಾಥ್ ಅವರಿಗೆ ರೈತ ಸಂಘದಿಂದ ಮನವಿ ಸಲ್ಲಿಸಿ ಒತ್ತಾಯಿಸಿದರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ನಡೆದ ಜನಸ್ವಂದನ ಸಭೆಯಲ್ಲಿ ಮನವಿ ನೀಡಿ ಒತ್ತಾಯಿಸಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಹಿಂದೆ ಜಿಲ್ಲೆಯಿಂದ ಹೊರ ಜಿಲ್ಲೆ ಹಾಗೂ ರಾಜ್ಯಗಳಿಗೆ ಹಣ್ಣು ತರಕಾರಿ ಪೂರೈಕೆ ಮಾಡುತ್ತಿದ್ದರೂ ರೈತರ ಜೀವನ ಮಟ್ಟ ಮಾತ್ರ ಸುಧಾರಣೆಯಾಗಲಿಲ್ಲ ಕೃಷಿಯನ್ನೇ ಅವಲಂಬಿಸಿರುವ ರೈತರ ಬೆಳೆಗಳಿಗೆ ಬಿಂಗಿ ರೋಗವು ಭಾದಿಸುತ್ತಾ ಇದ್ದು ಜೊತೆಗೆ ನಕಲಿ ಕೀಟನಾಶಕಗಳ ಹಾವಳಿಯಿಂದ ಸಾಲದ ಬಾಧೆಗಳಿಂದ ರೈತರು ಆತ್ಮಹತ್ಯಗೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ ಇದಕ್ಕೆ ಕೂಡಲೇ ಕಡಿವಾಣ ಹಾಕುವಂತೆ ಸದನದಲ್ಲಿ ಜಿಲ್ಲೆಯ ಪರವಾಗಿ ಮಾತಾಡಬೇಕು ಎಂದು ಒತ್ತಾಯಿಸಿದರು.
ಕೋಲಾರ ತಾಲೂಕಿನಲ್ಲಿ ಕೆರೆ ಕುಂಟೆ ಸೇರಿದಂತೆ ಸರಕಾರಿ ಜಮೀನುಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉಳಿಸಿ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕು ಇದಕ್ಕೆ ಕೂಡಲೇ ಸದಸದಲ್ಲಿ ಚರ್ಚಿಸಿ ವಿಶೇಷ ತಂಡ ರಚನೆ ಮಾಡಬೇಕು ಕೋಲಾರ ನಗರ ಜಿಲ್ಲಾ ಕೇಂದ್ರದಿಂದ ಕೂಡಿದ್ದು ಗ್ರಾಮೀಣ ಮತ್ತು ನಗರದ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾಳಾಗಿದ್ದು ಕೂಡಲೇ ರಸ್ತೆಗಳನ್ನು ಸರಿಪಡಿಸಲು ಸರಕಾರದಿಂದ ವಿಶೇಷ ಅನುದಾನವನ್ನು ತಂದು ಅಭಿವೃದ್ಧಿಗೆ ಅಧ್ಯತೆ ನೀಡುವಂತೆ ಶಾಸಕರನ್ನು ಒತ್ತಾಯಿಸಿದರು.
ಕೋಲಾರ ಜಿಲ್ಲೆಯೂ ಟಮೋಟಗೆ ಏಷ್ಯಾದಲ್ಲೇ ಎರಡನೇ ಅತಿದೊಡ್ಡ ಮಾರುಕಟ್ಟೆಯಾಗಿದೆ ಆದರೆ ಜಾಗದ ಕೊರತೆಯಿಂದ ವಹಿವಾಟುಗೆ ಸಾಕಷ್ಟು ತೊಂದರೆಗಳನ್ನು ಅನುಭವಿಸಬೇಕಾಗಿದೆ ಎಪಿಎಂಸಿಗೆ ಸುಮಾರು ೧೦೦ ಎಕರೆ ಜಾಗವನ್ನು ಮಂಜೂರು ಮಾಡಿಸುವ ಜೊತೆಗೆ ಹೊಸ ಮಾರುಕಟ್ಟೆ ನಿರ್ಮಾಣಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಹೆಚ್ಚಿನ ಅನುದಾನವನ್ನು ನೀಡುವಂತೆ ಸರ್ಕಾರದೊಂದಿಗೆ ಚರ್ಚಿಸಿ ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರಾದ ಈಕಂಬಳ್ಳಿ ಮಂಜುನಾಥ್, ಯಾರಂಘಟ್ಟ ಗಿರೀಶ್ ಇದ್ದರು.