ಗುಣಮಟ್ಟದ ಹಾಲು ಪಡೆದಷ್ಟು ಲಾಭದಾಯಕ
ಮಾಲೂರು.ಜು.೧೪- ಸುಮಾರು ೪,೬೨,೦೦೦ ಲಾಭವನ್ನು ಗಳಿಸಿದೆ ತಾಲೂಕಿನಲ್ಲಿ ಇದೆ ಮೊದಲ ಬಾರಿಗೆ ಉಪ ಕೇಂದ್ರವು ಇಷ್ಟೊಂದು ಲಾಭ ಪಡೆದ ಕೇಂದ್ರವಾಗಿದೆ.
ಸಂಘಗಳು ಗುಣಮಟ್ಟದ ಹಾಲು ಪಡೆದಷ್ಟು ಲಾಭದಾಯಕವಾಗಿರುತ್ತದೆ ಗುಣಮಟ್ಟದ ಹಾಲನ್ನು ಪಡೆಯುವುದು ಸಂಘದ ಕಾರ್ಯದರ್ಶಿಗಳ ಜವಾಬ್ದಾರಿ ಆಗಿರುತ್ತದೆ ತಾಲೂಕಿನಲ್ಲಿ ಕೆಲವು ಸಂಘಗಳು ಗುಣಮಟ್ಟದ ಹಾಲನ್ನು ಪಡೆಯುತ್ತಿರುವುದರಿಂದ ಲಾಭದಾಯಕವಾಗಿದೆ ಒಕ್ಕೂಟದ ತೀರ್ಮಾನದಂತೆ ಗುಣಮಟ್ಟದ ಹಾಲಿಗೆ ಪ್ಯಾಟ್ ಮೇಲೆ ಬೆಲೆ ನಿಗದಿ ಪಡಸಿ ಎ ಎಂ ಸಿ ಗಳು ನೀಡಲಾಗುತ್ತಿದೆ ಒಕ್ಕೂಟವು ಹಾಲು ಉತ್ಪಾದಕರಿಗೆ ನೀಡುವ ಸವಲತ್ತುಗಳನ್ನು ಸಹಕಾರ ಸಂಘಗಳ ಪ್ರಕಟಣ ಫಲಕದಲ್ಲಿ ಪ್ರಕಟಿಸಲು ಸೂಚಿಸಲಾಗಿದೆ ಒಕ್ಕೂಟವು ಹಾಲು ಉತ್ಪಾದಕ ಸಹಕಾರ ಸಂಘಗಳಲ್ಲಿ ಕ್ಯಾನ್ ಲೆಸ್ ಬಿ ಎಂ ಸಿ ಕೇಂದ್ರಗಳನ್ನು ಪ್ರಾರಂಭಿಸಿದೆ
ಎರಡು ಜಿಲ್ಲೆಗಳಲ್ಲಿ ೨೦೦೦ ಹಾಲು ಉತ್ಪಾದಕ ಸಹಕಾರ ಸಂಘಗಳು ಬಲಿಷ್ಠ ವಾಗಿದ್ದು ಒಕ್ಕೂಟಕ್ಕೆ ಹಾಲು ಉತ್ಪಾದಕರು ಸಂಘಗಳಿಗೆ ಹಾಕುವ ೧೨ ಲಕ್ಷ ೮೫,೦೦೦ ಲೀಟರ್ ಹಾಲು ಪ್ರತಿನಿತ್ಯ ಸಂಗ್ರಹವಾಗುತ್ತಿದೆ ಒಕ್ಕೂಟಕ್ಕೆ ಹೆಚ್ಚಿನ ಹಾಲು ಸಂಗ್ರಹವಾಗುತ್ತಿರುವುದರಿಂದ ಹಾಲು ಉತ್ಪಾದಕರು ಸಂಘಗಳಿಗೆ ನೀಡುವ ಹಾಲಿನ ದರವನ್ನು ಎರಡು ರೂಗಳ ಕಡಿತ ಮಾಡಲಾಗಿದ್ದು ಮುಂಬರುವ ದಿನಗಳಲ್ಲಿ ಒಕ್ಕೂಟವು ಹಾಲಿಗೆ ಉತ್ತಮ ಮಾರುಕಟ್ಟೆಯನ್ನು ಮಾಡಿಕೊಂಡು ನಂತರದ ದಿನಗಳಲ್ಲಿ ಹಾಲಿನ ದರವನ್ನು ಹೆಚ್ಚಳ ಮಾಡಲಾಗುವುದು ಎಂದರು
ಈ ಸಂದರ್ಭದಲ್ಲಿ ಒಕ್ಕೂಟದ ಮಹಿಳಾ ನಿರ್ದೇಶಕಿ ಕಾಂತಮ್ಮ ಸೋಮಣ್ಣ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸುಶೀಲಮ್ಮ ಮುಖಂಡರಾದ ಟಿವಿ ತಿಮ್ಮೆ ಗೌಡ ಜಯಣ್ಣ ಟಿ ಇ ದೇವರಾಜ್ ಪ್ರಭು ಶಿಬಿರ ಕಚೇರಿಯ ವ್ಯವಸ್ಥಾಪಕ ಡಾಕ್ಟರ್ ಲೋಹಿತ್ ವಿಸ್ತರಣಾಧಿಕಾರಿಗಳಾದ ವೆಂಕಟೇಶ್ ಕರಿಯಪ್ಪ ಮನೋಹರ್ ಹುಲ್ಲೂರಪ್ಪ ಗಂಗಾಧರ್ ಹಾಲು ಉತ್ಪಾದಕ ಸಹಕಾರ ಸಂಘದ ನಿರ್ದೇಶಕರಾದ ಅಶ್ವಿನಿ ಜಿ ಕಲಾವತಿ ಎ ಪ್ರಮೀಳಾ ಮಂಜುಳಾ ಮಂಜುಳ ಎಂಆರ್ ಮುನಿಲಕ್ಷ್ಮಿ ವಿಜಯಮ್ಮ ವಿಮಲಾ ಭಾಗ್ಯಮ್ಮ ಚೆನ್ನಮ್ಮ ಶಾಮಲಾ ಹೇಮಾವತಿ ಕಾರ್ಯದರ್ಶಿ ಚೈತ್ರ ಇನ್ನಿತರರು ಹಾಜರಿದ್ದರು