ಲೋಕ ಅದಾಲತ್ : ಬಾಂಧವ್ಯದ ಬೆಸುಗೆ-ನ್ಯಾಯಾಧೀಶ ಪ್ರಶಾಂತ ನಾಗಲಾಪುರ
ಸಂಜೆವಾಣಿ ವಾರ್ತೆ
ಹೊಸಪೇಟೆ ಜು14:  ಲೋಕ ಅದಾಲತ್‍ನಲ್ಲಿ ರಾಜೀ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡರೆ ಜನರಿಗೆ ಮಾನಸಿಕ ನೆಮ್ಮದಿ ದೊರೆಯಲಿದ್ದು, ಇದರಿಂದ ಬಾಂಧವ್ಯ ಬೆಸೆಯುವ ಕೆಲಸವಾಗಲಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ಪ್ರಶಾಂತ ನಾಗಲಾಪುರ ಅವರು ಹೇಳಿದರು.
ನಗರದ ನ್ಯಾಯಾಲಯದಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರಲ್ಲಿ ದ್ವೇಷ ಭಾವನೆ ತೊರೆದು ಸಹಬಾಳ್ವೆಯಿಂದ ಜೀವನ ನಡೆಸಲು ಲೋಕ ಅದಾಲತ್ ಸಹಕಾರಿಯಾಗಿದೆ ಎಂದರು. 
3 ನೇ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಅಬ್ದುಲ್ ರಹೀಮಾನ ಎ ನಂದಗಡಿ ಅವರ ನೇತೃತ್ವದಲ್ಲಿ ಸಿವಿಲ್ ದಾವೆಗಳು:64, ಚೆಕ್‍ಬೌನ್ಸ್ ಪ್ರಕರಣಗಳು-187, ಕ್ರಿಮಿನಲ್ ಕಾಪೌಂಡ್ ಎಬಲ್ ಪ್ರಕರಣಗಳು 16, ಕ್ರಿಮನಲ್ ಮಿಸ್ ಪ್ರಕರಣಗಳು 500, ಆಪೀಲ್ ಪ್ರಕರಣಗಳು 9, ಲಘು ಪ್ರಕರಣಗಳು 3855, ಕೌಟಿಂಬಿಕ ಕಲಹಗಳು 89 ಸೇರಿ ಲೋಕ ಅದಾಲತ್‍ನಲ್ಲಿ ಒಟ್ಟು 4736 ಪ್ರಕರಣಗಳು ಇತ್ಯರ್ಥಗೊಂಡಿವೆ ಒಟ್ಟಾರೆ ಲೋಕ ಅದಾಲತ್ ಬಾಂಧವ್ಯ ವೃದ್ಧಿಗೆ ಸಹಕಾರಿಯಾಗಲಿದೆ ಎಂದರು.
ಪರಸ್ಪರ ಪ್ರಕರಣಗಳ ನ್ಯಾಯವಾದಿಗಳು, ಅರ್ಜಿದಾರರು, ಸಾಕ್ಷಿಗಳು ಸೇರಿದಂತೆ ಅನೇಕರು ಪಾಳ್ಗೊಂಡು ಪ್ರಕರಣಗಳ ಅಂತ್ಯಕ್ಕೆ ಕಾರಣವಾದರು.