ಡೆಂಗ್ಯೂ ಖಾಯಿಲೆ ತಡೆಗೆ ನಗರಸಭೆಯೊಂದಿಗೆ ಸಹಕರಿಸಿ
ಕೆಜಿಎಫ್.ಜು.೧೪- ಕಳೆದ ೧ ತಿಂಗಳಿನಿಂದ ರಾಜ್ಯದಲ್ಲಿ ಡೆಂಗ್ಯೂ ಮಹಾಮಾರಿಯು ತೀರ್ವಗತಿಯಲ್ಲಿ ಏರಿಕೆಯಾಗುತ್ತಿದ್ದರು ಕೆಜಿಎಫ್ ನಗರಸಭೆ ವ್ಯಾಪ್ತಿಯಲ್ಲಿ ಯಾವುದೆ ಡೆಂಗ್ಯೂ ಪ್ರಕರಣಗಳು ವರದಿಯಾಗಿದ್ದರು ನಗರಸಭೆಯು ಡೆಂಗ್ಯೂ ನಿಯಂತ್ರಣ ಮಾಡುವಲ್ಲಿ ಸಂರ್ಪೂಣವಾಗಿ ಸಜ್ಜುಗೊಂಡಿದೆ ಎಂದು ನಗರಸಭೆ ಪೌರಾಯುಕ್ತ ಪವನ್‌ಕುಮಾರ ಹೇಳಿದರು.
ನಗರಸಭೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಡೆಂಗ್ಯೂ ಖಾಯಿಲೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ನಗರದ ೩೫ ವಾರ್ಡ್‌ಗಳಲ್ಲಿ ಬ್ಲಿಚಿಂಗ್ ಪೌಡರ್ ಸಿಂಪಡಣೆ ಹಾಗೂ ಫಾಗಿಂಗ್ ಮಾಡಿಸಲಾಗುತ್ತಿದೆ ನಗರಸಭೆ ಕೈಗೊಳ್ಳಬೇಕಾದ ಎಲ್ಲಾ ಮುಂಜಾಗೃತ ಕ್ರಮಗಳನ್ನು ಕೈಗೊಂಡಿದ್ದರು ನಗರಸಭೆಯೊಂದಿಗೆ ಮುಖ್ಯವಾಗಿ ಸಾರ್ವಜನಿಕರು ಕೈಜೊಡಿಸಿದಾಗ ಮಾತ್ರ ಡೆಂಗ್ಯೂವನ್ನು ಸಂರ್ಪೂಣವಾಗಿ ತಡೆಗಟ್ಟಲು ಸಾಧ್ಯ ಆದ್ದರಿಂದ ನಿಮ್ಮ ಮನೆಯಲ್ಲಿನ ತ್ಯಾಜ್ಯವನ್ನು ನಗರಸಭೆಗೆ ಆಟೋ ಟಿಪ್ಪರ್ ವಾಹನಕ್ಕೆ ನೀಡುವ ಮೂಲಕ ಸಹಕರಿಸಬೇಕು ಎಂದು ಮನವಿ ಮಾಡಿದರು.
ಕೃತಕ ಬಣ್ಣಗಳ ನಿಶೇಧ ನಮ್ಮ ರೈಡ್ ಯಶಸ್ಸಿ
ಗೋಬಿ ಮಂಜೂರಿ ಚಿಕನ್ ಸೆಂಟರ್‌ಗಳಲ್ಲಿ ಶವರ್ಮಾ ತಯಾರು ಮಾಡಲು ಬಳಸುತ್ತಿದ್ದ ಕೃತಕ ಬಣ್ಣ ಸೇರಿದಂತೆ ಸಿಹಿ ತಯಾರು ಮಾಡುವ ಅಂಗಡಿಗಳಲ್ಲಿ ಬಳಸಲಾಗುತ್ತಿದ್ದನ್ನು ಆಹಾರ ಸುರಕ್ಷಾತ ಇಲಾಖೆಯು ನಿಶೇಧವನ್ನು ಮಾಡಿ ಆದೇಶ ಹೊರಡಿಸಿತ್ತು ಈ ಹಿನ್ನಲೆಯಲ್ಲಿ ನಗರದ ವಿವಿದೆಡೆಗಳಲ್ಲಿರುವ ರೆಸ್ಟೋರೆಂಟ್‌ಗಳು ಬಿರಿಯಾನಿ ಹೋಟೆಲ್ ಹಾಗೂ ಸಿಹಿ ಮಾರಾಟ ಅಂಗಡಿಗಳ ಮೇಲೆ ರೈಡ್ ಮಾಡಿ ೧ ಲಕ್ಷ ದಂಡವನ್ನು ಹಾಕಿ ಕೃತಕ ಬಣ್ಣವನ್ನು ಬಳಸಿ ತಯಾರು ಮಾಡಿದ ಸಿಹಿ ಸಿನಿಸುಗಳನ್ನು ವಶಪಡಿಸಿಕೊಂಡ ನಂತರ ಇಧೀಗ ಎಚ್ಚೇತುಕೊಂಡಿರುವ ಅಂಗಡಿ ಮಾಲಿಕರು ಕೃತಕ ಬಣ್ಣವನ್ನು ಬಳಸದೆ ನೈಜ ರೀತಿಯಲ್ಲಿ ಸಿಹಿ ಸಿನಿಸುಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.