ವಸ್ತು ಪುನರ್ ಸಂಪಾದನಾ ಘಟಕಕ್ಕೆ ಭೂಮಿ ಪೂಜೆ
ಶಿರಹಟ್ಟಿ,ಜು.14: ಮಾನವನು ಬಳಸಿದ ವಸ್ತುಗಳ ಉಳಿದ ಭಾಗವು ತ್ಯಾಜ್ಯದ ರೂಪದಲ್ಲಿ ಮೂಲೆ ಸೇರುತ್ತದೆ. ಈ ವ್ಯರ್ಥ ವಸ್ತುಗಳು ಮನು?À್ಯನ ಆರೋಗ್ಯ, ಪರಿಸರ ಸೌಂದರ್ಯದ ಮೇಲೆ ಕೆಟ್ಟ ಪ್ರಭಾವ ಬೀರುತ್ತವೆ. ಇದರ ಜೊತೆಯಲ್ಲಿ ಕಸದೊಳಗಿಂದ ರಸ ತೆಗೆಯಲು ಕೂಡಾ ವಸ್ತು ಪುನರ್ ಸಂಪಾದನಾ ಸೌಲಭ್ಯ ಘಟಕ ಬಹುಮುಖ್ಯ ಪಾತ್ರ ನಿರ್ವಹಿಸುತ್ತವೆ. ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ತಾಲೂಕಿನ ಬೆಳ್ಳಟ್ಟಿ ಗ್ರಾಮದ ಹೊರವಲಯದಲ್ಲಿ ನಿರ್ಮಿತಿ ಕೇಂದ್ರದ ಅಡಿಯಲ್ಲಿ ವಸ್ತು ಪುನರ್ ಸಂಪಾದನಾ ಸೌಲಭ್ಯ ಘಟಕಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಈ ವೇಳೆ ಗ್ರಾಮ ಪಂಚಾಯ್ತಿ ಸದಸ್ಯರಾದ ತಿಮ್ಮರೆಡ್ಡಿ ಮರಡ್ಡಿ, ಮೋಹನ ಗುತ್ತೆಮ್ಮನವರ, ನೇತ್ರಾ ಸಜ್ಜನರ, ಶಿವನಗೌಡ ಪಾಟೀಲ, ಗ್ರಾ ಪಂ ಅದ್ಯಕ್ಷ ರಮೇಶ ನಿರ್ವಾಣಶೆಟ್ಟರ, ಸಿದ್ದರಾಮಪ್ಪ ಮೊರಬದ, ರಮೇಶ ಮಲ್ಲಾಡದ, ತಿಪ್ಪಣ್ಣ ಕೊಂಚಿಗೇರಿ, ಪರಶುರಾಮ ಡೊಂಕಬಳ್ಳಿ, ಮೌನೇಶ ಲಮಾಣಿ, ಶೀವು ಲಮಾಣಿ, ಮಹೇಶ ಬಡ್ನಿ ಸೇರಿದಂತೆ ಇತರರು ಇದ್ದರು.