ಅಂಕಪಟ್ಟಿಯಷ್ಟೆ ಕೌಶಲ್ಯಕ್ಕೂ ಮಹತ್ವ: ಚಂದ್ರಯ್ಯ
ಚಿಕ್ಕಬಳ್ಳಾಪುರ.ಜು.೧೪-ಪದವಿ ಪ್ರದಾನ ಸಮಾರಂಭ ಎನ್ನುವುದು ಅಂತಿಮ ಬಿಎ, ಬಿಕಾಂ ವಿದ್ಯಾರ್ಥಿಗಳ ಪಾಲಿಗೆ ಮರೆಯಲಾಗದ ನೆನಪಿನ ಕಾರ್ಯಕ್ರಮವಾಗಿದೆ.ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅಂಕಪಟ್ಟಿಯಷ್ಟೇ ಮಹತ್ವದ ಸ್ಥಾನವನ್ನು ಕೌಶಲ್ಯಕ್ಕೆ ನೀಡುತ್ತಿದ್ದಾರೆ.ಇದನ್ನರಿತು ವಿದ್ಯಾರ್ಥಿಗಳು ಓದನ್ನು ಗಂಭೀರವಾಗಿ ತೊಡಗಬೇಕು ಎಂದು ಸರಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಜಿ.ಡಿ.ಚಂದ್ರಯ್ಯ ಹೇಳಿದರು.
ನಗರ ಹೊರವಲಯ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಶುಕ್ರವಾರ ನಡೆದ ಪದವಿ ಪ್ರದಾನ ಸಮಾರಂಭಕ್ಕೆ ಜಾಲನೆ ನೀಡಿ ಮಾತನಾಡಿದರು.
ಸರಕಾರಿ ಪದವಿ ಕಾಲೇಜುಗಳಲ್ಲಿ ವ್ಯಾಸಾಂಗ ಮಾಡುವ ಬಹುತೇಕ ವಿದ್ಯಾರ್ಥಿಗಳು ಗ್ರಾಮೀಣಪ್ರದೇಶದ ಕೃಷಿಕೂಲಿ ಕುಟುಂಬದ ಹಿನ್ನೆಲೆಯಿಂದ ಬಂದವರಾಗಿರುತ್ತಾರೆ.ದಾಖಲಾತಿ ಮಾಡುವಾಗ ಬರುವ ಪೋಷಕರು ನಂತರದಲ್ಲಿ ಕಾಲೇಜಿಗೆ ಬಂದು ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಕೇಳುವುದೇ ಇಲ್ಲ.ಪಾಠಪ್ರವಚನ ಮಾಡುವ ಪ್ರಾಧ್ಯಾಪಕರೇ ಸದಾ ಕಾಲ ಪೋಷಕರೇ ಹಾಗೆ ಇವರನ್ನು ತಿದ್ದಿ ತೀಡಿ ಸರಿದಾರಿ ತೋರುತ್ತಿರುತ್ತಾರೆ.ಗುಣಮಟ್ಟದ ಶಿಕ್ಷಣ ನೀಡುತ್ತಾರೆ. ಇದೇ ಕಾರಣವಾಗಿಯೇ ಖಾಸಗಿ ಕಾಲೇಜುಗಳಿಗಿಂತ ಸರಕಾರಿ ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿಯಿಂದ ಓದಿ ಉತ್ತಮ ಅಂಕಗಳಿಸಲು, ರ?ಯಾಂಕ್ ಪಡೆಯಲು ಸಾಧ್ಯವಾಗಿದೆ ಎಂದರು.
ಮಹಿಳಾ ಕಾಲೇಜು ಎನ್ನುವುದು ಹೆಣ್ಣು ಮಕ್ಕಳನ್ನು ಉನ್ನತ ಶಿಕ್ಷಣದತ್ತ ಕೊಂಡೊಯ್ಯಲು ಇರುವ ಉತ್ತಮ ತಾಣವಾಗಿದೆ ಎಂದು ಇಲ್ಲಿಗೆ ದಾಖಲಾತಿ ಪಡೆದ ನಂತರವೇ ಅರಿವಿಗೆ ಬಂದಿತು. ಇಲ್ಲಿನ ಪ್ರಾಂಶುಪಾಲರಾದಿಯಾಗಿ ಎಲ್ಲಾ ಬೋಧಕರು ನಮಗೆ ಪಠ್ಯದ ಜತೆಗೆ ಜೀವನಕ್ಕೆ ಬೇಕಾದ ಮೌಲ್ಯಗಳನ್ನು ಕಲಿಸಿದ್ದಾರೆ.ಇವರಂತೆ ಎಲ್ಲಾ ಅಧ್ಯಾಪಕ ಪ್ರಾಧ್ಯಾಪಕರು, ಬೋಧಕೇತರ ವರ್ಗದವರು ಕೂಡ ನಮಗೆ ದಾರಿ ತೋರಿಸಿದ್ದಾರೆ. ಎಲ್ಲರಿಗೂ ಅನಂತ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ವಿದ್ಯಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ನೂತನ ಪೋಷಾಕಿನಲ್ಲಿ ಮಿಂಚಿದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬಂದವು.
ಈ ವೇಳೆ ಕಾಲೇಜಿನ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿ ಹಾಜರಿದ್ದರು.