ಹಬೋಹಳ್ಳಿ :ಎಸ್ ಎಫ್ ಐ ಸಂಘಟನೆಯ  ತಾಲೂಕು ಸಮ್ಮೇಳನ
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಜು.12 ಪಟ್ಟಣದ ಡಾ.ಬಿ ಆರ್  ಅಂಬೇಡ್ಕರ್ ಭವನದಲ್ಲಿ ಎಸ್ ಎಫ್ ಐ ತಾಲೂಕು ಸಮ್ಮೇಳನ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು   ಸಂವಿಧಾನದ ಪ್ರಸ್ತಾವನೆಯನ್ನು ಓದಿಸುವುದರ ಮೂಲಕ ಜಿಲ್ಲಾ ಅಧ್ಯಕ್ಷರಾದ ದೊಡ್ಡ ಬಸವರಾಜ್ ಉದ್ಘಾಟನೆ ಮಾಡಿದರು
ಪ್ರಾಸ್ತಾವಿಕವಾಗಿ ಜಯಸೂರ್ಯ ಮಾತನಾಡಿದರು ಅಧ್ಯಕ್ಷತೆ ಹಿರಿಯ ಸಾಹಿತಿ ಮೇಟಿ ಕೊಟ್ರಪ್ಪ ವಹಿಸಿದ್ದರು ಸಮ್ಮೇಳನ ಉದ್ದೇಶಿಸಿ  ಮುಖ್ಯ ಅತಿಥಿಯಾಗಿ ಹಿರಿಯ ಸಾಹಿತಿ ಹುರಕಡ್ಲಿ  ಶಿವಕುಮಾರ್  ಮಾತನಾಡಿದರು.
ಈ ಸಂದರ್ಭದಲ್ಲಿ , ವೀನೋದ,  ಗಣೇಶ್ ಹವಲ್ದಾರ್ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವಿದ್ಯಾರ್ಥಿ ಮುಖಂಡರಾದ  ದುರುಗೇಶ್ ನಿರೂಪಣೆ ಮಾಡಿದರು  ಪುಷ್ಪವತಿ ಸ್ವಾಗತಿಸಿದರು , ದೀನೇಶ್ ವಂದಿಸಿದರು.