ಹಬೋಹಳ್ಳಿ : ತಾಲೂಕ ಕುರುಬ ಸಮಾಜದಿಂದ ಜು.21ರಂದು ಪ್ರತಿಭಾ ಪುರಸ್ಕಾರ
ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಜು.14 ತಾಲೂಕು ಕುರುಬ ಸಂಘದಿಂದ ಜು.21ರಂದು ಕನ್ನಿಕಾ ಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ  ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ತಾಲೂಕು ಅಧ್ಯಕ್ಷ ಎಂ. ಶಿವರಾಜ್ ತಿಳಿಸಿದರು.
ಪಟ್ಟಣದಲ್ಲಿ ಶನಿವಾರ ಸುದ್ದಿ ಗೋಷ್ಠಿ ಯಲ್ಲಿ ಮಾತನಾಡಿ ಎಸ್ ಎಸ್ ಎಲ್ ಸಿ, ಪಿಯುಸಿ ಯಲ್ಲಿ ಶೇ.85ಕ್ಕಿಂತ  ಹೆಚ್ಚು ಅಂಕಗಳನ್ನು ಪಡೆದ ಪ್ರತಿಭಾವಂತ ಮಕ್ಕಳಿಗೆ ಸನ್ಮಾನಿಸಿ ಗೌರವಿಸಲಾಗುವುದು. ಈಗಾಗಲೇ ಸಮಾಜದಿಂದ 7ನೇ ವರ್ಷದ ಪ್ರತಿಭಾ ಪುರಸ್ಕಾರ ಮಾಡಿಕೊಂಡು ಬರಲಾಗಿದೆ. ಆದ್ದರಿಂದ  ಪ್ರತಿಭಾವಂತ ಮಕ್ಕಳು ಜುಲೈ 16 ರೊಳಗೆ ಎಸ್ಎಂಎಸ್ ಆಟೋಮೊಬೈಲ್ ಅಂಗಡಿಯಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು ಎಂದರು .
 ಸಮಾಜದ ಮಾಜಿ ಅಧ್ಯಕ್ಷ ಬುಡ್ಡಿ  ಬಸವರಾಜ್ ಮಾತನಾಡಿ  ಸಮಾಜದ ಪ್ರತಿಭಾ ಪುರಸ್ಕಾರ ಪಕ್ಷಾ ತೀತವಾಗಿದ್ದು. ಸಮಾಜದ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹಿಸುವ ಮುಂದಿನ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡುವಂತಹ ಈ ಕಾರ್ಯಕ್ರಮ ಒಂದು ಮಾದರಿಯಾಗಿದೆ.ತಾಲೂಕು ಕುರುಬರ ಸಂಘ ಮತ್ತು ಕನಕ ನೌಕರರ ಸಂಘ ಸಹಯೋಗದಲ್ಲಿ ನಿರಂತರ ಈ ಕಾರ್ಯಕ್ರಮ ಪ್ರತಿ ವರ್ಷ ಮಾಡಿಕೊಂಡು ಬರಲಾಗುತ್ತದೆ ಎಂದರು.
 ಸಮಾಜದ ಮುಖಂಡರಾದ ಬಣಕಾರ್ ಗೋಣೆಪ್ಪ  ಮುಟಗನಹಳ್ಳಿ ಕೊಟ್ರೇಶ್ , ಮಾತನಾಡಿದರು
 ಈ ಸಂದರ್ಭದಲ್ಲಿ ಸಮಾಜದ  ಕಾರ್ಯದರ್ಶಿ ಬಿ. ಹನುಮಂತಪ್ಪ,ಕೊಟ್ರಯ್ಯ ಒಡೆಯರ್ .ಲೋಕೇಶ್. ನಾಗೇಂದ್ರ. ಮಾಲವಿ ನಾಗಪ್ಪ. ಭಂಡಾರಿ ಭರಮಪ್ಪ. ಹುಡೇದ್  ಹುಲುಗಪ್ಪ. ಎಚ್. ಕೆ ರಾಮು. ನಿಂಗರಾಜ್. ಶಿವರಾಮಪ್ಪ. ನೇತ್ರಾನಂದಪ್ಪ. ಕೋಗಳಿ  ಹನುಮಂತಪ್ಪ. ಕನಕ ನೌಕರರ ಸಂಘದ ಅಧ್ಯಕ್ಷ ಎಂ.ಎಸ್ ಕಲ್ಗುಡಿ. ಕೆ. ವೆಂಕಟೇಶ್. ಪ್ರಕಾಶಪ್ಪ. ನೀಲಪ್ಪ. ಜಾತಪ್ಪ
 ಪರಶುರಾಮ. ಇತರರು ಇದ್ದರು.
One attachment • Scanned by