ಕನಕದಾಸ ಅಧ್ಯಯನ ಕೇಂದ್ರ: ದಿನ್ನಿ ಸದಸ್ಯ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.14: ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರಕ್ಕೆ ನಗರದ  ಸರಳಾದೇವಿ  ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ದಸ್ತಗೀರಸಾಬ್ ದಿನ್ನಿ ಅವರನ್ನು ಸದಸ್ಯರನ್ನಾಗಿ ನೇಮಿಸಿ ಸರ್ಕಾರ  ಆದೇಶಿಸಿದೆ.
ಅಧ್ಯಯನ ಕೇಂದ್ರಕ್ಕೆ ಅಧ್ಯಕ್ಷರು ಹಾಗೂ 6 ಸದಸ್ಯರನ್ನು ಸರ್ಕಾರ ಶುಕ್ರವಾರ ನೇಮಿಸಲಾಗಿತ್ತು. ಅಧ್ಯಯನ ಕೇಂದ್ರಕ್ಕೆ ಮೈಸೂರಿನ ಕಾ.ತ ಚಿಕ್ಕಣ್ಣ ಅಧ್ಯಕ್ಷರಾಗಿದ್ದಾರೆ.
ಕವಿತೆ, ಗಜಲ್, ವಿಮರ್ಶೆ, ವೈಚಾರಿಕ ಲೇಖನ ಮುಂತಾದ ಪ್ರಕಾರಗಳಲ್ಲಿ ತೊಡಿಸಿಕೊಂಡಿರುವ ದಸ್ತಗೀರಸಾಬ್ ದಿನ್ನಿ, ಸೂಕ್ಷ್ಮ ಸಂವೇದನೆಯ ಬರೆಹಗಾರ. ಈಗಾಗಲೇ 18 ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ಅರ್ಪಿಸಿದ್ದಾರೆ.