ಕ್ರಿಯಾಶೀಲರಾಗಲು ಕರೆ
ನವಲಗುಂದ,ಜು 14 : ಇಂದಿನ ಯುಗದಲ್ಲಿ ವಿದ್ಯಾರ್ಥಿಗಳು ಹೆಚ್ಚು ಕ್ರಿಯಾಶೀಲರಾಗಿ ಯಾವತ್ತೂ ಸಕರಾತ್ಮಕ ಚಿಂತನೆಗಳಿಂದ ಜೀವನದಲ್ಲಿ ಮುಂದುವರೆಯಬೇಕು ಹಾಗೂ ಉನ್ನತ ಗುರಿಗಳತ್ತ ಹೆಜ್ಜೆ ಹಾಕಬೇಕು ಎಂದು ಹಿರಿಯ ಸಾಹಿತಿ ಡಾ.ವೈ ಎಂ ಯಾಕೊಳ್ಳಿ ಹೇಳಿದರು.
ಅವರು ಸ್ಥಳೀಯ ಶಿಕ್ಷಕರ ಸಹಕರಿ ಕಲ್ಯಾಣ ಕೇಂದ್ರದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಹಮ್ಮಿಕೊಂಡಿದ್ದ ಸಾಂಸ್ಕೃತಿಕ,ಕ್ರೀಡಾ,ಎನ್ ಎಸ್ ಎಸ್,ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಇತರೆ ಚಟುವಟಿಕೆಗಳ ಸಮಾರೋಪ ಸಮಾರಂಭ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು
ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ ಎಂ ಬಿ ಬಾಗಡಿ ಮಾತನಾಡಿ ವಿದ್ಯಾರ್ಥಿಗಳ ನಡುವಳಿಕೆಯಿಂದ ಶಿಕ್ಷಣ ಸಂಸ್ಥೆಗಳ ಗುಣಮಟ್ಟ ಅಳೆಯುವ ಕಾಲ ಬಂದಿದ್ದು ವಿದ್ಯಾರ್ಥಿಗಳು ಯಾವಾಗಲೂ ವಿದ್ಯಾಭ್ಯಾಸದ ಜೊತೆಗೆ ಉತ್ತಮ ನಡುವಳಿಕೆ ಹೊಂದಬೇಕು ಎಂದು ಕಿವಿಮಾತು ಹೇಳಿದರು
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ನಾಗಲಿಂಗಪ್ಪ ಸುಳ್ಳದ, ಶಾಂತವ್ವ ಚಿಕ್ಕನರಗುಂದ, ನಾಸಿರ ಪೀರಾಜಾದೆ, ಯುವರಾಜ ಕಲಾಲ, ಬಿಪಿನ್ ಪಾಟೀಲ, ಶಿವಕುಮಾರ ನಾಯ್ಕರ್, ಬಸವರಾಜ ಸೂಡಿ, ಪ್ರಸನ್ನ ಪಂಡರಿ, ಬಿ ವಿ ಏಣಗಿ,ಡಾ ಸಂತೋಷ ಹುಬ್ಬಳ್ಳಿ, ಶ್ರೀಧರ ಲೋನಕರ,ಸವಿತಾ ಚಿಕ್ಕಣ್ಣವರ, ವಿನಾಯಕ ಮಿರಜಕರ, ಡಾ ನಾಗರತ್ನ ಕುರಡೇಕರ್.,ಡಾ ಸುಗುಣ ಡಿ ವಿ, ವಿನಾಯಕ ಮಿರಜಕರ, ಸೇರಿದಂತೆ ಕಾಲೇಜಿನ ಎಲ್ಲ ಬೋಧಕ,ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.