ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ
ಕಲಬುರಗಿ:ಜು.14: ನಗರದ ಸಂತ ಮೇರಿ ಸಭಾಂಗಣದಲ್ಲಿ ಸಮಗ್ರ ಕರ್ನಾಟಕ ಉಪಾಧ್ಯಾಯರ ಪ್ರಗತಿಪರ ಸಂಘದ ವತಿಯಿಂದ ಕಲಬುರಗಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿ ಟಾಪರ್ಸ್‍ಗಳ ಅಭಿನಂದನಾ ಸಮಾರಂಭವನ್ನು ಶಾಸಕ ಅಲ್ಲಮಪ್ರಭು ಪಾಟೀಲ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಕ್ರೈಸ್ತ ಧರ್ಮದ ಕಲಬುರಗಿ ಧರ್ಮಾಧ್ಯಕ್ಷ ಫಾದರ್ ರಾಬರ್ಟ್ ಮೈಕಲ್ ಮಿರಾಂಡಾ, ಸಂತ ಮೇರಿ ಚರ್ಚ್‍ನ ಪ್ರಧಾನ ಗುರು ಫಾ. ಜೋಸೆಫ್ ಪ್ರವೀಣ, ಸಮಗ್ರ ಕರ್ನಾಟಕ ಉಪಾಧ್ಯಾಯರ ಪ್ರಗತಿಪರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಸಾವಿತ್ರಿ ಎಸ್. ಪಾಟೀಲ, ಮಹೇಶ ಹೂಗಾರ, ಶಿವರಾಜ ಪಾಟೀಲ, ಶಾರದಾಮಣಿ ಪಾಟೀಲ, ಬಾಬುರಾವ ಕುಲಕರ್ಣಿ, ಧರ್ಮಣ್ಣ ಧನ್ನಿ, ಡಾ.ಭಾಗ್ಯಲಕ್ಷ್ಮೀ ರೆಡ್ಡಿ, ಸೇವಂತಾ ಚವ್ಹಾಣ, ಝಾಕೀರ ಕಪನೂರ, ವಿಜಯಶ್ರೀ ಹಿರೇಮಠ, ಶರಣಮ್ಮ ಜಮಾದಾರ, ಮಹಾಂತೇಶ ಹುಳಕುಂದ, ವರಲಕ್ಷ್ಮೀ, ತ್ರಿವೇಣಿ ಕಡಕೋಳ, ವಿದ್ಯಾವತಿ ಚವ್ಹಾಣ, ಮಹಿಬೂಬ ದೇವರಮನಿ ಸೇರಿದಂತೆ ಇತರರು ಇದ್ದರು.