ಕೆಸರು ಗದ್ದೆಯಾದ ರಸ್ತೆಗಳು
ಕರಜಗಿ:ಜು.14:ಅಫಜಲಪುರ ತಾಲೂಕಿನ ನಂದರ್ಗಾ ಗ್ರಾಮ ಪಂಚಾಯತ ವ್ಯಾಪ್ತಿಯ ಜೇವರ್ಗಿ (ಬಿ) ಗ್ರಾಮದ ರಸ್ತೆ ಗಳು. ಹದಗೆಟ್ಟು ಹೋಗಿದ್ದರಿಂದ ಜನರ ಜೀವನ ಅಸ್ತವ್ಯಸ್ತ ವಾಗುತ್ತಿದೆ.. ಮನೆಗೆ ಕುಡಿಯಲು ನೀರು ತರಬೇಕಾದರೆ ವಿದ್ಯಾರ್ಥಿಗಳು ಶಾಲೆಗೆ ಹೋಗಬೇಕಾದರೆ ಪ್ರತಿ ದಿನ ಜನರು ಕೆಸರು ಗದ್ದೆಯಲ್ಲಿ ನಡಿದಾಡುಕೊಂಡು ಹೋಗಬೇಕಾಗುತ್ತದೆ ಮತ್ತು ನೀರು ನಿಂತು ಸೊಳ್ಳೆಗಳು ಆಗುತ್ತಿವೆ ರಾತ್ರಿ ಮನೆಯಲ್ಲಿ ಮಲಗ ಬೇಕಾದರೆ ಬಹಳ ಕಷ್ಟವಾಗುತ್ತಿದೆ ಜಿಲ್ಲೆಯಲ್ಲಿ ಡೆಂಗ್ಯೂ ಮಲೇರಿಯಾ ಅಂತ ರೋಗಗಳು ಬರುತ್ತಿವೆ ದಯವಿಟ್ಟು ತಾಲೂಕು ಅಧಿಕಾರಿಗಳು ಇತ್ತಕಡೆ ಗಮನಹರಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿಕೊಳ್ಳುತ್ತಿದ್ದಾರೆ