ಅಂಧರ ಬಾಳಿಗೆ ಬೆಳಕು ಚೆಲ್ಲುವ ಕೆಲಸ ಮಾಡೋಣ ; ಅಲ್ಲಮಪ್ರಭು ಪಾಟೀಲ
ಕಲಬುರಗಿ ;ಜು.14: ಗದುಗಿನ ಪುಟ್ಟರಾಜ ಗವಾಯಿಗಳ ಹಾಗೆ ಕಲಬುರಗಿಯ ದತ್ತು ಅಗರವಾಲ ಅವರು ಅಂಧರಿಗೆ ಬೆಳಕಾಗಿದ್ದಾರೆ ಎಂದು ಶಾಸಕ ಅಲ್ಲಮಪ್ರಭು ಪಾಟೀಲ ಹೇಳಿದರು.
ನಗರ ಹೊರಹೊಲಯದ ಮಾದರಸನಳ್ಳಿ( ಕೋಬ್ರಾ ಕಾಲೋನಿ), ಜಿಡಿಎ ಲೇಔಟನಲ್ಲಿ ನೂತನವಾಗಿ ನಿರ್ಮಾಣಗೊಂಡ ಮಾತೋಶ್ರೀ ಅಂಬುಬಾಯಿ ಅಂಧ ಬಾಲಕಿಯರ ವಸತಿಯುತ ಶಾಲೆಯ ಹೊಸ ಕಟ್ಟಡ ಉದ್ಘಾಟನೆ ಸಮಾರಂಭ ಅಧ್ಯಕ್ಷತೆ ವಹಿಸಿ ಮತನಾಡಿದ ಅವರು, ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಬರೆದಿರುವ ಸಂವಿಧಾನದ ಫಲವಾಗಿ ಇಂದು ಎಲ್ಲಾ ಮಹಿಳೆಯರು ಶಿಕ್ಷಣ ಪಡೆಯುವುದಕ್ಕೆ ಸಾದ್ಯವಾಗುತ್ತಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಮುಖ್ಯ ಅತಿಥಿಯಾಗಿ ವಿಕಲಚೇತನರ ಹಕ್ಕುಗಳ ಅಧಿನಿಯಮ ರಾಜ್ಯ ಆಯುಕ್ತರಾದ ದಾಸ್ ಸೂರ್ಯವಂಶಿ ಆಗಮಿಸಿ ಮಾತನಾಡಿದ ಅವರು, ಅತಿಹೆಚ್ಚು ಅಂಗವಿಕಲರು ನಮ್ಮ ಭಾರತ ದೇಶದಲ್ಲಿ ಇದ್ದಾರೆ. ಶಿಕ್ಷಣ ಪಡೆದು ಹಲವಾರು ಕ್ಷೇತ್ರಗಳಲ್ಲಿ ಉನ್ನತ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
ದತ್ತು ಅಗರವಾಲ ಅವರು ಸಹ ಅಂಧರಾಗಿರುವುದರಿಂದ ಅವರ ನೋವು ಏನು ಎಂಬುದು ಅರಿತು ಅಂಧರಿಗಾಗಿ ತಮ್ಮ ತಾಯಿಯ ಹೆಸರಿನಲ್ಲಿ ಶಾಲೆಯ ಪ್ರಾರಂಭಿಸಿ ಇಂದು ಬೃಹತ್ ಗಾತ್ರದ ಸ್ವಂತ ಕಟ್ಟಡವನ್ನು ಅಂಧ ಮಕ್ಕಳ ಶಿಕ್ಷಣಕ್ಕಾಗಿ ನಿರ್ಮಾಣ ಮಾಡಿರುವುದು ಶ್ಲಾಘನೀಯ ಎಂದು ತಿಳಿಸಿದರು.
ವಿಶೇಷ ಅತಿಥಿಗಳಾಗಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನಮ್ ಅವರು ಆಗಮಿಸಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಪ್ರತಿವರ್ಷ ಸುಮಾರು 100 ಕ್ಕೂ ಹೆಚ್ಚು ಅಂಧ ಮಕ್ಕಳಿಗೆ ಶಿಕ್ಷಣ ಸಿಗುತ್ತಿದೆ ಅಂದರೆ, ಅದಕ್ಕೆ ದತ್ತು ಅಗರವಾಲ ಅವರ ಪರಿಶ್ರಮ ಬಹಳಷ್ಠಿದೆ.
ಅಂಧ ಮಕ್ಕಳ ನೂತನ ವಸತಿಯುತ ಶಾಲೆ ಕಟ್ಟಡ ಕಾರ್ಯಕ್ರಮದಲ್ಲಿ ಭಾಗವಹಿಸಿದ ನನಗೆ ತುಂಬಾ ಖುಷಿಯಾಗುತ್ತಿದೆ. ಮುಂದಿನ ದಿನಗಳಲ್ಲಿ ಸಮಯಾವಕಾಶ ಕಲ್ಪಿಸಿಕೊಂಡು ಶಾಲೆಗೆ ಆಗಮಿಸಿ ಮಕ್ಕಳ ಜೊತೆಗೆ ಸಂವಾದ ಮಾಡಲು ಪ್ರಯತ್ನಿಸುತ್ತೇನೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಮಾತೋಶ್ರೀ ಅಂಬುಬಾಯಿ ಅಂಧ ಮಕ್ಕಳ ಬಾಲಕಿಯರ ವಸತಿಯುತ ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ದತ್ತು ಅಗರವಾಲ ಸಭೆಯನ್ನುದ್ದೇಶಿಸಿ ಪ್ರಾಸ್ತಾವಿಕ ಮಾತನಾಡಿದ ಅವರು, ಅಂಧ ಮಕ್ಕಳಿಗಾಗಿ ದೊಡ್ಡ ಗಾತ್ರದ ಕಟ್ಟಡದಲ್ಲಿ ಸುಸಜ್ಜಿತವಾದ ಶಾಲೆ ನಿರ್ಮಾಣ ಮಾಡಲು ಬಹಳಷ್ಟು ದಾನಿಗಳ ಸಹಕಾರ ಮಾಡಿದ್ದಾರೆ ಅವರೆಲ್ಲರಿಗೂ ಅಭಾರಿಯಾಗಿದ್ದೇನೆ ಎಂದು ತಿಳಿಸಿದರು.
ಶಾಲಾ ಕಟ್ಟಡಕ್ಕೆ ಸಹಾಯಧನ ನೀಡಿದವರು.
ಡಾ. ವಸಂತರಾವ ಮೈಸೂರು, ಡಾ. ಸಿ. ಶಶಿಕಲಾ ಮೈಸೂರು, ಡೋನೆಟ್ ಕಾರ್ಟ್ ಅನೀಲ ರೆಡ್ಡಿ, ಮಳಖೆಡ ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್ ಮುಖ್ಯಸ್ಥರಾದ ಉದಯಕುಮಾರ ಪವಾರ, ಡಾ. ಶರಣಪ್ಪ ಕೀಣಗಿ, ಯಶವಂತ ಗುರುಕರ, ಬಿ.ಜಿ. ದಿವಾಕರ, ಭಾರತೀಯ ಜೀವಾ ಭೀಮಾ ನಿಗಮ (ಜಿ.ಜೆ.ಎಫ್). ದೇಣಿಗೆ ನೀಡಿದ್ದಾರೆ.
ನಮ್ಮ ಶಾಲೆಯಲ್ಲಿ ಶಿಕ್ಷಣ ಪಡೆದು ತಮ್ಮ ಮುಂದಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರು, ಮೈಸೂರು, ರಾಣೆಬೆನ್ನೂರು ಸೇರಿದಂತೆ ರಾಜ್ಯದ ನಾನಾಕಡೆ ವಿದ್ಯಾಭ್ಯಾಸವನ್ನು ಮಾಡುತ್ತಿರುವುದು ನನಗೆ ತುಂಬಾ
ಹೆಮ್ಮೆಯ ವಿಷಯವಾಗಿದೆ. ಬರುವ ದಿನಗಳಲ್ಲಿ ನಮ್ಮ ಶಾಲೆಯಲ್ಲಿ ಕಂಪ್ಯೂಟರ್ ತರಬೇತಿ ಸಹ ನಮ್ಮ ಮಕ್ಕಳಿಗೆ ನೀಡುವುದಕ್ಕೆ ಮುಂದಾಗಿದ್ದೇವೆ.