ಮಾನಸಿಕ, ದೈಹಿಕ ಆರೋಗ್ಯದಿಂದ ಆರೋಗ್ಯವಂತ ಸಮಾಜ ನಿರ್ಮಾಣ
ಸಂಜೆವಾಣಿ ನ್ಯೂಸ್
ಮೈಸೂರು: ಜು.14:- ಎಲ್ಲರೂ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಂಡರೆ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಅಭಿಪ್ರಾಯಪಟ್ಟರು.
ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ಇನ್‍ಸ್‍ಸ್ಟಿಟ್ಯೂಷನ್ ಆಫ್ ಎಂಜಿನಿಯರ್‍ಸ್ ಸಭಾಂಗಣದಲ್ಲಿ ಶನಿವಾರ ಅನ್ವೇಷಣಾ ಸೇವಾ ಟ್ರಸ್‍ಟ್ ವತಿಯಿಂದ ಆಯೋಜಿಸಿದ್ದ ವಿಶ್ವ ವೈದ್ಯರ ದಿನಾಚರಣೆ' ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವೈದ್ಯರು ತಮ್ಮ ಜೀವನವನ್ನು ಬಡವರು, ರೋಗಿಗಳ ಜೀವನಕ್ಕಾ?ಗಿ ಮುಡುಪಾಗಿಟ್ಟು ಸೇವೆ ಸಲ್ಲಿಸುತ್ತಾ?ರೆ. ಬೇರೆಯವರ ಆರೋಗ್ಯ ಕಾಪಾಡಲು ಶ್ರಮಿಸುತ್ತಾರೆ. ಆ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸುತ್ತಿದ್ದಾರೆ. ಸಮಾಜ ಆರೋಗ್ಯಕರವಾಗಿರ ಬೇಕಾದರೆ ಜನ ಆರೋಗ್ಯವಂತರಾಗಿರಬೇಕು. ದೈಹಿಕ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು. ಆಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಈ ಜವಾಬ್ದಾರಿಯನ್ನು ವೈದ್ಯರು ನಿಭಾಯಿಸುತ್ತಿದ್ದಾರೆ. ಆದರೆ ಸಾಮಾಜಿಕವಾಗಿರುವ ಬಡತನ, ನಿರುದ್ಯೋಗ ಸಮಸ್ಯೆ ಹೋಗಲಾಡಿಸುವ ಅನಿವಾರ್ಯತೆ ಇದೆ ಎಂದರು. ಈ ಹಿಂದೆ ಪ್ಲೇಗ್, ಕಾಲರ, ದಢಾರದಂತಹ ಸಾಂಕ್ರಮಿಕ ಕಾಯಿಲೆಗಳು ಸಮುದಾಯದ ತುಂಬಾ ವ್ಯಾಪಿಸುತ್ತಿದ್ದವು. ಇದೀಗ ಆ ರೋಗಗಳು ನಿಯಂತ್ರಣಕ್ಕೆ ಬಂದಿವೆ. ಆದರೆ, ವೈರಸ್‍ಗಳಿಂದ ಹಬ್ಬುವ ರೋಗಗಳು ಹೆಚ್ಚಾಗುತ್ತಿವೆ. ಬಿಪಿ, ಶುಗರ್ ಮಾತ್ರವಲ್ಲದೆ, ಜೀವನ ಶೈಲಿ, ಆಹಾರ ಪದ್ಧತಿಯಿಂದಲೂ ಸಾಕಷ್ಟು ಆರೋಗ್ಯ ಸಮಸ್ಯೆಯ ಬಾಧೆ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಕಾಲ ಕಾಲಕ್ಕೆ ತಪಾಸಣೆ ಮಾಡಿಸಿಕೊಂಡು ಆರೋಗ್ಯವಂತರಾಗಲು ಬದ್ಧರಾಗಬೇಕು ಎಂದು ಸಲಹೆ ನೀಡಿದರು. ಪ್ರತಿ ವರ್ಷ ಜು.1ರಂದು ವಿಶ್ವ ವೈದ್ಯರ ದಿನಾಚರಣೆ ಆಚರಿಸಲಾಗುತ್ತಿದ್ದು, ಆ ಮೂಲಕ ವೈದ್ಯಕೀಯ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿದ ಹಿರಿಯ ವೈದ್ಯರೂ ಹಾಗೂ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿಯೂ ಆದ ಡಾ.ಬಿ.ಸಿ.ರಾಯ್ ಅವರ ಸೇವೆಯನ್ನು ಸ್ಮರಿಸಲಾಗುತ್ತದೆ. ಡಾ.ಬಿ.ಸಿ.ರಾಯ್ ಅವರು ಜನಪ್ರಿಯ ವೈದ್ಯರಾಗಿದ್ದು, ಅವರನ್ನು ಕಾಂಗ್ರೆ?ಸ್ ಪಕ್ಷ ರಾಜಕೀಯ ಕ್ಷೇತ್ರಕ್ಕೆ ಕರೆತಂದು 12 ವರ್ಷಗಳ ಕಾಲ ಮುಖ್ಯಮಂತ್ರಿಹುದ್ದೆಯನ್ನು ನಿಭಾಯಿಸಲು ಅವಕಾಶ ನೀಡಿತ್ತು. ಪಶ್ಚಿ?ಮ ಬಂಗಾಳದ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುತ್ತಿದ್ದರೂ ಪ್ರತಿದಿನ ಸಂಜೆ ವೇಳೆ ಜನರಿಗೆ ಆರೋಗ್ಯ ಸೇವೆ ನೀಡುತ್ತಿದ್ದರು. ಅಧಿಕಾರವಿದ್ದರೂ ವೈದ್ಯವೃತ್ತಿ?ಯನ್ನು ಮರೆಯಲಿಲ್ಲ. ಅವರ ವಿಶಿಷ್ಠ ಸೇವೆಯಿಂದಾಗಿಪಶ್ಚಿಮ ಬಂಗಾಳದ ಶ್ರೇಷ್ಠ ಶಿಲ್ಪಿ’ ಎಂಬ ಬಿರುದು ಲಭಿಸಿದೆ. ಜು.1ರಂದೇ ಜನಿಸಿದ್ದ ರಾಯ್ ಅವರು ಕಾಕತಾಳಿಯ ಎಂಬಂತೆ ಜು.1ರಂದೇ ಮರಣ ಹೊಂದಿದರು. ಈ ಹಿನ್ನೆಲೆಯಲ್ಲಿ ಭಾರತದ ಎಲ್ಲ ವೈದ್ಯಕೀಯ ಸಂಘಟನೆಗಳು ಒಮ್ಮತದಿಂದ ಜು.1ರಂದೇ ಸೇರಿ ವಿಶ್ವವೈದ್ಯರ ದಿನ ಆಚರಿಸಲು ನಿರ್ಧರಿಸಿ ಗೌರವ ಸಮರ್ಪಿಸುತ್ತಿವೆ ಎಂದು ವಿವರಿಸಿದರು.
ಹಿರಿಯ ವೈದ್ಯರಾದ ಡಾ.ಮಾದಪ್ಪ, ಡಾ.ಹರ್ಷ ಬಸಪ್ಪ, ಡಾ.ಎಸ್.ರವಿಶಂಕರ್, ಡಾ.ಸಂದೀಪ್ ಹಾಗೂ ಡಾ.ಎಸ್.ಜಯಶ್ರೀ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪೆÇ್ರ.ಕೆ.ಎಂ.ಲೋಕನಾಥ್ ಅವರು `ವೈದ್ಯಶ್ರೀ’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ನಿರ್ದೇಶಕಿ ಪೆÇ್ರ.ಎಂ.ಪುಷ್ಪಾವತಿ ವಹಿಸಿದ್ದರು. ಅನ್ವೇಷಣಾ ಸೇವಾ ಟ್ರಸ್‍ಟ್‍ನ ಆರ್ಯ ಅಮರನಾಥ ರಾಜೇ ಅರಸ್, ಮೈಸೂರು ಮೆಡಿಕಲ್ ಕಾಲೇಜು ವಿಶ್ರಾಂತ ಡೀನ್ ಡಾ.ಎಚ್.ಹನುಮಂತಪ್ಪ, ಚುಟುಕು ಸಾಹಿತ್ಯ ಪರಿಷತ್‍ನ ಡಾ.ಎಂಜಿಆರ್ ಅರಸ್, ಅನ್ವೇಷಣಾ ಸೇವಾ ಟ್ರಸ್‍ಟ್ ಉಪಾಧ್ಯಕ್ಷ ಎಚ್‍ಎಂಟಿ ಲಿಂಗರಾಜೇ ಅರಸ್ ಸೇರಿದಂತೆ ಹಲವರು ಹಾಜರಿದ್ದರು.