ದೋಬಿಘಾಟ್ ಹಾಗಿ ಪರಿವರ್ತನೆಯಾಗುತ್ತಿರುವ ಜೋಡಿ ರಸ್ತೆ ಜಿಲ್ಲಾಸ್ಪತ್ರೆಯ ಮುಂಭಾಗ
ಸಂಜೆವಾಣಿ ವಾರ್ತೆ
ಚಾಮರಾಜನಗರ:ಜುಲೈ.14:- ಚಾಮರಾಜನಗರ ನಗರಸಭೆಯು ನಗರ ಪ್ರದೇಶವನ್ನು ಸುಂದರವಾದ ನಗರವೆಂದು ಬಂಣಿಸುತ್ತಿದೆ. ದೆಹಲಿಯಿಂದ ಸ್ವಚ್ಚತ ನಗರವೆಂದು ಪ್ರಮಾಣ ಪತ್ರವನ್ನು ಪಡೆದಿದೆ ಆದರೆ ಜಿಲ್ಲೆಯ ಪ್ರಮುಖ ರಸ್ತೆಗಳಲ್ಲಿ ಸ್ವಚ್ಚತೆಯ ಬಗ್ಗೆ ಕೇಳುವವರು ಯಾರು ಇಲ್ಲ ನಗರಸಭಾ ಸದಸ್ಯರು ಇದ್ದಾರೋ, ಇಲ್ಲವೋ ಸಾರ್ವಜನಿಕರಿಗೆ ಗೊಂದಲವಾಗಿದೆ. ಶಾಸಕರ ಮಾತು, ಪೌರಾಯುಕ್ತರ ಮಾತುಗಳಿಗೆ ಕ್ಯಾರೆ ಮಾಡದ ನಗರಸಭೆ ನೌಕರರು. ಇವರುಗಳು ಜಿಲ್ಲಾ ಕೇಂದ್ರದಲ್ಲಿ ಇರುವವರೆಗೂ ಜಿಲ್ಲೆಯು ಶುದ್ದವಾಗಲು ಸಾಧ್ಯವೇ.
ಒಂದೋ, ಆಥವಾ ಎರಡೋ ಬಡಾವಣೆಗಳಲ್ಲಿ ನಿಷ್ಠೆಯಿಂದ ನಗರಸಭಾ ಸದಸ್ಯರು ಸಾರ್ವಜನಿಕರ ಕುಂದು ಕೊರತೆಗಳಿಗೆ ಕೈ ಜೋಡಿಸುತ್ತಿದ್ದಾರೆ. ಇನ್ನು ಕೆಲವು ಸದಸ್ಯರುಗಳು ಸಭೆಗಳಿಗೆ, ಹಾಗೂ ಇ-ಸ್ವತ್ತು ಮಾಡಿಸಿಕೊಡುವ ಕೆಲಸಗಳಿಗೆ ಮುಂದಾಗಿದ್ದಾರೆ. ಇವರಿಗೆ ಸಾರ್ವಜನಿಕರ ಸೇವೆಗಳಿಗಿಂತ ಇವರ ಸ್ವಂತ ಸೇವೆಗಳೆ ಹೆಚ್ಚಾಗಿದೆ. ಜಿಲ್ಲಾ ಕೇಂದ್ರದಲ್ಲಿ ಮಾನ್ಯ ರಾಜ್ಯಪಾಲರಾಗಿ ಸೇವೆಸಲ್ಲಿದ್ದ ದಿವಂಗತ ಬಿ.ರಾಚಯ್ಯ ಅವರ ಹೆಸರು ಜೋಡಿರಸ್ತೆಗೆ ನಾಮಕರಣ ಮಾಡಲಾಗಿದೆ. ಸ್ವಚ್ಚತೆಯಿಂದ ನೋಡಿಕೊಳ್ಳುವುದು ನಗರಸಭೆಯ ಕರ್ತವ್ಯವಾಗಿದೆ.
ಜಿಲ್ಲಾಸ್ಪತ್ರೆಯ ಮುಂದೆ ಎಳನೀರಿನ ಬುಂಡೆಗಳು, ಹಾಗೂ ಇನ್ನೀತರೆ ವಸ್ತುಗಳು ಬಿಸಾಡಿ ಹೋಗುತ್ತಾರೆ. ಅದಲ್ಲದೇ ರಸ್ತೆಯ ಬದಿಯ ಕಬ್ಬಿಣದ ಕಂಬಿಗಳಿಗೆ ದೋಬಿಘಾಟ್ ನಲ್ಲಿ ಬಟ್ಟೆಗಳನ್ನು ಒಣಗಿಸಲು ಹಾಕುವ ಮಾದರಿಯಲ್ಲಿ ಹಾಕುತ್ತಾರೆ ಇದು ನಗರಸಭೆಯ ಅಧಿಕಾರಿಗಳಿಗೆ ಕಣ್ಣಿಗೆ ಬಿದ್ದಿಲ್ಲವೇ