ಕ್ಷೇತ್ರದ ಜನರ ಆಶೀರ್ವಾದವೇ ನನಗೆ ಶ್ರೀರಕ್ಷೆ.ಮಂತ್ರಿ ಸ್ಥಾನಕ್ಕಾಗಿ ಯಾರ ಹಿಂದೆಯೂ ಅಲೆದಾಡುವವನಲ್ಲ : ಶಾಸಕ ಲಕ್ಷ್ಮಣ ಸವದಿ
ಅಥಣಿ :ಜು.14: ಮಂತ್ರಿ ಸ್ಥಾನಕ್ಕಾಗಿ ಯಾರ ಹಿಂದೆಯೂ ನಾನು ಅಲೆದಾಡುವವನಲ್ಲ, ನಾನು ಅಧಿಕಾರದ ಮಹತ್ವಾಕಾಂಕ್ಷಿಯೂ ಅಲ್ಲ. ಆಯುಷ್ಯ ಅಂತಸ್ತು ಮತ್ತು ಐಶ್ವರ್ಯ ಶಾಶ್ವತವಲ್ಲ ಅಧಿಕಾರದಲ್ಲಿದ್ದಾಗ ಮಾಡಿದ ಕಾರ್ಯಗಳೇ ಶಾಶ್ವತ. ಜನರು ನನಗೆ ಆಯ್ಕೆ ಮಾಡಿದ್ದು ಪ್ರಾಮಾಣಿಕ ಸೇವೆ ಮಾಡಲಿಕ್ಕೆ ಕ್ಷೇತ್ರದ ಜನರ ಋಣ ತೀರಿಸುವ ಜವಾಬ್ದಾರಿ ನನ್ನ ಮೇಲಿದೆ. ಅಧಿಕಾರದಲ್ಲಿದ್ದಾಗ ಮತಕ್ಷೇತ್ರದಲ್ಲಿ ಜನರಿಗೆ ಅನುಕೂಲವಾಗುವ ಪ್ರಮುಖ ಯೋಜನೆಗಳನ್ನು ಅನುಷ್ಠಾನಗೊಳಿಸುವುದೇ ನನ್ನ ಮುಖ್ಯ ಗುರಿಯಾಗಿದೆ ಎಂದು ಶಾಸಕ ಲಕ್ಷ್ಮಣ ಸವದಿ ತಮ್ಮ ರಾಜಕೀಯ ವಿರೋಧಿಗಳಿಗೆ ಪರೋಕ್ಷವಾಗಿ ಟಾಂಗ ನೀಡಿದರು.
ಅವರು ಶನಿವಾರ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಹಾಗೂ ಪೌರಾಡಳಿತ ನಿರ್ದೇಶನಾಲಯದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಅಥಣಿ ಪಟ್ಟಣದ ನಿರಂತರ 24 ಗಂಟೆ ಕುಡಿಯುವ ನೀರು ಪೂರೈಕೆ ಯೋಜನೆಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಪೂಜ್ಯ ಸಿದ್ಧೇಶ್ವರ ಸ್ವಾಮೀಜಿಯವರ ಅನುಯಾಯಿಯಾದ ನಾನು ಅಧಿಕಾರಕ್ಕಿಂತ ಜನರ ಸೇವೆಯಲ್ಲಿಯೇ ಸಾರ್ಥಕತೆ ಕಂಡುಕೊಂಡವನು. ಹೀಗಾಗಿಯೇ ನಾನು ಟೀಕೆ ಅಥವಾ ಮಾತುಗಳಿಗೆ ಮಹತ್ವ ನೀಡದೇ ನಾವು ಮಾಡಿದ ಕಾರ್ಯಗಳೇ ಸಾಧನೆಗಳಾಗಬೇಕು ಎನ್ನುವದರಲ್ಲಿ ನಂಬಿಕೆ ಇಟ್ಟುಕೊಂಡಿರುವೆ. ಅಥಣಿಯ ಜನತೆ ಕಳೆದ 20 ವರ್ಷಗಳಿಂದ ಶಾಸಕನಾಗಿ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಿ ಕೊಟ್ಟಿದ್ದು, ಅಥಣಿ ಅಭಿವೃದ್ಧಿಗೆ ಜನಪರ ಮತ್ತು ಅಭಿವೃದ್ಧಿ ಪರ ಯೋಜನೆಗಳನ್ನು ಅನುಷ್ಠಾನ ಗೊಳಿಸುವ ಮೂಲಕ ಅಥಣಿ ಜನತೆಯ ಋಣ ತಿರಿಸುವ ಪ್ರಯತ್ನ ಮಾಡುವೆ ಎಂದರು.
ಪಟ್ಟಣದ ಜನಸಂಖ್ಯೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾದ ಪರಿಣಾಮ ಸದ್ಯಕ್ಕಿರುವ ವ್ಯವಸ್ಥೆಯಿಂದ ಕುಡಿಯುವ ನೀರನ್ನು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ ಈಗಾಗಲೇ ಪಟ್ಟಣದ ಜನಸಂಖ್ಯೆ ಹೆಚ್ಚಾಗಿದ್ದು, ನಿರಂತರವಾಗಿ ಕುಡಿಯುವ ನೀರು ಪೂರೈಕೆಗೆ ಅಮೃತ 2.0 ಈ ಯೋಜನೆಯ ಅನುಷ್ಠಾನ ಅನಿವಾರ್ಯವಾಗಿದೆ ಎಂದ ಅವರು ಸ್ವಾತಂತ್ರ್ಯೋತ್ಸವದ 75 ನೇ ವರ್ಷದ ಸಮಾರಂಭದಲ್ಲಿ ನಾನು ಸಂಕಲ್ಪ ಮಾಡಿದಂತೆ ಈ ಯೋಜನೆಗೆ ಚಾಲನೆ ನೀಡಿರುವೆ ಎಂದರು.
ಈ ಯೋಜನೆಯಡಿ 185 ಕಿಲೋ ಮೀಟರ ಉದ್ದದ ಪೈಪಲೈನ್ ಅಳವಡಿಸಿ, ಐದು ಸ್ಥಳಗಳಲ್ಲಿ ಓವ್ಹರ ಹೆಡ್ಡ ಟ್ಯಾಂಕ ನಿರ್ಮಿಸುವ ಮೂಲಕ 24 ಗಂಟೆಗಳ ಕಾಲ ಕುಡಿಯುವ ನೀರು ಪೂರೈಕೆ ಮಾಡಲಾಗುವುದು. ಇದೇ ಯೋಜನೆಯಡಿ ಅಥಣಿ ಪಟ್ಟಣದ ಜೊತೆಗೆ ಸುತ್ತಮುತ್ತಲಿನ 2 ಕಿಮೀ ವ್ಯಾಪ್ತಿಯಲ್ಲಿ ಬರುವ ತೋಟದ ಮನೆಗಳಿಗೂ ನೀರು ಪೂರೈಕೆ ಮಾಡಲಾಗುವುದು ಎಂದ ಅವರು ರಾಜ್ಯದ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳ ಸಹಕಾರದಿಂದ ಅಥಣಿ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಸು. 2000 ಕೋಟಿಗಳಷ್ಟು ಅನುದಾನ ಬಿಡುಗಡೆಗೊಳಿಸಿದ್ದು, ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಜನಪರ ಯೋಜನೆಗಳಿಗೆ ಅನುದಾನ ಬಿಡುಗಡೆಯಾಗಲಿದೆ ಎಂದು ಹೇಳಿದರು.
ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ 1365 ಕೋಟಿ, ಸತ್ತಿ ಮತ್ತು ದರೂರ ಸುತ್ತಮುತ್ತಲಿನ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಗೆ ಅಂದಾಜು 85 ಕೋಟಿ, ಅಥಣಿ ಜೋಡು ಕೆರೆಗಳ ಅಭಿವೃದ್ಧಿಗೆ 25 ಕೋಟಿ. ಪಶು ವೈದ್ಯಕೀಯ ಮಹಾವಿದ್ಯಾಲಯದ ಅಭಿವೃದ್ಧಿಗೆ ಹೆಚ್ಚುವರಿಯಾಗಿ 82 ಕೋಟಿ, ಅಥಣಿ ಹೊರ ವಲಯದಲ್ಲಿರುವ ಭಾಗೀರಥಿ ಹಳ್ಳ ಹಾಗೂ ನಾಲಾ ಅಭಿವೃದ್ಧಿಗಾಗಿ 10 ಕೋಟಿ ಸೇರಿದಂತೆ ಅಥಣಿ ಕ್ಷೇತ್ರದ ಅಭಿವೃದ್ಧಿಗೆ 2000 ಕೋಟಿ ಯಷ್ಟು ಅನುದಾನ ಬಿಡುಗಡೆಯಾಗಿದ್ದು, ಇದಕ್ಕಾಗಿ ಸಿಎo ಮತ್ತು ಡಿಸಿಎo ಇಬ್ಬರಿಗೂ ನಾನು ಚಿರಋಣಿ ಎಂದರು.
ಅಥಣಿ ಫುರಸಭೆಗೆ ಮುಖ್ಯಾಧಿಕಾರಿಯಾಗಿರುವ ಅಶೋಕ ಗುಡಿಮನಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗುಡಿಮನಿಯವರ ಹಿನ್ನೆಲೆ ಮತ್ತು ಕಾರ್ಯಶೈಲಿ ಗಮನಿಸಿ ನಾನು ಅಥಣಿ ಪುರಸಭೆಗೆ ಕಾರ್ಯನಿರ್ವಹಿಸಲು ಅವರನ್ನು ಒಂದು ವರ್ಷದ ಹಿಂದೆಯೇ ನಿಯುಕ್ತಿಗೊಳಿಸಿಕೊಂಡಿದ್ದು, ಅವರೊಂದಿಗೆ ಪುರಸಭೆಯ ಎಲ್ಲ 27 ಸದಸ್ಯರೂ ಕೂಡ ಸಹಕಾರ ನೀಡಬೇಕು ಎಂದ ಅವರು ಪುರಸಭೆಯ ವ್ಯಾಪ್ತಿಯಲ್ಲಿರುವ ಸರಕಾರಿ ಮತ್ತು ಸಾರ್ವಜನಿಕರಿಗಾಗಿ ಮೀಸಲಿಟ್ಟ ಉದ್ಯಾನವನ ಸ್ಥಳಗಳನ್ನು ಸಂರಕ್ಷಿಸಿಕೊಳ್ಳುವುದು ಕೂಡ ಪುರಸಭಾ ಸದಸ್ಯರ ಕರ್ತವ್ಯ ಎಂದು ಕಿವಿ ಮಾತು ಹೇಳಿದರು.
ಕುಡಿಯುವ ನೀರು ಯೋಜನೆ ಕುರಿತಾಗಿ ಇಲಾಖೆಯ ಉಪ ಕಾರ್ಯನಿರ್ವಾಹಕ ಅಭಿಯಂತರ ಆರ್.ಕೆ.ಉಮೇಶ ಮಾತನಾಡಿದರು, ಪುರಸಭಾ ಮುಖ್ಯಾಧಿಕಾರಿ ಅಶೋಕ ಗುಡಿಮನಿ ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಕಾಮಗಾರಿಯ ಗುತ್ತಿಗೆ ಪಡೆದುಕೊಂಡ ಸಾಂಗಲಿಯ ಸಹ್ಯಾದ್ರಿ ಕನ್ಸಟ್ರಕ್ಷನ್ಸ ಚಂದ್ರಕಾಂತ ನಲವಡೆ ಇವರು ಶಾಸಕ ಲಕ್ಷ್ಮಣ ಸವದಿಯವರನ್ನು ಮತ್ತು ಪುರಸಭಾ ಸದಸ್ಯರನ್ನು ಸತ್ಕರಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಪುರಸಭಾ ಸದಸ್ಯರಾದ ಬಿಬಿಜಾನ ತಾಂಬೋಳಿ, ಕಲ್ಲೇಶ ಮಡ್ಡಿ, ಸಂತೋಷ ಸಾವಡಕರ, ದತ್ತಾ ವಾಸ್ಟರ್, ಭುವನೇಶ್ವರಿ ಯಂಕಂಚಿ, ಶಾಂತಾ ಲೋಣಾರೆ, ಲತಾ ಭಜಂತ್ರಿ, ರಮೇಶ ಪವಾರ, ಬಸವರಾಜ ಪಾಟೀಲ. ಮಲ್ಲೇಶ ಹುದ್ದಾರ, ಮೃಣಾಲಿನಿ ದೇಶಪಾಂಡೆ, ರಿಯಾಜ ಸನದಿ, ರಾಜಶೇಖರ ಗುಡೋಡಗಿ, ವಿದ್ಯಾ ಬುಲಬುಲೆ, ಜುಲೇಖಾಬಿ ಖೇಮಲಾಪುರ, ವಿದ್ಯಾ ಹಳ್ಳದಮಳ, ಬಸವರಾಜ ನಾಯಿಕ, ಮುಖಂಡರಾದ ಶಿವಕುಮಾರ ಸವದಿ. ಆಸೀಫ್ ತಾಂಬೋಳಿ. ರಾಜು ಬುಲಬುಲೆ. ಶಿಲ್ಪಾ ತೊದಲಬಾಗಿ. ರೂಪಾ ಕಾಂಬಳೆ. ಸವಿತಾ ಕಾಂಬಳೆ. ಸೇರಿದಂತೆ ಅಥಣಿ ಪಟ್ಟಣದ ಅನೇಕ ಧುರೀಣರು, ಸರಕಾರಿ ಅಧಿಕಾರಿಗಳು ಸೇರಿದಂತೆ ಸಾವಿರಾರು ಜನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪುರಸಭೆ ಮುಖ್ಯ ಅಧಿಕಾರಿ ಅಶೋಕ ಗುಡಿಮನಿ ಸ್ವಾಗತಿಸಿದರು, ವಿಜಯ ಹುದ್ದಾರ ನಿರೂಪಿಸಿ, ವಂದಿಸಿದರು.
ಕ್ಷೇತ್ರದ ಜನರೇ ನನ್ನ ಪ್ರಭುಗಳು ನಿಮ್ಮ ಆಶೀರ್ವಾದವೇ ನನಗೆ ಶ್ರೀರಕ್ಷೆ. ಆಯುಷ್ಯ. ಅಧಿಕಾರಿ. ಅಂತಸ್ತು ಮತ್ತು ಐಶ್ವರ್ಯ ಶಾಶ್ವತವಲ್ಲ ಅಧಿಕಾರಿದಲ್ಲಿ ಇದ್ದಾಗ ಮಾಡಿದ ಕಾರ್ಯಗಳೇ ಶಾಶ್ವತ. ಜನರು ನನಗೆ ಆಯ್ಕೆ ಮಾಡಿದ್ದು ಪ್ರಾಮಾಣಿಕ ಸೇವೆ ಮಾಡಲಿಕ್ಕೆ ಕ್ಷೇತ್ರದ ಜನರ ಋಣ ತೀರಿಸುವ ಜವಾಬ್ದಾರಿ ನನ್ನ ಮೇಲಿದೆ ಕ್ಷೇತ್ರದ ಜನರು ನನಗೆ ಆಯ್ಕೆ ಮಾಡಿದ್ದು ಅದಕ್ಕಾಗಿ ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಅಥಣಿಯ ಜನತೆ ನನಗೆ ದಾಖಲೆಯ ಮತಗಳನ್ನು ಕೊಡುವ ಮೂಲಕ ಆಯ್ಕೆಗೆ ಸಹಕರಿಸಿದರು.
ಅಥಣಿ ಜನತೆಯ ಹಿತ ಚಿಂತನೆಗಾಗಿ ಹಗಲಿರುಳು ಶ್ರಮಿಸುತ್ತೀರುವ ಶಾಸಕ ಲಕ್ಷ್ಮಣ ಸವದಿ ಅವರು ಅಥಣಿ ಅಭಿವೃದ್ಧಿಗೆ ಹೊಸ ಹೊಸ ಯೋಜನೆಗಳನ್ನು ಅನುಷ್ಠಾನ ಗೊಳಿಸುತ್ತಿದ್ದಾರೆ. ಎಂದ ಅವರು ಲಕ್ಷ್ಮಣ ಸವದಿಯವರಂತಹ ಜನಪರ ಶಾಸಕರಿಗೆ ಅಥಣಿ ಕ್ಷೇತ್ರದ ಜನತೆ ಹಿಂದಿನಂತೆ ಮುಂದೆಯೂ ಸಹಕಾರ ನೀಡಬೇಕು.