ಲೋಕ ಅದಾಲತ್ : ಒಂದು ಕೋಟಿ ವಸೂಲಾತಿ : 2122 ಪ್ರಕರಣ ಇತ್ಯರ್ಥ
ಇಂಡಿ :ಜು.14:ಬ್ಯಾಂಕಿನ ಸಾಲ ಪ್ರಕರಣಗಳು ಸೇರಿದಂತೆ ಒಟ್ಟು ಒಂದು ಕೋಟಿ ರೂ ವಸೂಲಾತಿಯಾಗಿದೆ. ಮತ್ತು 2122 ಪ್ರಕರಣಗಳು ಇತ್ಯರ್ಥ ವಾಗಿವೆ ಎಂದು ದಿವಾನಿ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿ ತಾಲೂಕು ಕಾನೂನು ಸೇವಾ ಸಮಿತಿ ಈಶ್ವರ ಎಸ್.ಎಂ ಹೇಳಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಲೋಕ ಅದಾಲತ್ ಕಾರ್ಯಕ್ರಮದ ನಂತರ ಮಾತನಾಡಿದ ಅವರು
ಲೋಕ ಅದಾಲತ್‍ನಲ್ಲಿ 2122 ಪ್ರಕರಣಗಳು ಇತ್ಯರ್ಥ ಗೊಂಡಿವೆ. ಕಳೆದ ಬಾರಿ ನಡೆದ ಲೋಕ ಅದಾಲತ್‍ನಲ್ಲಿ 2486 ಪ್ರಕರಣಗಳು ಇತ್ಯರ್ಥ ಗೊಂಡಿದ್ದವು. ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ಕಾನೂನು ಪ್ರಕಾರ ರಾಜಿ ಆಗಬಹುದಾದ ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯಥ್ರ್ಯ ಪಡಿಸಿ ಇಬ್ಬರಿಗೂ ನ್ಯಾಯ ಒದಗಿಸಿದೆ ಎಂದು ಈಶ್ವರ ಎಸ್.ಎಂ ತಿಳಿಸಿದರು.
ಕ್ರಿಮಿನಲ್ ಪ್ರಕರಣಗಳು, ಕುಡಿದು ವಾಹನ ನಡೆಸಿದ ಪ್ರಕರಣ, ಸಾರ್ವಜನಿಕ ಸ್ಥಳದಲ್ಲಿ ಶಾಂತತೆ ಭಂಗ ಉಂಟು ಮಾಡಿದ್ದು, ಅಪಘಾತ ಪ್ರಕರಣ, ಸಿವಿಲ್ ಪಾಲು, ವಾಟ್ನಿ ದಾವೆ, ನಿರ್ಭಂದಕಾಜ್ಞೆ ದಾವೆ, ವಾಹನ ಅಪಘಾತ ಪರಿಹಾರ ದಂತಹ ಪ್ರಕರಣ ಇತ್ಯರ್ಥ ಪಡಿಸಿದೆ ಎಂದು ಈಶ್ವರ ಎಸ್.ಎಂ ತಿಳಿಸಿದರು.
ವಿಜಯಪುರದ ಎರಡನೆಯ ಹೆಚ್ಚುವರಿ ದಿವಾನಿ ನ್ಯಾಯಾಧೀಶ ಎಲ್.ಡಿ. ಹವಳೆ, ಹೆಚ್ಚುವರಿ ಹಿರಿಯ ಶ್ರೇಣಿ ನ್ಯಾಯಾಧೀಶ ಎಚ್.ಆರ್.ದೇವರಾಜು, ವಕೀಲರ ಸಂಘದ ಅಧ್ಯಕ್ಷ ಪಿ.ಬಿ.ಪಾಟೀಲ, ಕಾರ್ಯದರ್ಶಿ ಎಸ್.ಆರ್.ಬಿರಾದಾರ, ನ್ಯಾಯವಾದಿಗಳಾದ ಎಸ್.ಎಲ್.ನಿಂಬರಗಿಮಠ, ಬಿ.ಬಿ.ಕೊಟ್ಟಲಗಿ,ಎಂ.ಸಿ.ಬಿರಾದಾರ, ಎಸ್.ಐ. ಬಿರಾದಾರ, ಎಸ್.ಬಿ.ಬೂದಿಹಾಳ, ಸೋಮು ನಿಂಬರಗಿಮಠ,ಪ್ರವೀಣ ಕಾಂಬಳೆ,ಬಿ.ಕೆ.ಮಸಳಿ, ಎಂ.ಎಸ್.ಬಿರಾದಾರ, ಸುನೀಲ ಕುಲಕರ್ಣಿ, ಬಿ.ಬಿ.ಬಿರಾದಾರ, ಶ್ರೇಣಿಕರಾಜ ಪಾಟೀಲ, ಡಿ.ಎಸ್.ಮಡಿವಾಳರ, ಬಿ.ಸಿ.ತಾಂಬೆ, ಎಸ್.ಜಿ.ಹತ್ತರಕಿ, ಕೆ.ಪಿ.ಭೈರಜಿ, ಎಸ್.ಎಸ್.ರೆಬಿನಾಳ, ಎಸ್.ಎಲ್.ಬಟಗಿ, ಮತ್ತು ಸಿದ್ದು ಹಾವಳಗಿ ಮತ್ತಿತರಿದ್ದರು.