ಕಲೆ ಸಮಾಜಕ್ಕೆ ಮೆರಗು:ಡಾ.ಶರಣಪ್ರಕಾಶ ಪಾಟೀಲ
ಕಲಬುರಗಿ:ಜು.13:ಕಲೆಗಳು ಸಮಾಜಕ್ಕೆ ಮೆರಗು ನೀಡುತ್ತವೆ ಆ ನಿಟ್ಟಿನಲ್ಲಿ ಅವುಗಳ ಪಾತ್ರ ಹಿರಿದು ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಹಾಗೂ
ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರು ಡಾ.ಶರಣಪ್ರಕಾಶ ಪಾಟೀಲ ಹೇಳಿದರು
ನಗರದ ವೀರಶೈವ ಕಲ್ಯಾಣ ಮಂಟಪದಲಿ ್ಲ ಶನಿವಾರ “ಬಯಲ ಬೆಳಕು” ಪ್ರೊ. ವಿ.ಜಿ. ಅಂದಾನಿ ಅವರ 75ನೇ ವರ್ಷದ ವಜ್ರಮಹೋತ್ಸವ ಸಮಾರಂಭ ಅಂಗವಾಗಿ “ಬಯಲ ಬೆಳಕು” ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು ಸಂಸ್ಥೆಗಳನ್ನು ಶ್ರದ್ಧೆಯಿಂದ ಕಟ್ಟಬೇಕಾಗುವ ಅವಶ್ಯಕತೆ ಸಾರಿದ ಅವರು ಸಂಸ್ಥೆಗಳ ಸಂರಕ್ಷಣೆಯ ಹೊಣೆ ಮಹತ್ವದ್ದು ಎಂದರು ಅಂದಾನಿ ಅವರ ಅಭಿನಂದನಾ ಗ್ರಂಥವನ್ನು ಪ್ರಶಂಸಿದ ಅವರು ಈ ಕಾರ್ಯಕ್ರಮ ಸುತ್ತಾರ್ಹ ಎಂದರು.
ಕಲಬುರಗಿ ನೂತನ ಲೋಕಸಭಾ ಸದಸ್ಯ ರಾಧಾಕೃಷ್ಣ ದೊಡ್ಡಮನಿ ಅಭಿನಂದನಾ ಗ್ರಂಥ ಬಿಡುಗಡೆ ಮಾಡಿದರು.
“ಬಯಲು ಬೆಳಕು” ಅಭಿನಂದನಾ ಗ್ರಂಥ ಹಾಗೂ ಪ್ರೊ ವಿ ಜಿಅಂದಾನಿ ಕುರಿತು ಮಾಜಿ ಅಧ್ಯಕ್ಷರು, ಕರ್ನಾಟಕ ಲಲಿತಕಲಾ ಅಕಾಡೆಮಿ, ಡಾ. ಎಂ. ಎಸ್. ಮೂರ್ತಿ ಮಾತನಾಡಿದರು.
ಮೌಲ್ಯಧಾರಿತ ಹಾಗೂ ನೇತಿಕ ಪ್ರಜೆÐಯುಳ್ಳ ಕಲೆಗೆ ಘನತೆ ಬರುತ್ತದೆ. ಎಂ ದು ಅಭಿಪ್ರಾಯಪಟ್ಟರು. ಅಂದಾನಿ ಅವರು ಕಲಾ ವ್ಯಾಮೋಹಿ ಆಗಿದ್ದು ಕಲಾ ಕ್ಷೇತ್ರಕ್ಕೆ ಅಮೋಘವಾದ ಕೊಡುಗೆ ನೀಡುವಲ್ಲಿ ಅವಿರತ ಶ್ರಮಪಟ್ಟಿದ್ದಾರೆ. ಎಂದರು ಬಯಲು ಬೆಳಕು ಗ್ರಂಥಗಳಲ್ಲಿ ಮೂಡಿಬಂದಿರುವ ಲೇಖನಗಳು ಮಾರ್ಗದರ್ಶನವಾಗಿವೆ ಎಂದರು
ತೆಲಂಗಾಣ ರಾಜ್ಯ ಎಂ.ಎಲ್.ಸಿ. ಸುರಭಿ ವಾಣಿ ದೇವಿ ಅಂದಾನಿ ಸಾಧನೆ ಪ್ರಶಂಸಿದರು ವೇದಿಕೆ ಮೇಲೆ ದಕ್ಷಿಣ ಮತಕ್ಷೇತ್ರ ಶಾಸಕ ಅಲ್ಲಮಪ್ರಭು ಪಾಟೀಲ, ದಿ ಐಡಿಯಲ್ ಫೈನ್ ಆರ್ಟ ಸಂಸ್ಥೆಯ ಅಧ್ಯಕ್ಷ ರಾಜಶೇಖರ ಪಾಟೀಲ, ಗೌತಮ ಅಂದಾನಿ ಇದ್ದರು.
ಸಮಾರಂಭದಲ್ಲಿ ಹಿರಿಯ ಚಿತ್ರಕಲಾವಿದ ಡಾ ಜೆಎಸ್ ಖಂಡೇರಾವ ಹಾಗೂ ಕಲಾ ಪೋಷಕ ಶರಣ್ಣಪ್ಪ ಅವರನ್ನು ಸನ್ಮಾನಿಸಲಾಯಿತು.
ನಾಡಗೀತೆ ಹಾಗೂ ಸ್ವಾಗತಗೀತೆ ವರ್ಣಾ ಕಿರಣ ಪ್ರಸುತ್ತಪಡಿಸಿದರು. ವರ್uಸಿಂಧು ತಂಡದವರು ಭರತನಾಟ್ಯ ಪ್ರದರ್ಶಿಸಿದರು. ಗಣ್ಯರಿಗೆ ಡೊಳ್ಳಿನ ಕುಣಿತದೊಂದಿಗೆ ವೇದಿಕೆಗೆ ಬರಮಾಡಿಕೊಳ್ಳಲಾಯಿತು. ಡಾ ಸತೀಶ ವಲ್ಲೆಪೂರೆ ಸ್ವಾಗತಿಸಿದರು. ಡಾ ಕಾಶಿನಾಥ ಡಿ ಪ್ರಾಸ್ತಾವಿಕ ನುಡುಗಳನ್ನಾಡಿದರು. ಮಹಿಪಾಲರೆಡ್ಡಿ ಮುನ್ನೂರ ನಿರೂಪಿಸಿದರು.ಟಿ.ದೇವೆಂದ್ರಪ್ಪ ವಂದಿಸಿದರು.
ಚಿತ್ರಕಲಾ ಸ್ಪರ್ಧೆ ವಿಜೇತರು 5ರಿಂದ 7 ನೇತರಗತಿ ಸೇಡಂ ತಾಲ್ಲೂಕಿನ ಆದರ್ಶ ವಿದ್ಯಾಲಯ ಗಂಗೋತ್ರಿ ಮಲ್ಲಿಕಾರ್ಜುನ, ಕಲಬುರಗಿ ಎನ್ ವಿ ಆಕ್ಟ್ ಇಂಟರನ್ಯಾಷನಲ್ ಶಾಲೆ ಸಂಜನಾ ಮನ್ನೇರಿ, ಕಲಬುರಗಿ ಎಸ್ ಬಿಆರ್ ಸೃಜನ ಎಂ ನರೋಣ.
8 ರೀದ10ನೇತರಗತಿ ಚಿತ್ತಾಪುರ ತಾಲ್ಲೂಕಿನ ಎಂಡಿಆರೆಸ್ ಶಿವಕುಮಾರ, ಕಲಬುರಗಿ ಎಸ್ ಆರ್ ಎನ್ ಮೆಹತಾ ಸಿಬಿಎಸ್ ಶಾಲೆ ವಿನಾಯಕ ಬಿ.ಕಲಬುರಗಿ ಆರ್ಯನ್ ಇಂಗ್ಲೀಷ ಮಾಧ್ಯಮ ಶಾಲೆ ವಾತ್ಸಲ್ಯ ಕೆ
11 ಮತ್ತು 12 ತರಗತಿ ಕಲಬುರಗಿ ಎಸ್ ಬಿಆರ್ ಪಿಯು ಕಾಲೇಜ ಅದೀತಿ
ರಾಜ್ಯ ಮಟ್ಟದ ಚಿತ್ರಕಲಾ ಮಹಾವಿದ್ಯಾಲಯ ವಿದ್ಯಾರ್ಥಿಗಳು ಚಿತ್ರಕಲಾ ಸ್ಪರ್ಧೆ ಪ್ರಶಸ್ತಿವಿಜೇತರು ಗದಗ ವಿಜಯ ಕಾಲೇಜ ಆಫ್ ಫೈನ್ ಆರ್ಟ ಕೌಶಿಕ ಹೆಗಡೆ, ದಾವಣಗೆರೆ ವಿಶ್ವವಿದ್ಯಾಲಯ ಕಾಲೇಜು ಆಫ್ ವಿಜುವಲ್ ಆರ್ಟ ಐಶ್ವರ್ಯ ಎಸ್ ಇಳಗೆ. ಕಲಬುರಗಿ ಎಂ.ಎಂ.ಕೆ ಕಾಲೇಜ ಆಫ್ ವಿಜುವಲ್ ಆರ್ಟ ಸಿದ್ದಾರೆಡ್ಡಿ
ಸಮಾಧನಕರ ಬಹುಮಾನ
ಕಲಬುರಗಿ ಎಂ.ಎಂ.ಕೆ ಕಾಲೇಜ ಆಫ್ ವಿಜುವಲ್ ಆರ್ಟ ವೆಂಕಟೇಶ ಡಿ ತೇಲಕರ ಹಾಗೂ ಅಕ್ಷತಾ ಬೆಳಗಾಂವಕರ್
ಹಿರಿಯ ಚಿತ್ರಕಲಾವಿದರು, ಸಾಹಿತಿಗಳು, ಕಾಲೇಜಿನ ಸಿಬ್ಬಂದಿವರ್ಗದವರು, ಅಂದಾನಿ ಪರಿವಾರದವರು ಹಾಗೂ ಬಳಗದವರು, ಸಮಾಜದ ಗಣ್ಯವಕ್ತಿಗಳು ಮಾಜಿ ವಿದ್ಯಾರ್ಥಿಗಳು ಮುಂತಾದವರು ಇದ್ದರು.