ಮಟಕಾ ನಂಬರ್ ಬರೆದುಕೊಳ್ಳುತ್ತಿದ್ದ ವ್ಯಕ್ತಿ ಬಂಧನ
ಕಲಬುರಗಿ,ಜು.13-ನಗರದ ಆಳಂದ ಚೆಕ್‍ಪೋಸ್ಟ್ ಹತ್ತಿರದ ಕಲ್ಯಾಣ ಮಂಟಪ ಬಳಿ ಮಟಕಾ ನಂಬರ್ ಬರೆದುಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಿಸಿಬಿ ಘಟಕದ ಪಿಎಸ್‍ಐ ಶಿವಪ್ಪ, ಸಿಬ್ಬಂದಿಗಳಾದ ಯಲ್ಲಪ್ಪ, ಅಶೋಕ ಕಟಕೆ, ನಾಗರಾಜ ಮತ್ತು ಸುನೀಲ ಅವರು ದಾಳಿ ನಡೆಸಿ ಆಳಂದ ತಾಲ್ಲೂಕಿನ ಗೋಳಾ (ಬಿ) ಗ್ರಾಮದ ಅಭಿಷೇಕ ರಾಜಶೇಖರ ಉಣ್ಣದ (30) ಎಂಬಾತನನ್ನು ಬಂಧಿಸಿ 8,530 ರೂ.ನಗದು, ಮಟಕಾ ಚೀಟಿ ಮತ್ತು ಒಂದು ಬಾಲ್‍ಪೆನ್ ಜಪ್ತಿ ಮಾಡಿದ್ದಾರೆ. ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್‍ಗೆ ಬೆಂಕಿ
ನಗರದ ಸಿದ್ದೇಶ್ವರ ಕಾಲೋನಿಯಲ್ಲಿರುವ ಅಂಭಾ ಭವಾನಿ ದೇವಸ್ಥಾನದ ಎದುರಿಗೆ ಲಾಕ್ ಮಾಡಿ ಇರಿಸಿದ್ದ ಮೋಟರ್ ಸೈಕಲ್‍ಗೆ ಬೆಂಕಿ ಹಚ್ಚಿ ಸುಟ್ಟು ಹಾಕಲಾಗಿದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕರಾದ ವೀರೇಶ ಶಿವಪುತ್ರಯ್ಯ ಸ್ವಾಮಿ ಹಿರೇಮಠ ಅವರು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ದೇವಸ್ಥಾನದ ಸಿಸಿಟಿವಿ ಫುಟೇಜ್ ಪರಿಶೀಲಿಸಿ ನೋಡಿದಾಗ ಒಬ್ಬ ಅಪರಿಚಿತ ಮಹಿಳೆ ಮೋಟಾರ್ ಸೈಕಲ್‍ಗೆ ಬೆಂಕಿ ಹಚ್ಚಿ ಹೋಗಿದ್ದು ಕಂಡು ಬಂದಿದ್ದು, ಮಹಿಳೆಯನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದ್ದಾರೆ.