ಮನೆ ಬೀಗ ಮುರಿದು 65 ಗ್ರಾಂ.ಚಿನ್ನಾಭರಣ ಕಳವು
ಕಲಬುರಗಿ,ಜು.13-ಮನೆಯ ಗೇಟಿಗೆ ಹಾಕಿದ್ದ ಬೀಗ ಮುರಿದು ಮನೆಯೊಳಗೆ ನುಸುಳಿದ ಕಳ್ಳರು ಅಲಮಾರಿಯಲ್ಲಿಟ್ಟಿದ್ದ 1.45 ಲಕ್ಷ ರೂ.ಮೊತ್ತದ 65 ಗ್ರಾಂ.ಚಿನ್ನಾಭರಣ ಕಳವು ಮಾಡಿಕೊಂಡು ಹೋಗಿರುವ ಘಟನೆ ಇಲ್ಲಿನ ಮಿಲ್ಲತ್ ನಗರದಲ್ಲಿ ನಡೆದಿದೆ.
ಸೈಯದ್ ಉಸ್ಮಾನ್ ಎಂಬುವವರ ಮನೆ ಬೀಗ ಮುರಿದು ಚಿನ್ನಾಭರಣ ದೋಚಿಕೊಂಡು ಹೋಗಲಾಗಿದೆ.
ಇವರು ಮನೆಗೆ ಬೀಗ ಹಾಕಿಕೊಂಡು ವಿದ್ಯಾನಗರದಲ್ಲಿರುವ ಮಾವನ ಮನೆಗೆ ಹೋದಾಗ ಕಳ್ಳರು ಮನೆಯ ಗೇಟಿನ ಬೀಗ ಮುರಿದು ಮನೆಯೊಳಗ ನುಸುಳಿ ಅಲಮಾರಿಯಲ್ಲಿದ್ದ 20 ಸಾವಿರ ರೂ.ಮೌಲ್ಯದ 10 ಗ್ರಾಂ.ಬಂಗಾರದ ಹಳೆಯ ಲಾಕೇಟ್, 80 ಸಾವಿರ ರೂ.ಮೌಲ್ಯದ 5 ಗ್ರಾಂ.ಬಂಗಾರದ 4 ಸುತ್ತುಂಗರಗಳು, 45 ಸಾವಿರ ರೂ.ಮೌಲ್ಯದ 35 ಗ್ರಾಂ.ಬಂಗಾರದ ಹಳೆಯ ನೆಕ್ಲೆಸ್ ಸೇರಿ 1.45 ಲಕ್ಷ ರೂ.ಮೌಲ್ಯದ 65 ಗ್ರಾಂ.ಬಂಗಾರದ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ.
ಈ ಸಂಬಂಧ ಸೈಯದ್ ಉಸ್ಮಾನ್ ಅವರು ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.