33 ಚೀಲ ಪಡಿತರ ಅಕ್ಕಿ ಜಪ್ತಿ
ಕಲಬುರಗಿ,ಜು.13-ನಗರದ ನೆಹರು ಗಂಜ್‍ನ ಎಪಿಎಂಸಿಯ ಅಂಗಡಿಯೊಂದರಲ್ಲಿ ಪಡಿತರ ವಿತರಣೆಗೆ ಸೇರಿದ ಅಕ್ಕಿಯನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡಲು ಸಂಗ್ರಹಿಸಿಡಲಾಗಿದೆ ಎಂಬ ಮಾಹಿತಿ ಮೇಲೆ ಆಹಾರ ನಿರೀಕ್ಷಕರಾದ ವಿದ್ಯಾಶ್ರೀ ಸಂದೀಪ ಪಾಟೀಲ ಅವರು, ಚೌಕ್ ಪೊಲೀಸ್ ಠಾಣೆಯ ಎಎಸ್‍ಐ ಥಾವರು, ಸಿಬ್ಬಂದಿ ಜಗನ್ನಾಥ ಮತ್ತು ಪಂಚರೊಂದಿಗೆ ದಾಳಿ ನಡೆಸಿ 43,650 ರೂ.ಮೊತ್ತದ 30 ಕೆ.ಜಿ.ತೂಕದ 33 ಚೀಲ ಅಕ್ಕಿ ಜಪ್ತಿ ಮಾಡಿದ್ದಾರೆ.
ಸಾರ್ವಜನಿಕ ಪಡಿತರ ವಿತರಣೆಗೆ ಸೇರಿದ ಅಕ್ಕಿ ಖರೀದಿಸಿ ಕಾಳಸಂತೆಯಲ್ಲಿ ಮಾರಾಟ ಮಾಡಲು ದಾಸ್ತಾನು ಮಾಡಿದ್ದು, ಪತ್ತೆಯಾದ ಹಿನ್ನೆಯಲ್ಲಿ ಅಂಗಡಿ ಮಾಲಿಕ ನಾಗಯ್ಯ ಗಂಗಾಧರ ಮಠಪತಿ ವಿರುದ್ಧ ಚೌಕ್ ಪೊಲೀಸ್ ಠಾಣೆಯಲ್ಲಿ ಅವಶ್ಯಕ ವಸ್ತುಗಳ ಕಾಯ್ದೆ 1955 ಕಲಂ 3 ಮತ್ತು 7 ಈ.ಸಿ.ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ತನಿಖೆ ನಡೆದಿದೆ.