ಕಾಯಕ ರತ್ನ ಪ್ರಶಸ್ತಿಗೆ ಆಯ್ಕೆಯಾದ ಡಾ ಗಂಗಾಂಬಿಕಾ ಅಕ್ಕನವರಿಗೆ ಅಧಿಕೃತ ಅವ್ಹಾನ
ಬೀದರ:ಜು.13:ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ತು ಪ್ರತಿವರ್ಷ ಕೊಡಮಾಡುವ ಕಾಯಕ ರತ್ನ ಪ್ರಶಸ್ತಿ ಯನ್ನು ಸದರಿ ಸಾಲಿನಲ್ಲಿ ಜಿಲ್ಲೆಯ ಪರಮಪೂಜ್ಯ ಡಾ ಅಕ್ಕ ಗಂಗಾಂಬಿಕೆ ಅಕ್ಕನವರಿಗೆ ಕೊಡಲು ನಿರ್ಣಯಿಸಿದ್ದು, ಅವರ ಬಸವ ಗಿರಿ ತಾಣಕ್ಕೆತೆರಳಿ ಆತ್ಮೀಯವಾದ ಅಧಿಕೃತ ಆಮಂತ್ರಣ ಪತ್ರ ಹಾಗೂ ಶಾಲು, ಹಾರ ಹಾಕಿ ಗೌರವಿಸಿ ಆಮಂತ್ರಣ ನೀಡಿದೆ.
ಅಕ್ಕ ಬಸವ ಕನ್ನಡ ಸೇವೆ ಮಾಡುತ್ತ ಜಿಲ್ಲೆಯ ಜನ ಸಾಮಾನ್ಯರ ಪೂಜ್ಯ ರಾಗಿದ್ದು, ತಮ್ಮ ಎಡಬಿಡದ ಕಾಯಕ ಜೊತೆಗೆ ಬಸವ ಸೇವೆ ಒಂದು ಸ್ಮರಣೀಯ ಎಂದು ಬಾಬು ದಾನಿ ಸಂಯೋಜಕ ರು ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾದ್ಯಕ್ಷರಾದ ಕಲಾಲ ದೇವಿಪ್ರಸಾದ ಸಹ ಮಾತನಾಡಿ ಅಕ್ಕನವರ ನಿರಂತರ ಸೇವೆ ಶಿಕ್ಷಕ ಬಳಗಕ್ಕೆ ಒಂದು ಮಾದರಿ. ಪ್ರದಾನ ಕಾರ್ಯದರ್ಶಿ ಗಳಾಗ ತಾಳಿಕೋಟಿ ರಫೀಕ್ ಅಹ್ಮದ್ ಮಾತನಾಡಿ ಅಕ್ಕನವರ ಉಪದೇಶದಿಂದ ಮೂಢ ನಂಬಿಕೆ ತೊಲಗಿ ವೈಚಾರಿಕತೆ ನೆಲೆಗೊಳ್ಳಲು ಸಾಧ್ಯವಾಗಿದೆ. ಇವರ ಮಾರ್ಗದರ್ಶನ ಇಂದಿನ ಯುವ ಪೀಳಿಗೆಯ ಭವಿಷ್ಯ ರೂಪಿಸಲು ಸಹಕಾರಿ ಎಂದರು.
ಜಿಲ್ಲಾ ಕ.ಸಾ.ಪ. ಅಧ್ಯಕ್ಷ ರಾದ ಸುರೇಶ ಚನ್ನಶಟ್ಟಿ ಮಾತನಾಡಿ ಅಕ್ಕನವರು ಸಾಹಿತಿಗಳಾಗಿ, ವಿಚಾರವಂತರಾಗಿ, ಸಮಸಮಾಜ ಕಟ್ಟುವಲ್ಲಿ ಇವರ ಸೇವೆ ನಮಗೆಲ್ಲರಿಗೊಂದು ದಿಗ್ಧರ್ಶನ. ಇಂದಿ ಕಲುಷಿತ ವಾದ ವಾತಾವರಣದಲ್ಲಿ, ಪಾಶ್ಚಾತ್ಯ ಸಂಸ್ಕøತಿ ಯಲ್ಲಿ , ಕನ್ನಡ ಸಂಸ್ಕೃತಿ ಪರಂಪರೆ ನಲುಗುತ್ತಿರುವ ಸಂದರ್ಭದಲ್ಲಿ ಅಕ್ಕನವರ ಸಂದೇಶ ಪ್ರಸ್ತುತ ವಾಗಿದೆ ಎಂದರು.
ಪೂಜ್ಯ ಅಕ್ಕನವರು ಆಶೀರ್ವಚನ ನೀಡಿ ನಿಮ್ಮೆಲ್ಲರ ಸೇವೆ ಸಹ ಅಪರೂಪ, ಎಲ್ಲರೂ ಸೇರಿ ನಮ್ಮ ಭವ್ಯವಾದ ಸಂಸ್ಕೃತಿ ಬೆಳೆಸೋಣ ಎಂದರು. ಶಿವಶಂಕರ ಟೋಕರೆ ನಿರೂಪಣೆ ಮಾಡಿದರೆ, ಓಂಕಾರ ಬಿರಾದಾರ ಸ್ವಾಗತಿಸಿದರೆ, ಸಿದ್ಧಾರೂಢ ಭಾಲ್ಕೆ ವಂದಿಸಿದರು.