ಕೆರೆಯಲ್ಲಿ ಮುಳುಗಿ ಕುರಿಗಾಹಿ ಸಾವು :ಮೂರುದಿನಗಳ ಕಾರ್ಯಾಚರಣೆ ಬಳಿಕ ಶವಪತ್ತೆ
ಆಳಂದ: ಜು.13:ತಾಲೂಕಿನ ನರೋಣಾ ಪೊಲೀಸ್ ಠಾಣೆ ವ್ಯಾಪ್ತಿಯ ಮುನ್ನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಸಣ್ಣ ಕೆರೆಯಲ್ಲಿ ಕುರಿಗಾಹಿ ಯುವಕನೋರ್ವ ಮೃತಪಟ್ಟ ಘಟನೆ ನಡೆದಿದೆ.
ಮಲ್ಲಪ್ಪ ಶಾಂತಪ್ಪಾ ಪೂಜಾರಿ (25) ಎಂಬುವ ಕುರಿಗಾಹಿಯೇ ಕೆರೆಯ ನೀರಿಗಿಳಿದ ಮೇಲೆ ಬಾರದೇ ಮೃತಪಟ್ಟಿದ್ದಾನೆ ಎಂದು ಪ್ರತ್ಯೇಕ್ಷದರ್ಶಿಗಳು ಹೇಳಿಕೊಂಡಿದ್ದಾರೆ.
ಬುಧವಾರ ಸಂಜೆ ವೇಳೆ ಕುರಿಯೊಂದಿಗೆ ಮನೆಗೆ ಬರುವಾಗ ಹತ್ತಿರದಲ್ಲೇ ಇರುವ ಕೆರೆಯ ನೀರಿಗಿಳಿದಿದ್ದಾನೆ. ನೀರಿನೊಳಗೆ ಹೋದ ಸುದ್ದಿ ಅರಿತು ಹತ್ತಿರದಲ್ಲೇ ಇದ್ದ ಮೃತನ ಸೋಹದರ ಸೇರಿ ನೆರೆಹೊರೆಯುವರ ಕಣ್ಣು ಎದುರಲ್ಲೇ ನೋಡು ನೋಡುತ್ತಿದ್ದಂತೆ ಮುಳಗಿದ್ದಾನೆ ಹೊರತೆಗೆಯಲಾಗದೇ ತಕ್ಷಣಕ್ಕೆ ಸಹಾಯಕ್ಕಾಗಿ ಅಗ್ನಿಶ್ಯಾಮಕ ಸಿಬ್ಬಂದಿಗಳನ್ನು ಕರೆಸಿದ್ದಾರೆ. ಮರುದಿನ ಗುರುವಾರ ಕಲಬುರಗಿಯ ಅಗ್ನಿಶ್ಯಾಮಕದಳ ಸಿಬ್ಬಂದಿಗಳು ಕಾರ್ಯಾಚರಣೆ ಕೈಗೊಂಡರು ಶವಪತ್ತೆಯಾಗಿರಿಲ್ಲ. ಆದರೆ ಶುಕ್ರವಾರ ಮಧ್ಯಾಹ್ನ ವೇಳೆ ಕರೆಸಿದ ಮಿನಿಗಾರರು ಮತ್ತು ಅಗ್ನಿಶ್ಯಾಮಕ ಸಿಬ್ಬಂದಿಗಳ ಜಂಟಿ ಕಾರ್ಯಾಚರಣೆ ಕೈಗೊಂಡು ಮೃತನ ಶವ ನೀರಿನಿಂದ ಹೊರತೆಗೆದಿದ್ದಾರೆ. ಮಗನ ಶವ ನೋಡಿ ಮೃತನ ಕುಟುಂಬಸ್ಥರ ಅಕ್ರಮಂದನ ಮುಗಿಲು ಮುಟ್ಟುವಂತ್ತಿತ್ತು.
ಈ ಕುರಿತು ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತನ ಕುಟುಂಬಕ್ಕೆ ಸರ್ಕಾರ ಪರಿಹಾರ ಒದಗಿಸಬೇಕು ಎಂದು ರೈತ ಸಂಘದ ತಾಲೂಕು ಕಾರ್ಯಾಧ್ಯಕ್ಷ ಸಿದ್ಧು ವೇದಶೆಟ್ಟಿ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.