ದೇಶಾಭಿಮಾನವೆಂಬುದು ತಾಳಿಕೋಟೆಯಲ್ಲಿಯೂ ಇದೆ:ಸಿದ್ದಲಿಂಗಶ್ರೀ
ತಾಳಿಕೋಟೆ:ಜು.13:ಬ್ರೀಟಿಷರ ಆಳ್ವಿಕೆಯನ್ನು ದಿಕ್ಕರಿಸಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಯೋಧರು ಅಂದು ತಾಳಿಕೋಟೆಯಲ್ಲಿದ್ದವರು ತಮ್ಮ ದೀರತನದಲ್ಲಿ ಹೋರಾಟ ಮಾಡಿ ಸ್ವಾತಂತ್ರ್ಯ ತಂದುಕೊಡುವದರಲ್ಲಿ ಯಶಸ್ವಿಯಾಗಿದ್ದ ತಾಳಿಕೋಟೆಯ ಶ್ರೀಮಂತ ಮನೆತನದ ದಿ.ಶಿವಲಿಂಗಪ್ಪ ಸಾಲಂಕಿ ಅವರೊಬ್ಬರು ಸಹ ಭಾಗವಹಿಸಿದ್ದರೆಂಬ ವಾಡಿಕೆ ಇನ್ನೂ ಈ ಭಾಗದಲ್ಲಿ ಜೀವಂತವಿದೆ ಎಂದು ಶ್ರೀ ಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಶ್ರೀ ಸಿದ್ದಲಿಂಗ ದೇವರು ನುಡಿದರು.
ಶುಕ್ರವಾರರಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಭವನದಲ್ಲಿ ಸ್ವಾತಂತ್ರ್ಯ ಯೋಧ ದಿ.ಶಿವಲಿಂಗಪ್ಪ ಸಾಲಂಕಿ ಅವರ ಮೊಮ್ಮಗ ಸಿದ್ರಾಮ ಸುಭಾಸ ಸಾಲಂಕಿ ಅವರ ಧರ್ಮ ಪತ್ನಿ ಸೌ.ದಾನೇಶ್ವರಿ ಇವರ ಸೀಮಂತ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶಿರ್ವದಿಸಿ ಮಾತನಾಡುತ್ತಿದ್ದ ಅವರು ಸ್ವಾತಂತ್ರ್ಯ ದೊರೆತ ಬ್ರೀಟಿಷರ ಕಾಲಾವದಿ ಮುಕ್ತಾಯದಲ್ಲಿಯೇ ಆರೋಗ್ಯವೇ ಭಾಗ್ಯವೆಂಬುದನ್ನು ಅರೀತ ಅಂದಿನ ಸ್ವಾತಂತ್ರ್ಯ ಯೋಧ ದಿ.ಶಿವಲಿಂಗಪ್ಪ ಸಾಲಂಕಿ ಅವರು ಚಿಕ್ಕದಾದ ಒಂದು ಔಷಧ ವ್ಯಾಪಾರವನ್ನು ಪ್ರಾರಂಬಿಸಿ ತಾಳಿಕೋಟೆ ಪಟ್ಟಣವಲ್ಲದೇ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರ ಅನುಕೂಲಕ್ಕಾಗಿ ಪ್ರಾರಂಬಿಸಿದ್ದ ಔಷಧ ವ್ಯಾಪಾರಸ್ಥರಲ್ಲಿ ಇವರು ಪ್ರಥಮ ಔಷಧ ವ್ಯಾಪಾರಸ್ಥರೆಂದು ಹೆಗ್ಗಳಿಕೆಗೆ ಪಾತ್ರರಾದ ದಿ.ಶಿವಲಿಂಗಪ್ಪನವರು ತಮ್ಮ ನಾಲ್ಕು ಮಕ್ಕಳಾದ ದಿ.ಶರಣಬಸ್ಸಪ್ಪ, ದಿ.ಮಲಕಾಜಪ್ಪ, ಚನಬಸ್ಸಪ್ಪ, ಸುಭಾಸ ಇವರಿಗೂ ಸಹ ಔಷಧ ಗುಳಿಗೆಗಳ ಬಗ್ಗೆ ಕೆಲವು ಝಡ್ಡು ಜಾಪತ್ರೆಗಳ ಬಗ್ಗೆಯೂ ಮಾಹಿತಿ ನೀಡಿ ಅವರಿಗೂ ಸಹ ಸರ್ಕಾರದ ಪರವಾನಿಗೆಯೊಂದಿಗೆ ಔಷಧ ವ್ಯಾಪಾರವನ್ನು ಪ್ರಾರಂಬಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿದ ದಿ.ಶಿವಲಿಂಗಪ್ಪ ಸಾಲಂಕಿ ಅವರು ದೇಶಕ್ಕಾಗಿ ದಿಟ್ಟತನದಿಂದ ಹೋರಾಟ ಮಾಡಿದ್ದರು ಎಂಬುದು ಅನೇಕ ಹಿರಿಯರ ಮಾತುಗಳಿಂದಲೂ ಸಹ ಹಾಗೂ ಕೆಲವು ಪ್ರಕಟಗೊಂಡಂತಹ ಸ್ವಾತಂತ್ರ್ಯ ಯೋಧರ ಮಾಹಿತಿಯಿಂದಲೂ ಸಹ ಗೊತ್ತಾಗಿದೆ ಎಂದರು.
ಈಗಿನ ಅವರ ಸಮಸ್ತ ಎಲ್ಲ ಕುಟುಂಭದವರು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿ ಅಜ್ಜ ಹಾಕಿಕೊಟ್ಟ ಆರೋಗ್ಯವೇ ಭಾಗ್ಯವೆಂಬ ಮಾರ್ಗವನ್ನು ಹಿಡಿದಿರುವದು ಸಂತಸ ತಂದಿದೆ ಎಂದು ಹೇಳಿದ ಶ್ರೀಗಳು ಉಪಸ್ಥಿತ ಇಡೀ ಸಾಲಂಕಿ ಕುಟುಂಬದವರಿಗೂ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಶ್ರೀಗಳು ಆಶಿರ್ವದಿಸಿದರು.
ಈ ಸಮಯದಲ್ಲಿ ಸಾಲಂಕಿ ಮನೆತನದ ಚನ್ನಬಸ್ಸಪ್ಪ ಸಾಲಂಕಿ, ಸುಭಾಸ ಸಾಲಂಕಿ, ಶ್ರೀಮತಿ ಕಸ್ತೂರಿಬಾಯಿ ಸಾಲಂಕಿ, ಸುರೇಖಾ ಸಾಲಂಕಿ, ರಮೇಶ ಸಾಲಂಕಿ, ಶೋಭಾ ಸಾಲಂಕಿ, ಶಿವಲೀಲಾ ಸಾಲಂಕಿ, ಸಂಗೀತಾ ಸಾಲಂಕಿ, ಮನಶ್ರೀ ಸಾಲಂಕಿ, ಶಿವಲಿಂಗ ಸಾಲಂಕಿ, ರಾಕೇಶ ಸಾಲಂಕಿ, ಇಂದುಮತಿ ಶಾಹಾಪೂರ, ಸುಮಂಗಲಾ ಪಟ್ಟಣಶೆಟ್ಟಿ, ಹಾಗೂ ಗುರು ಹಿರಿಯರು ಉಪಸ್ಥಿತರಿದ್ದರು.