ಸಮಾಜಮುಖಿ ಸೇವೆಯಲ್ಲಿ ಹಿರಿಯೂರು ರೋಟರಿ :  ಆರ್ ಗೋಪಿನಾಥ್
ಸಂಜೆವಾಣಿ ವಾರ್ತೆ
ಹಿರಿಯೂರು ಜು. 13 –  ಹಿರಿಯೂರಿನ ರೋಟರಿ ಕ್ಲಬ್ ಸುಮಾರು ಐವತ್ತೆರಡು ವರ್ಷಗಳ ಹಿಂದಿನ ಹಳೆಯ ರೋಟರಿ ಕ್ಲಬ್ ಆಗಿದ್ದು ಕಳೆದ ಹಲವಾರು ವರ್ಷಗಳಿಂದ ಅನೇಕ ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದಿದೆ, ಇದು ಶ್ಲಾಘನೀಯ ಕಾರ್ಯ ಎಂದು ರೋಟರಿ ಮಾಜಿ ಜಿಲ್ಲಾ ಗವರ್ನರ್ ಆರ್ ಗೋಪಿನಾಥ್ ಹೇಳಿದರು. ಹಿರಿಯೂರು ರೋಟರಿ ಕ್ಲಬ್ ನೂತನ ಪದಾಧಿಕಾರಿಗಳಿಗೆ ಪದ ಪ್ರಧಾನ ಮಾಡಿ ಅವರು ಮಾತನಾಡಿದರು.  ಹಿರಿಯೂರು ರೋಟರಿ ಕ್ಲಬ್ ನಲ್ಲಿ ಸದಸ್ಯರ ಸಂಖ್ಯೆ ಇನ್ನೂ ಹೆಚ್ಚಳವಾಗಲಿ ಅಲ್ಲದೆ ಮಹಿಳಾ ಸದಸ್ಯರಿಗೂ ಅವಕಾಶ ನೀಡಿ ಎಂದರು, ಸಹಾಯಕ ಗವರ್ನರ್ ಎಚ್ ಪಿ  ಸುದರ್ಶನ್ ಕುಮಾರ್ ಮಾತನಾಡಿ ರೋಟರಿ ಸಂಸ್ಥೆಗೆ ನೀಡಿದ ದೇಣಿಗೆ ಯಾವುದೋ ಒಂದು ಕಡೆ ತುಂಬಾ ಅಮೂಲ್ಯವಾದಂತಹ ಕೆಲಸಕ್ಕೆ ವಿನಿಯೋಗವಾಗುತ್ತದೆ ಎಂದರು. ಆರೋಗ್ಯ, ಶಿಕ್ಷಣ ಸೇರಿದಂತೆ ಅನೇಕ ಉಪಯುಕ್ತ ಕಾರ್ಯಗಳಿಗೆ ಸೇವಾ ಮನೋಭಾವ  ರೂಡಿಸಿಕೊಂಡಿರುವುದು ರೋಟರಿಯ ವಿಶೇಷತೆ ಎಂದರು. ಡಿ.ಜಿ.ಎನ್  ಎಂ.ಕೆ ರವೀಂದ್ರ, ಕಿರ್ಲೋಸ್ಕರ್ ಕಂಪನಿಯ ಮುಖ್ಯಸ್ಥರಾದ ಪ್ರಕಾಶ್ ಗೋನಿ ಮತ್ತಿತರರು ಮಾತನಾಡಿದರು. ನೂತನ ಅಧ್ಯಕ್ಷರಾಗಿ  ಜಿ ಎಸ್ ಕಿರಣ್, ಉಪಾಧ್ಯಕ್ಷರಾಗಿ ಕೆ ಎ.ವರುಣ್,  ಕಾರ್ಯದರ್ಶಿಯಾಗಿ ಬಿ.ಜೆ. ರಾಘವೇಂದ್ರ ಚಾರಿ,  ಐಪಿಪಿ ದೇವರಾಜ್ ಮೂರ್ತಿ, ಸಹಕಾರ್ಯದರ್ಶಿಯಾಗಿ ಸಿ.ಸುನಿಲ್, ಕೌಶಿಕ್ ನಾಯ್ಡು ಖಜಾಂಚಿಯಾಗಿ ಎಚ್.ಎಸ್ ಪ್ರಶಾಂತ್,  ಸರ್ಜೆಂಟ್ ಎಸ್ ಎಂ ಜಗದೀಶ್ ಮತ್ತು ತಂಡದವರು ಅಧಿಕಾರ ಸ್ವೀಕರಿಸಿದರು.  ಕಿರಣ್ ಕುಮಾರ್ ಹಾಗೂ ಎ ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು.  ಇನ್ನರ್ ವೀಲ್ ಅಧ್ಯಕ್ಷರಾದ ಸುಚಿತ್ರಾ ಅಮರನಾಥ್ ,  ಹಾಗೂ ಬಿ.ಕೆ ನಾಗಣ್ಣ, ಎಲ್. ಆನಂದ ಶೆಟ್ಟಿ, ಹೆಚ್.ಎಸ್ ಸುಂದರ್ ರಾಜ್ ,ಟಿ ಮಲ್ಲೇಶಪ್ಪ, ಎಚ್.ಎಸ್ ನಾಗರಾಜ ಗುಪ್ತ , ಮಾಜಿ ಅಧ್ಯಕ್ಷರಾದ ಚಂದ್ರ ಕೀರ್ತಿ ಗುಜ್ಜರ್ , ಕನ್ನಿಕಾ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರಾದ  ಈ.ಆರ್.ರಮೇಶ್ ಬಾಬು,ಇನ್ನರ್ವೀಲ್ ಅಧ್ಯಕ್ಷರಾದ ಸುಚಿತ್ರಾ ಅಮರನಾಥ್, ಮಾಜಿ ಅಧ್ಯಕ್ಷರಾದ ದೇವರಾಜ ಮೂರ್ತಿ, ಮಾಜಿ ಕಾರ್ಯದರ್ಶಿ ಜೋಗಪ್ಪ‌, ಸಣ್ಣ ಭೀಮಣ್ಣ ,ಎಂ.ಯು. ಶಿವರಾಂ ಎಚ್.ಎಸ್ ಪ್ರಶಾಂತ್, ಎ.ಬಾಲಾಜಿ,ಎಂಎಸ್ ರಾಘವೇಂದ್ರ ವಿಶ್ವನಾಥ್, ಎಂ ವಿ. ಹರ್ಷ ನಾರಾಯಣಚಾರ್  ಮತ್ತು ರೋಟರಿ ಸಂಸ್ಥೆಯ ಸದಸ್ಯರು ಇನ್ನರ್ ವೀಲ್ ಮಾಜಿ ಅಧ್ಯಕ್ಷರಾದ ಲಕ್ಷ್ಮಿ ರಾಜೇಶ್ ಇಂಪಾ ರೀತೇಶ್  ಮತ್ತಿತರರು  ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.