ನಾವೇ ನಿಜವಾದ ಭೊವಿ ಜನಾಂಗ: ಶಿವರಾವ ಭೊವಿ
ಬೀದರ್: ಜು.13:ಭೂವಿ ಜನಾಂಗದವರೆ ಬೇರೆ ವಡ್ಡರ ಜನಾಂಗದವರೆ ಬೇರೆ. ಆದರೆ ಇಂದು ನಾವು ನಿಜವಾದ ಭೂವಿಗಳು ಎಂದು ಹೇಳಿಕೊಂಡು ನಮ್ಮ ಸಮಾಜದ ಮೇಲೆ ಸವಾರಿ ಮಾಡಲು ಹೊರಟಿರುವ ನಕಲಿ ಭೂವಿಗಳು ತಲೆ ಎತ್ತುತ್ತಿರುವರು. ಆದರೆ ನಾವೇ ನಿಜವಾದ ಭೂವಿಗಳು ಎಂಬುದಕ್ಕೆ ಕ್ರಿ.ಶ 6ನೇ ಶತಮಾನದಿಂದಲೇ ನಮ್ಮಲ್ಲಿ ಸಾಕ್ಷಗಳಿವೆ ಎಂದು ಭೂವಿ ಸಮಾಜ ವಿವಿದೂದ್ದೇಶ ಕಲ್ಯಾಣ ಸಂಘದ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವರಾವ ಭೂವಿ ಹೇಳಿದರು.
ಶುಕ್ರವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ನಗರದ ರಾವಜೀ ಅಖಾಡಾ, ಭೋವಿ ಗಲ್ಲಿ ನಿವಾಸಿಗಳಾದ ನಾವು ಸುಮಾರು 200 ರಿಂದ 300 ವರ್ಷಗಳಿಂದ ನಾವು ಇಲ್ಲಿ ವಾಸಿಸುತ್ತಿದೆವೆ. ಸುಮಾರು 200 ರಿಂದ 300 ವರ್ಷಗಳ ಇತಿಹಾಸ ವಿರುವ ಭೋವಿಗಲ್ಲಿ ಅಂತ ಸರಕಾರದ ಎಲ್ಲಾ ದಾಖಲೆಗಳಲ್ಲಿ ಹೆಸರು ಇದೆ. ಹಾಗೆ ಸರಿ ಸುಮಾರು 100 ವರ್ಷಗಳಿಂದ ನಾವು ಭೋವಿ ಸಮಾಜದ ಹೇಸರಿನ ಮೇಲೆ ಸಾರ್ವಜನಿಕ ಗಣೇಶ ಮೇರವಣಿಗೆಯು ಮಾಡುತ್ತ ಬಂದಿದ್ದೇವೆ. ನಮ್ಮ ಪೂರ್ವಜರು ಮೇನೆಯಲ್ಲಿ ರಾಜ ಮಹಾರಾಜರು, ದೇಶಮುಖರು, ಪಾಳೆಗಾರರನ್ನು ಹಾಗೂ ಅವರ ಮನೆತನದ ಕುಟುಂಬದವರನ್ನು ಹೊರುವ ಕಾಯಕವನ್ನು ಮಾಡುತ್ತಿದ್ದರು. ಇಂದು ಈ ಕಾಯಕವನ್ನು ಸಾಂಪ್ರಾದಾಯಿಕವಾಗಿ ಪಲ್ಲಕೆ ಹೊರುವ ಸೇವೆಯನ್ನಾಗಿ ಮಾಡಲಾಗುತ್ತಿದೆ. ಪ್ರಸ್ತುತ ಕಾಲಮಾನಕ್ಕೆ ತಕ್ಕಂತೆ ಎಲ್ಲಾ ಬಗೆಯ ಉಪಕಸುಬು ಹಾಗೂ ಉದ್ಯೋಗಗಳಲ್ಲಿ ತೊಡಗಿಕೊಂಡು ಜೀವನವನ್ನು ಸಾಗಿಸುತ್ತಿದ್ದಾರೆ ಎಂದರು.
ಸÀಂವಿಧಾನ ಬದ್ಧವಾಗಿ ಮೂಲ ಭೋವಿಗಳು ನಾವೇ ಇದ್ದರು ವಡ್ಡರ ಸಮುದಾಯದವರು ನಮ್ಮ ಸಮುದಾಯದ ವಿರುದ್ಧವೇ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುತ್ತಿದ್ದೇವೆಂದು ಸ್ಥಳೀಯ ತಹಸೀಲ್ದಾರ ಕಛೇರಿಗೆ ಮತ್ತು ಭೋವಿ ಅಭಿವೃದ್ಧಿ ನಿಗಮಕ್ಕೆ ಸುಳ್ಳು ಆಕ್ಷೇಪಣೆಗಳನ್ನು ಸಲ್ಲಿಸುತ್ತಿದ್ದಾರೆ. ಮೂಲ ಭೋವಿಗಳಾದ ನಮ್ಮ ಸಮುದಾಯದವರಿಗೆ ಜಾತಿ ಪ್ರಮಾಣ ಪತ್ರಗಳನ್ನು ನೀಡದಂತೆ ಅಧಿಕಾರಿಗಳಿಗಳ ಮೇಲೆ ನಿಯಮ ಬಾಹೀರ ಒತ್ತಡ ಹೇರುತ್ತಿದ್ದಾರೆ. ಇವರ ಪ್ರಭಾವಕ್ಕೊಳಗಾಗಿ ಧೋವಿ ಮತ್ತು ವಡ್ಡರ ಜಾತಿ ಸಂಬಂಧ ಸರ್ಕಾರದ ಹಿಂದಿನ ಎಲ್ಲಾ ಆದೇಶ ಮತ್ತು ಸುತ್ತೋಲೆಗಳನ್ನು ಪರಿಶೀಲಿಸದೆ ಮೂಲ ಭೂವಿಗಳಾದ ನಮ್ಮ ಜಾತಿ ಪ್ರಮಾಣ ಪತ್ರ ನೀಡಲು ತಡೆಯೊಡ್ಡುತ್ತಿದ್ದಾರೆ. ಇದರಿಂದ ನಮ್ಮ ಭೂವಿ ಜಾತಿಯ ವಿದ್ಯಾರ್ಥಿಗಳಿಗೆ ಹಾಗೂ ಯುವ ಜನತೆಗೆ ಅವರ ವಿದ್ಯಾಭ್ಯಾಸದಲ್ಲಿ ಹಾಗೂ ಇತರೆ ಕಾರ್ಯಗಳಲ್ಲಿ ಗಂಭೀರ ಅನ್ಯಾಯಾವಾಗುತ್ತಿದೆ. ಉಲ್ಲೇಖ 4 ಮತ್ತು 5 ರ ಆದೇಶದಂತೆ ಈಗಾಗಲೇ ಈ ಕುರಿತು ಎಲ್ಲಾ ಆಯುಕ್ತರಿಗೆ ಕರ್ನಾಟಕ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆ ಬೆಂಗಳೂರು ರವರು ವೋಡ, ಒಡ್ಡೆ, ವೋಡ್ಕಾರ ಜಾತಿ ಭೋವಿ ಪ್ರಮಾಣ ಪತ್ರ ಪಡೆದಿರುವ ಬಗ್ಗೆ ಸಮಗ್ರ ತನಿಖೆ ನಡೆಸಿ, ಭೋವಿ ಪ್ರಮಾಣ ಪತ್ರ ಹಿಂಪಡೆದು, ವೋಡ, ಒಡ್ಡ, ವೋಡ್ಕರ ಜಾತಿಯ ಹೆಸರಿನಲ್ಲಿ ಪ್ರಮಾಣ ಪತ್ರ ನೀಡುವಂತೆ ನಿರ್ದೇಶಿಸಿದ್ದಾರೆ ಎಂದರು.
ಈಗಾಗಲೇ ಭೋವಿ ಸಮಾಜದ ಜನಸಂಖ್ಯೆಯು ಕರ್ನಾಟಕದಲ್ಲಿ 13 ಲಕ್ಷ ಹೊಂದಿರುತ್ತದೆ. ಆದ್ದರಿಂದ ಕರ್ನಾಟಕ ಭೋವಿ ನಿಗಮಕ್ಕೆ ಅಧ್ಯಕ್ಷರು ಮತ್ತು ಸದಸ್ಯರನ್ನು ನಮ್ಮ ಸಮಾಜದವರಿಗೆ ಮಾಡಬೇಕಾಗಿ ಕೋರುತ್ತೇವೆ. ಶ್ರೀ ಸಿದ್ಧರಾಮೇಶ್ವರ ಸ್ವಾಮಿಗಳ ಮನವಿಯಂತೆ ವಡ್ಡರ ಸಮಾಜದ ನಿಗಮವನ್ನು ಹೊಸದಾಗಿ ಮಾಡಲು ತಾವು ಕ್ರಮ ಕೈಕೊಳ್ಳಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತೇವೆ. ಭೋವಿ ಜಾತಿಯವರು ವಡ್ಡರಲ್ಲ, ಬೆಸ್ತರಲ್ಲ, ಗಂಗಾಮಾತಾಸ್ತರಲ್ಲ, ಕೇವಲ ಭೋವಿ ಜಾತಿಯವರು ಎಂದು ವಿವರಿಸಿದರು.
ರಾಜ್ಯದಲ್ಲಿ ಮೂಲ ಭೋವಿಗಳು 1950 ರ ಸುವಿಧಾನ ಜಾರಿಗೆ ಬಂದಾಗಿನಿಂದ ಕೇವಲ 6 ಜಾತಿಗಳು ಅಂದರೆ ಹೊಲೆಯ, ಮಾದಿಗ, ಲಂಬಾಣಿ, ಭೋವಿ ಕೊರಮಾ, ಕೊರಚ ಜಾತಿಗಳು ಪರಿಶಿಷ್ಟ ಜಾತಿಯಲ್ಲಿ ಬರುತ್ತಿದ್ದವು ನಂತರ 1976-77 ರಲ್ಲಿ ಆಗಿನ ಮುಖ್ಯಮಂತ್ರಿ ದೇವರಾಜ ಅವರ ನೇತೃತ್ವದಲ್ಲಿ ವಡ್ಡರ ಜಾತಿಯನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಆಗಿನ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿ ಕಳುಹಿಸಿರುತ್ತಾರೆ. ಅದರಂತೆ ವಡ್ಡರ ಜಾತಿಯನ್ನು 2022 ರಲ್ಲಿ ಪರಿಶಿಷ್ಟ ಜಾತಿಗೆ ಸೇರಿಸಿ ಕೇಂದ್ರ ಸರಕಾರ ಆದೇಶ ನೀಡಿರುತ್ತದೆ ಎಂದರು.
ವಡ್ಡರ ಸಮುದಾಯದವರು ತಮಗೆ ಮೀಸಲಾಗಿರುವ ಸರ್ಕಾರದ ಸೌಲಭ್ಯಗಳು ಪಡೆಯುವಲ್ಲಿ ನಮ್ಮ ಸಮುದಾಯದಿಂದ ಯಾವುದೇ ಅಭ್ಯಂತರವಿರುವುದಿಲ್ಲ. ಆದರೆ ವಡ್ಡರ ಸಮುದಾಯದವರು ನಮ್ಮ ಭೋವಿ ಜಾತಿ ಪದ ದುರ್ಬಳಕೆ ಮಾಡಿಕೊಂಡು ನಮ್ಮ ಅಸ್ತಿತ್ವಕ್ಕೆ ಧಕ್ಕೆ ಉಂಟುಮಾಡುತ್ತಿರುವುದನ್ನು ನಾವು ತೀವ್ರವಾಗಿ ಬಂಡಿಸುತ್ತೇವೆ. ವಡ್ಡರ ಸಮುದಾಯದವರು ತಮ್ಮ ಮೂಲ ವಡ್ಡರ ಪದವನ್ನು ಬೋಯಿಯಾಗಿ, ನಂತರ ಭೋವಿ ಎಂದು ಎರಡು ಬಾರಿ ಯಾವ ಆಧಾರದಲ್ಲಿ ಬದಲಾವಣೆ ಮಾಡಿಕೊಂಡರು ಎಂಬುದನ್ನು ಪರಿಶೀಲಿಸಬೇಕು, ಈ ಕುರಿತು ಸಮಗ್ರವಾಗಿ ತನಿಖೆ ಕೈಗೊಂಡು ನಿಯಮ ಬಾಹೀರವಾಗಿ ನಮ್ಮ ಪದ ಬಳಕೆ ಮಾಡುವುದನ್ನು ಸಂವಿಧಾನಬದ್ಧವಾಗಿರುವಂತಹ ನಮ್ಮ ಜಾತಿ ಅಸ್ತಿತ್ವಕ್ಕೆ ರಕ್ಷಣೆ ನೀಡಬೇಕೆಂದು ಆಗ್ರಹಿಸಿದರು.
ನಾವೇ ನಿಜವಾದ ಭೋವಿ ಜನಾಂಗದವರಾಗಿದ್ದರೂ ಕೂಡಾ ಹತ್ತಾರು ಪ್ರಶ್ನೆಗಳನ್ನು ಅಧಿಕಾರಿಗಳು ನಮಗೆ ಮಾಡುತ್ತಿದ್ದಾರೆ. ನಮ್ಮ ಭೋವಿ ಜನಾಂಗದ ಯುವಕರಿಗೆ ನೌಕರಿ ಸಿಕ್ಕರೂ ಸಿಂಧುತ್ವ ಪ್ರಮಾಣ ಪತ್ರ ಸಿಗುತ್ತಿಲ್ಲ. ನೌಕರಿಯಾದರೂ ಅಮಾನತು ಮಾಡಲಾಗುತ್ತಿದೆ. ನಂತರ ಕೋರ್ಟ್‍ಗೆ ಹೋಗಿ, ನ್ಯಾಯ ಸಿಕ್ಕ ನಂತರ ನೌಕರಿಗೆ ತೆಗೆದುಕೊಳ್ಳುತ್ತಿದ್ದಾರೆ. ಸರ್ಕಾರ ನಾವೇ ಭೋವಿ ಜನಾಂಗದವರು ಎನ್ನುವ ಆದೇಶ ಪತ್ರ ನೀಡಿರುವ ದಾಖಲೆಗಳು ಕೂಡಾ ನಮ್ಮಲ್ಲಿವೆ. ಆದ್ದರಿಂದ ಸರ್ಕಾರ ನಮಗೆ ನ್ಯಾಯ ಒದಗಿಸಿಕೊಡಬೇಕೆಂದು ಕೋರಿದರು.
ನಮ್ಮ ಸಮುದಾಯದವರಿಗೆ ಜಾತಿ ಪ್ರಮಾಣ ಪತ್ರ ನೀಡುವಲ್ಲಿ ತಹಸೀಲ ಕಾರ್ಯಲಯದಿಂದ ಅನಗತ್ಯ ಅಡೆತಡೆಗಳನ್ನು ಮಾಡದೆ, ನಮ್ಮ ಭೋವಿ ಸಮಾಜಕ್ಕೆ ಆಗುತ್ತಿರುವ ಅನ್ಯಾಯ ಸರಿದೂಗಿಸಿ, ಸಂವಿಧಾನಬದ್ಧವಾಗಿರುವಂತಹ ನಮ್ಮ ಜಾತಿ ಅಸ್ತಿತ್ವಕ್ಕೆ ರಕ್ಷಣೆ ನೀಡಬೇಕೆಂದು ಹೇಳಿದರು.
ಸಂಘದ ರಾಜ್ಯಧ್ಯಕ್ಷ ಲಕ್ಷ್ಮಣ ಭೋವಿ, ಕರ್ನಾಟಕ ರಾಜ್ಯ ನೌಕರರ ಸಂಘದ ಅಧ್ಯಕ್ಷ ಶಿವರಾಮ ಭೋವಿ, ರಾಜ್ಯ ಕಾರ್ಯದರ್ಶಿ ಸುಭಾಷಚಂದ್ರ, ಗೌರವಾಧ್ಯಕ್ಷ ತುಳಸಿದಾಸ ಭೊಸಲೆ, ಸಂಘದ ಜಿಲ್ಲಾಧ್ಯಕ್ಷ ಶೈಲೇಂದ್ರ ಹಿವರೆ, ಉಪಾಧ್ಯಕ್ಷ ಭಗವಾನ್ ಅನಂತವಾಲ್, ಗಣೇಶ ಭೋಸ್ಲೆ, ಕಾರ್ಯದರ್ಶಿ ಸಂದೀಪ ಹಿವರೆ, ನರೇಂದ್ರ ಹಿವರೆ, ಖಜಾಂಚಿ ಸುನೀಲ ಹಿವರೆ, ಪ್ರಮುಖರಾದ ಆನಂದ ಕೋಮಟಕರ್, ಉಮೇಶ ಕೋಮಟಕರ್, ಸುನೀಲ, ಪ್ರವೀಣ ಸೇರಿದಂತೆ ಇನ್ನಿತರರು ಪತ್ರಿಕಾ ಗೋಷ್ಟಿಯಲ್ಲಿ ಉಪಸ್ಥಿತರಿದ್ದರು.