ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ರವರ ಜಯಂತಿ ಉತ್ಸವ
ಬೀದರ:ಜು.13: ನಗರದ ಡಾ|| ಚನ್ನಬಸವ ಪಟ್ಟದೇವರ ಪ್ರಸಾದ ನಿಲಯದಲ್ಲಿ ಗುರುವಾರ ನಗರದ ಪ್ರಸಾದ ನಿಲಯದಲ್ಲಿ 165ನೇ ತಿಂಗಳ ಅನುಭವ ಮಂಟಪ ಕಾರ್ಯಕ್ರಮ ಹಾಗೂ ವಚನ ಪಿತಾಮಹ ಡಾ|| ಫ.ಗು. ಹಳಕಟ್ಟಿ ರವರ ಜಯಂತಿ ಉತ್ಸವ ಜರುಗಿತು.
ದಿವ್ಯ ಸಾನಿದ್ಯ ವಹಿಸಿರುವ ಬಸವಕಲ್ಯಾಣ ಅನುಭವ ಮಂಟಪದ ಅಧ್ಯಕ್ಷರಾದ ನಾಡೋಜ ಪರಮಪೂಜ್ಯ ಡಾ|| ಬಸವಲಿಂಗ ಪಟ್ಟದೇವರು ಆಶೀರ್ವಚನ ನೀಡುತ್ತ, ಡಾ|| ಫ.ಗು. ಹಳಕಟ್ಟಿ ರವರು ತಮ್ಮ ಉಸಿರು ಇರುವವರೆ ವಚನಗಳು ಸಂಗ್ರಹ ಮಾಡಿ ಪ್ರಕಟ ಮಾಡುವ ಕಾರ್ಯ ಮಾಡಿದ್ದಾರೆ. ವಚನ ಸಾಹಿತ್ಯದ ಬೆಳಕು ಜಗತ್ತಿಗೆ ಕಲ್ಪಿಸಿಕೊಟ್ಟಿದವರು ಹಳಕಟ್ಟಿಯವರಾಗಿದ್ದಾರೆ. ಇಂದು ಅನುಭವ ಮಂಟಪ ನಿರ್ಮಾಣವಾಗಬೇಕಾದರೆ ಅಂದು ಅವರು ವಚನಗಳ ಸಂಗ್ರಹ ಮಾಡಿದ ಸೇವೆ ಕಾರಣವಾಗಿದೆ. ಮುಂದುವರೆದು ಮಾತನಾಡುತ್ತಾ, ವ್ಯಕ್ತಿಯು ಪಂಚಾಂಗ, ಜ್ಯೋತಿಷ್ಯ ಶಾಸ್ತ್ರ, ಕಂದಾಚಾರಕ್ಕೆ ನಂಬಲಾರದೇ ಮಾನಸಿಕ ಮತ್ತು ಆತ್ಮ ಬಲದಿಂದ ಬದುಕು ಸಾಗಿಸಬೇಕು. ವ್ಯಕ್ತಿಯಲ್ಲಿರುವ ನಕರಾತ್ಮಕ ಭಾವನೆಗಳು ದೂರವಿದ್ದು, ಸಕರಾತ್ಮಕ ಚಿಂತನೆಯಿಂದ ಅಂತರಂಗ ಬಹಿರಂಗ ಶುದ್ಧೀಕರಣವಾಗಬೇಕಾದರೆ ವಚನೆ ಚಿಂತನೆ ಮಾಡುವುದು ಅವಶ್ಯಕತೆ ಇದೆ. ಶರಣರ ಸತ್ಸಂಗದಿಂದ ಮತ್ತು ವಚನಗಳು ಓದುವುದರಿಂದ ಮಾನವನ ದೈಹಿಕ, ಮಾನಸಿಕ ಆರೋಗ್ಯಕ್ಕೆ ದಿವ್ಯ ಔಷಧ್ಯವಾಗಿದೆ ಎಂದು ನುಡಿದರು.
ಬೀದರದ ಖ್ಯಾತ ವೈದ್ಯರಾದ ಡಾ. ವಿಜಯಶ್ರೀ ಬಶೆಟ್ಟಿ ರವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಛಾಟಿಸಿ ಮಾತನಾಡುತ್ತಾ, ಹಳಕಟ್ಟಿಯವರು ಕಡು ಬಡತನದಲ್ಲಿದ್ದು, ಹಳೆಯ ಬಟ್ಟೆಗಳನ್ನು ಧರಿಸಿ ಸಮಾಜಮೂಖಿ ಸೇವೆಯಲ್ಲಿ ತೊಡಗಿಸಿಕೊಂಡು ವಚನ ಸಾಹಿತ್ಯ ಸಾರವನ್ನು ಶಿವಾನುಭವ ಪತ್ರಿಕೆಯನ್ನು ಪ್ರಕಟಿಸಿದ್ದಾರೆ. ವಚನ ದೀಪವನ್ನು ಹಚ್ಚಿದವರು ಡಾ|| ಫ.ಗು. ಹಳಕಟ್ಟಿಯವರು ಆಗಿದ್ದಾರೆ ಎಂದು ತಿಳಿಸಿದರು.
ವೈದ್ಯರಾದ ಡಾ. ದೇವಿಕಾ ನಾಗೂರೆರವರು ಅನುಭವ ಮಂಡಿಸುತ್ತಾ, ಹಳಕಟ್ಟಿಯವರು ವೃತ್ತಿಯಲ್ಲಿ ಸರ್ಕಾರಿ ವಕೀಲರಾಗಿದ್ದರೂ ದೇಶ, ಸಮಾಜ ಮತ್ತು ವಚನಗಳ ಸಂಗ್ರಹ ಮಾಡುವ ಹಿರಿದಾದ ಉದ್ದೇಶ ಹೊಂದಿದ್ದರು. ಸುಮಾರು ಹತ್ತು ಸಾವಿರ ವಚನಗಳನ್ನು ಕನ್ನಡದಲ್ಲಿ ಪ್ರಕಟಿಸಿದ್ದಾರೆ. ಅಂದು ಬಾಸಿನ್ ಮಿಶನ್ ರವರು ವಚನಗಳನ್ನು ಪ್ರಕಟಿಸಲು ನಿರಾಕರಿಸಿದಾಗ ಸ್ವತಹ ಹಳಕಟ್ಟಿಯವರು ತಮ್ಮ ಮನೆಯನ್ನು ಮಾರಾಟ ಮಾಡಿ ಪ್ರಿಟಿಂಗ್ ಪ್ರೇಸ್ ಸ್ಥಾಪಿಸಿ ಸಮಯ ಹಾಳು ಮಾಡಲಾರದೇ 1920 ರಿಂದ 1940 ರವರೆಗೆ ಹತ್ತು ಸಾವಿರ ವಚನಗಳನ್ನು ಪ್ರಕಟಿಸಿದ್ದಾರೆ. ಅವರ ಸೇವೆ ಅಪಾರ ಮತ್ತು ಅವರು ಆಸ್ಮರಣೀಯವಾದದು ಎಂದು ವಿಷಯ ಪ್ರತಿಪಾದಿಸಿದರು.
ಸಮ್ಮುಖವಹಿಸಿರುವ ಪೂಜ್ಯ ನಿರಂಜನ ಮಹಾಸ್ವಾಮಿಗಳು ಬದುಕಿನ ಮೌಲ್ಯದ ಕುರಿತು ಪ್ರವಚನ ಮಾಡಿದರು. ಅನುಭವ ಮಂಟಪ ಸಂಸ್ಕøತಿ ವಿದ್ಯಾಲಯದ ವಿದ್ಯಾರ್ಥಿನಿ ವಿಜಯಲಕ್ಷಿ?? ವಚನ ಚಿಂತನೆ ನೀಡಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ಛಾಯಾರತ್ನ ಪ್ರಶಸ್ತಿ ಪುರಸ್ಕತರಾದ ಮಹೇಶ ಮಜಗೆ ಮತ್ತು ಉದಯಕುಮಾರ ಜಿರ್ಗೆ ರವರನ್ನು ಪೂಜ್ಯ ಶ್ರೀ ಡಾ|| ಬಸವಲಿಂಗ ಪಟ್ಟದೇವರು ಪ್ರಶಸ್ತಿ ನೀಡಿ ಗೌರವಿಸಿದರು.
ಭಕ್ತಿ ದಾಸೋಹಿಗಳಾದ ಆರತಿ ಸಂದೀಪ ಏಕೆಳ್ಳೆ ರವರು ಗುರುಬಸವ ಪೂಜೆ ನೆರವೆರಿಸಿದರು. ಪ್ರಸಾದ ನಿಲಯದ ಕಾರ್ಯದರ್ಶಿಗಳಾದ ಪೆÇ್ರ. ಎಸ್.ಬಿ. ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಮೇಲೆ ಪೂಜ್ಯ ಶ್ರೀ ಮಹಾಲಿಂಗ ಮಹಾಸ್ವಾಮಿಗಳು, ಉಮಾಕಾಂತ ಮೀಸೆ ರವರು ಉಪಸ್ಥಿತರಿದ್ದರು. ಬೋಗಾರ ಮತ್ತು ಚನ್ನಬಸಪ್ಪಾ ನೌಬಾದೆ ವಚನ ಸಂಗೀತ ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ಶಿಕ್ಷಕಿ ಶಿವಲೀಲಾ ರವರ ನಿರ್ದೇಶನದಲ್ಲಿ ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ಮಕ್ಕಳು “ಸತ್ಯಂ ಶಿವಂ ಸುಂದರಂ” ಎಂಬ ಹಾಡಿನ ಮೇಲೆ ನೃತ್ಯ ಪ್ರದರ್ಶಿಸಿದರು. ದೀಪಾ ಮಾಳಗೆರವರ ಪುತ್ರನಾದ ಸ್ವರೂಪ ಮಾಳಗೆರವರ ಹುಟ್ಟು ಹಬ್ಬದ ನಿಮಿತ್ಯ ಮಕ್ಕಳಿಗೆ ನೋಟಬುಕ್ ವಿತರಿಸಲಾಯಿತು.
ಕುಮಾರಿ ರೂಪಾಲಿ ಸ್ವಾಗತ ಕೋರಿದರೆ, ಅರ್ಪಿತಾ ನಿರೂಪಿಸಿದರೆ, ಕುಮಾರಿ ರೇಣುಕಾ ವಂದಿಸಿದರು. ಪ್ರಮುಖರಾದ ಸಂಗ್ರಾಮ ಎಂಗಳೆ, ಗುರನಾಥ ಬಿರಾದಾರ, ಭಾರತಿ ಪಾಟೀಲ್, ಮೀನಾಕ್ಷಿ ಪಾಟೀಲ್, ಲಕ್ಷಿ??ೀಬಾಯಿ ಮಾಳಗೆ, ವಿದ್ಯಾಸಾಗರ ಪಾಟೀಲ್, ಶಕುಂತಲಾ ಮೀಸೆ, ಸುರೇಖಾ ಪಾಟೀಲ್ ತೀರ್ಥಮ್ಮ, ಕಸ್ತೂರಬಾಯಿ ಬಿರಾದಾರ, ಡಾ. ವೈಜಿನಾಥ ಬಿರಾದಾರ, ಮಹಾದೇವಿ ಬಿರಾದರ, ಸುನೀತಾ, ಶ್ರೀಕಾಂತ ಬಿರಾದಾರ ಉಪಸ್ಥಿತರಿದ್ದರು.