ಜಾವಳಿಯಲ್ಲಿ ಭಾವೈಕ್ಯದ ಮೊಹರಂ ಆಚರಣೆಗೆ ಚಾಲನೆ
ಆಳಂದ:ಜು.13: ತಾಲೂಕಿನ ಜವಳಿ (ಡಿ), ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಭಾಕತೆಯಿಂದ ಆಚರಿಸುವ ಮೊಹರಂ ಹಬ್ಬದ ಆಚರಣೆಗೆ ಗ್ರಾಮಸ್ಥರು ಐದು ದೇವರುಗಳ ಸ್ಥಾಪಿಸುವ ಮೂಲಕ ಗುರುವಾರ ಚಾಲನೆ ನೀಡಿದರು.
ಗ್ರಾಮದಲ್ಲಿ ಹಿಂದೂ ಮುಸ್ಲಿಂ ಬಾಂಧವರು ಸೇರಿ ಮೊಹರಂ ಪ್ರಯುಕ್ತ ಸಾಂಪ್ರದಾಯಿಕ ಆಚರಣೆಗಳೊಂದಿಗೆ ಗ್ರಾಮದ ಶರಣನಗರ ಮಡ್ಡಿ ಹಸ್ಸನ್ ಹುಸೇನ್ ಲಾಲೆ ಹದ್ರಿ ಮೌಲಾಲಿ ದೇವರಗಳನ್ನು ಪ್ರತಿಸ್ಥಾಪಿಸಿ ವಿಶೇಷ ರೀತಿಯ ಅಲಂಕಾರಗೊಳಿಸಿ ಪ್ರಾರ್ಥನೆ ಪೂಜೆ ಸಲ್ಲಿಸಲಾಯಿತು.
ಪ್ರತಿ ದಿನ ಸಂಜೆ ಹಿಂದೂ ಮುಸ್ಲಿಮರು ಸೇರಿ ಸಾಂಪ್ರದಾಯಿಕ ಲೆಜಿಮ ಕುಣಿತ ಹೆಜ್ಜೆ ಹಾಕುವ ಸಾಂಸ್ಕøತ ಕಾರ್ಯಕ್ರಮ ನಡೆಯಲಿದೆ. ಮಂಗಳವಾರ ಬೆಳಗಿನ ಜಾವ ದೇವರಿಗೆ ಭಕ್ತಾದಿಗಳು ನೈವಿದ್ಯ ಅರ್ಪಿಸುವರು. ರಾತ್ರಿ ಇಡೀ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಜಾಗರಣೆ ಕೈಗೊಂಡು ಜು 17ರಂದು ಬುಧವಾರ ಬೆಳಗಿನ ನಾಲ್ಕು ಗಂಟೆಗೆ ಅಗ್ನಿ ಹಾಯುವ ಮೂಲಕ ಪ್ರಮುಖ ರಸ್ತೆಗಳಲ್ಲಿ ದೇವರ ಮೆರವಣಿಗೆ ಕೈಗೊಂಡು ಭಕ್ತಾದಿಗಳಿಗೆ ದರ್ಶನ್ ನೀಡಲಾಗುವುದು.
ಆನಂತರ ಸಂಜೆ 9:00ಗೆ ದಪ್ಪನ ಕಾರ್ಯಕ್ರಮ ನಡೆಯುವುದು. ಮೊಹರಂ ಆಚರಣೆ ಪ್ರಮುಖ ಮುಖಂಡರು ಗುಡುಸಾಬ್ ಮುಲ್ಲಾ, ಶಿವಪ್ಪ ಬೈರಾಮಡಗಿ, ಭೀಮಣ್ಣ ಬಂದ್ರವಾಡ ಮೆರವಣಿಗೆ ಉದ್ದಕ್ಕೂ ಅಂಬಣ್ಣ, ಬಂದ್ರವಾಡ, ಬಸವರಾಜ್ ಬಂದ್ರವಾಡ, ಸಿದ್ದಪ್ಪ ಬೈರಾಮಡಗಿ, ಜಗನಾಥ್ ಬೈರಾಮಡಗಿ, ಶಾಣಪ್ಪ ಬೈರಾಮಡಗಿ, ಶ್ರೀಮಂತ ಒಡೆಯರ್, ದೇವರ ಡೋಲಿ ಹೊರವರು ಮೋರಂ ಹಬ್ಬದ ರಿವೈತ್ ಪದ ನಡೆಸಿಕೊಡುವರು. ಸೈಫಾನ್ ಸಾಬ್ ಮೈಬು ಸಾಬ್ ಬಂದ್ರವಾಡ, ಮೈನುದ್ದೀನ ಧÀನ್ನೂರ್ ಡಾ. ಸದ್ದಾಂ ಅಲಿಸಾ ಬಂದರವಾಡ, ಸಲೀಮ್ ಹಳಿಮನಿ ಮೈಬು ಹಳಿಮನಿ, ಶ್ರೀಶೈಲ್ ತಳವಾರ್, ನಾಗಪ್ಪ ತಳವಾರ್, ಧರ್ಮಣ್ಣ ಜವಳಿಕರ್, ಮುನಿರಲಿ ಮುಲ್ಲಾ, ಮಲಿಕ್ ಸಾಬ್ ಮುಲ್ಲಾ ಮುಂತಾದವರು ನೇತೃತ್ವದಲ್ಲಿ ಭಾವೈಕ್ಯದ ಮೋಹರಂ ಸಂಭ್ರಮದಿಂದ ಆಚರಿಸಲಾಗುವುದು ಎಂದು ಭಕ್ತಾದಿಗಳು ತಿಳಿಸಿದ್ದಾರೆ.