ಶಕ್ತಿ ಕಿರಣ ಸಿಎಂಆರ್ ಸಿ ಯಶಸ್ವಿ ಸಭೆ
ಕಲಬುರಗಿ:ಜು.13: ಸಮೃದ್ದಿ ಸಿಎಂಆರ್ ಸಿ ಕಲಬುರಗಿಯ ವಾರ್ಷಿಕ ಮಹಾಸಭೆಯೂ ನಗರದ ರಾಘವೇಂದ್ರ ಕಾಲೋನಿಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಲಾಯಿತು.
ಶಕ್ತಿ ಕಿರಣ ಸಮುದಾಯ ನಿರ್ವಹಿತ ಸಂಪನ್ಮೂಲ ಕೇಂದ್ರದಲ್ಲಿ ಸಿಎಂಆರ್‍ಸಿ
ವಾರ್ಷಿಕ ಮಹಾಸಭೆಯಲ್ಲಿ ಹಿಂದಿನ ಮಹಾಸಭೆಯ ದೃಢೀಕರಣ, ವಾರ್ಷಿಕ ವರದಿ ವಾಚನ ಮತ್ತು ಅನುಮೋದನೆ, ಲೆಕ್ಕ ಪರಿಶೋಧಕ ವರದಿ ಸೇರಿದಂತೆ ಹಲವು ವಿಷಯಗಳ ಕುರಿತು ಸಭೆಯಲ್ಲಿ ಪ್ರಸ್ತಾಪ ನಡೆಯಿತು. ಇನ್ನೂ ಸಭೆಯಲ್ಲಿ ಮಹಿಳೆಯರ ಈ ಸಂಘದ ಸದುಪಯೋಗ ಪಡೆಯಬೇಕು. ಮಹಿಳೆಯರು ಸಮಾಜದಲ್ಲಿ ಸ್ವಾವಲಂಬನೆ ಜೀವನ ನಡೆಸಬೇಕು ಎಂದು ತಿಳಿಸಲಾಯಿತು. ಕಾರ್ಯಕ್ರಮ ಜ್ಯೋತಿ ಬೆಳಗಿಸುವ ಮೂಲಕ ಸಂಘದ ರವಿಕುಮಾರ್, ಹಾಗೂ ಅರುಣಕುಮಾರ್, ನೆರವೇರಿಸಿ ಮಾತನಾಡಿದರು. ಶಕ್ತಿ ಕಿರಣ ನಗರ ಸಮುದಾಯ ನಿರ್ವಹಿತ ಸಂಪನ್ಮೂಲ ಕೇಂದ್ರ ರಾಘವೇಂದ್ರ ಕಾಲೋನಿಯ ಮಹಿಳೆಯರು ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಶಕ್ತಿ ಕಿರಣ ಸಂಪನ್ಮೂಲ ಕೇಂದ್ರದ ಸುಧಾ, ರಾಧಾ ಕುಲಕರ್ಣಿ, ವನಮಾಲಾ ಕುಲಕರ್ಣಿ, ನಾಗಮ್ಮ, ಆಶಾ, ಸೇರಿದಂತೆ ಹಲವು ಮಹಿಳೆಯರು ಉಪಸ್ಥಿತರಿದ್ದರು.