ಕೋಝಿಕೋಡ್ ಅಪಘಾತದಲ್ಲಿ ಮೇರ್ಕಳದ ಮಹಿಳೆ ಮೃತ್ಯು

ಕಾಸರಗೋಡು-ಕೋಝಿಕೋಡ್ ಕೊಡುವಳ್ಳಿ ಎಂಬಲ್ಲಿ ನಡೆದ ವಾಹನ ಅಪಘಾತದಲ್ಲಿ ಬಂದ್ಯೋಡು ಸಮೀಪದ ಮೇರ್ಕಳದ ಮಹಿಳೆಯೋರ್ವರು ಮೃತಪಟ್ಟ ಘಟನೆ ನಡೆದಿದೆ. ಮೇರ್ಕಳ ಪರಪ್ಪದ ಸಿದ್ದಿಕ್ ರವರ ಪತ್ನಿ ತಸ್ಲೀಮಾ ( ೨೮) ಮೃತಪಟ್ಟವರು.ಕೋಝಿಕ್ಕೋಡ್ ನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟರು. ಆಗಸ್ಟ್ ೨೪ ರಂದು ರಾತ್ರಿ ಕೊಡುವಳ್ಳಿ ಎಂಬಲ್ಲಿ ಅಪಘಾತ ನಡೆದಿತ್ತು. ವಯನಾಡಿಗೆ ತೆರಳಿ ಅಲ್ಲಿಂದ ಮಡವೂರು ದರ್ಗಾ ಭೇಟಿಗೆ ತೆರಳುತ್ತಿದ್ದಾಗ ಇವರು ಸಂಚರಿಸುತ್ತಿದ್ದ ಇನ್ನೋವಾ ಕಾರು ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದು ಮಗುಚಿ ಬಿದ್ದಿದ್ದು , ಗಂಭೀರ ಗಾಯಗೊಂಡಿದ್ದ ತಸ್ಲೀಮಾ ರನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ರಾತ್ರಿ ಮೃತಪಟ್ಟಿದ್ದಾರೆ.
ಇವರ ಮಕ್ಕಳಾದ ತಫ್ಸಿಯಾ( ೮) , ಫಾತಿಮಾ ( ೪) , ತಸ್ಲೀಮಾ ರ ಸಹೋದರ ಅಬ್ದುಲ್ ಜಮಾಲ್ ( ೨೭) , ಸಂಬಂಧಿಕ ಕುಂಞಲೀಮಾ ( ೩೦) ಗಾಯಗೊಂಡಿದ್ದು , ಕೋಜಿಕ್ಕೋಡ್ ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.