ಬಡಜನರ ಆರ್ಥಿಕ ಪ್ರಗತಿ ಮೂಲ ಧ್ಯೇಯ
ಭಾಲ್ಕಿ:ಸೆ.೨೮:ಬಡಜನರು, ಸಣ್ಣ ವರ್ಗದ ವ್ಯಾಪಾರಸ್ಥರನ್ನು ಆರ್ಥಿಕವಾಗಿ ಸದೃಢರನ್ನಾಗಿ ಮಾಡುವುದು ನಮ್ಮ ಸಂಘದ ಮೂಲ ಧ್ಯೇಯವಾಗಿದೆ. ಈ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದೇವೆ ಎಂದು ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಶಿಧರ ಕೋಸಂಬೆ ಹೇಳಿದರು.
ಪಟ್ಟಣದ ಬಸವೇಶ್ವರ ಪತ್ತಿನ ಸಹಕಾರ ಸಂಘದಲ್ಲಿ ಈಚೆಗೆ ಆಯೋಜಿಸಿದ್ದ ಮೂರನೆಯ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಘವೂ ಪ್ರಸಕ್ತ ಸಾಲಿನಲ್ಲಿ ಸುಮಾರು ೨ ಕೋಟಿ ರೂ ವಾರ್ಷಿಕ ವಹಿವಾಟು ನಡೆಸುವುದರ ಜತೆಗೆ ೨.೨೭ ಲಕ್ಷ ರೂ ಲಾಭ ಗಳಿಸುವ ಮೂಲಕ ಪ್ರಗತಿಯತ್ತ ದಾಪುಗಾಲು ಇಟ್ಟಿದೆ. ಬಡವರು, ಸಣ್ಣಪುಟ್ಟ ವ್ಯಾಪಾರಸ್ಥರನ್ನು ಗುರುತಿಸಿ ಸಾಲ ನೀಡಲಾಗುತ್ತಿದೆ. ಎಲ್ಲರ ಸಹಕಾರದಿಂದ ಸಂಘ ಬೆಳವಣಿಗೆ ಸಾಗುತ್ತಿದೆ ಎಂದು ಸಂತಸ ವ್ಯಕ್ತ ಪಡಿಸಿದರು.
ನಿರ್ದೇಶಕ ಪ್ರಭು ಡಿಗ್ಗೆ ವಾರ್ಷಿಕ ವರದಿ ಮಂಡಿಸಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಸಂಗಮೇಶ ಹುಣಜೆ ಮದಕಟ್ಟಿ, ನಿರ್ದೇಶಕರಾದ ರವೀಂದ್ರ ಚಿಡಗುಪ್ಪೆ, ರಾಜಕುಮಾರ ಬಿರಾದಾರ್, ಧನರಾಜ ತೇಗಂಪೂರೆ, ಸಂಗಮೇಶ ಗುಮ್ಮೆ, ಅಹ್ಮೇದ ಚಾಂದಸಾಬ್, ಲೋಹಿತ ಉತ್ಕಾರ, ಸಹಾದೇವ ಮಡಿವಾಳ, ಡಿಗಂಬರ ಹಡಪದ, ಸಿಬ್ಬಂದಿಗಳಾದ ಶಿವಾನಂದ ಮೇತ್ರೆ, ಸಪ್ನಾ ಇದ್ದರು
ಗ್ರಾಹಕರಿಗೆ ಸನ್ಮಾನ
ಇದೇ ವೇಳೆ ಉತ್ತಮ ಗ್ರಾಹಕರನ್ನು ಸನ್ಮಾನಿಸಲಾಯಿತು. ಪಂಡರಿನಾಥ ಪವಾರ, ಸಂತೋಷ ಪತಂಗೆ, ಪ್ರಕಾಶ ಕುಂಬಾರ, ಬಾಲಾಜಿ ಹುಲಸೂರೆ, ಬಾಬುರಾವ ಮಡಿವಾಳ ಮತ್ತು ಸಂಗಮೇಶ ರವೀಂದ್ರ ಅವರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು.