ನಗರದ ೯ ಅಂತಸ್ತಿನ ಹೊಟೇಲ್ ಕಟ್ಟಡದಲ್ಲಿ ಅಗ್ನಿ ಅವಘಡ
ಮಂಗಳೂರು: ನಗರದ ಎಂಜಿ ರೋಡ್ ಬೆಸೆಂಟ್ ಬಳಿ ಹೊಟೇಲ್ ಕಟ್ಟಡದಲ್ಲಿ ಶುಕ್ರವಾರ ಸಂಜೆ (ಸೆ೨೭)ಬೆಂಕಿ ಅವಘಡ ಸಂಭವಿಸಿದೆ.
೯ ಅಂತಸ್ತಿನ ಕಟ್ಟಡ ಕಿಚನ್ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಳಕ್ಕೆ ಅಗ್ನಿ ಶಾಮಕ ದಳದ ತಂಡಗಳು ದೌಡಾಯಿಸಿದ್ದು ಕಾರ್ಯಾಚರಣೆ ಆರಂಭಿಸಿದ್ದಾರೆ. ಬೆಂಕಿ ಕಾಣಿಸಿಕೊಂಡ ಕೂಡಲೇ ಸಿಬಂದಿಗಳನ್ನು ಹೊರಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.