ಕಾಳಗಿ ಶಿವ ಮಂದಿರಕ್ಕೆ ಭಕ್ತರ ದಂಡು
ಕಾಳಗಿ.ಜು.13 : ಲಿಂಗೈಕ್ಯ ಷ.ಬ್ರ. ಶ್ರೀ ಶಿವಬಸವ ಶಿವಾಚಾರ್ಯರ 3ನೇ ಪುಣ್ಯ ಸ್ಮರಣೋತ್ಸವ ನಿಮಿತ್ಯ ಶುಕ್ರವಾರ ಬೆಳಿಗ್ಗೆ 5ಗಂಟೆಯಿಂದಲೇ ಪಟ್ಟಣದ ಹಿರೇಮಠದ ಆವರಣದಲ್ಲಿರುವ ಶಿವ ಮಂದಿರಕ್ಕೆ ತಂಡೋಪ -ತಂಡವಾಗಿ ಆಗಮಿಸಿರುವ ಭಕ್ತರು, ಲಿಂಗೈಕ್ಯ ಷ.ಬ್ರ.ಶೀ ಶಿವಬಸವ ಶಿವಾಚಾರ್ಯರ ದರ್ಶನಾಶಿರ್ವಾದ ಪಡೆದು ಧನ್ಯರಾದರು.
ಪುಣ್ಯ ಸ್ಮರಣೋತ್ಸವ ಪ್ರಯುಕ್ತ ಕತೃ ಗದ್ದುಗೆಗೆ ಬೆಳಿಗ್ಗೆ ಹಾಲಿನಭೀಷೇಕ, ಧಾರಾಭೀಷೇಕ, ಪೂಜೆ ಹಾಗೂ ಫಲ-ಪುಸ್ಪ ಸಮರ್ಪಣೆ ಮಾಡಲಾಯಿತು.
ಮೇರವಣಿಗೆಯಲ್ಲಿ ಇಲ್ಲಿಯ ಕಾಳಪ್ಪ ಗೌಡ ಪೆÇೀಲಿಸ್ ಪಾಟೀಲ ಪ್ರೌಢ ಶಾಲೆ ಹಾಗೂ ಶಿವ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ನೃತ್ಯ, ಕೋಲಾಟ, ಲೇಜಿಂ ಕುಣಿತ ನೋಡುಗರ ಮನಸ್ಸಿಗೆ ಆನಂದವನ್ನುಂಟು ಮಾಡಿತು.
ಮೆರವಣಿಗೆಯುದ್ದಕ್ಕೂ ಶ್ರೀ ಶಿವಬಸವೇಶ್ವರ ಮಹಾರಾಜಕೀ ಜೈ….ಎಂಬ ಜಯಘೋಷಗಳು ಮೊಳಗಿದವು.
ಶುಕ್ರವಾರ ಬೆಳಿಗ್ಗೆಯಿಂದ ಸಾಯಂಕಾಲದ ವರೆಗೂ ಹಿರೇಮಠದ ಶಿವ ಮಂದಿರಕ್ಕೆ ಆಗಮಿಸಿದ ಭಕ್ತಗಣ ಲಿಂಗೈಕ್ಯ ಶಿವಬಸವೇಶ್ವರರನ್ನು ನೆನೆದು, ಕರ್ತೃ ಗದ್ದುಗೆಗೆ ಕಾಯಿ-ಕರ್ಪೂರ ಬೆಳಗಿ, ಪುಸ್ಪ ಮಳೆಗೈದು, ನೈವೇದ್ಯ ಅರ್ಪಿಸಿ, ದರ್ಶನಾಶಿರ್ವಾದ ಪಡೆದು ಧನ್ಯರಾದರು.
ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಸದ್ಭಕ್ತರು, ಶ್ರೀಮಠದ ಉತ್ತರಾಧಿಕಾರಿ ಶ್ರೀನೀಲಕಂಠ ಮರಿದೇವರ ಪಾದಕ್ಕೆ ಅಣಿಮಣಿದರು.
ಸಂಸ್ಥಾನ ಹಿರೇಮಠದಂದ ದಾಸೋಹ ಕಾರ್ಯ ನೆರವೇರಿಸಲಾಗಿತ್ತು.
ಸಂಜೆ ಶಿವ ಮಂದಿರದಲ್ಲಿ ವಿವಿಧ ಕಲಾ ತಂಡಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು, ಮಕ್ಕಳ ನೃತ್ಯ , ಸಂಗೀತ ಹಾಗೂ ಶಿವ ಭಜನೆ ಜರುಗದವು.ಹೊನ್ನಕಿರಣಗಿಯ ಶ್ರೀಚಂದ್ರಗುಂಡ ಶಿವಾಚಾರ್ಯರು ಚಾಲನೆ ನೀಡಿದರು.
ಹಿರೇಮಠದ ಉತ್ತರಾಧಿಕಾರಿ ಪೂಜ್ಯ ನೀಲಕಂಠ ಮರಿದೇವರು, ಕಾಳಗಿ ವೀರಶೈವ ಸಮಾಜದ ಅಧ್ಯಕ್ಷ ಜಗದೀಶ ಮಾಲಿಪಾಟೀಲ, ಶಿವಶರಣಪ್ಪ ಕಮಲಾಪುರ, ನಾಗಯ್ಯಸ್ವಾಮಿ ಚಿಕ್ಕಮಠ, ರೇವಣಸಿದ್ದ ಕಲಶೇಟ್ಟಿ, ಸತ್ಯನಾರಾಯಣ ವನಮಾಲಿ, ಶೇಖರ ಮಾನಶೇಟ್ಟಿ, ಕಾಳಶೇಟ್ಟಿ ಪಡಶೇಟ್ಟಿ, ಆಕಾಶ ಜಮಾದಾರ, ಕಾಳಪ್ಪ ಚಿಮ್ಮನಚೋಡ, ಶರಣು ಮುಕರಂಬಿ, ನಾಗರಾಜ ಬೊಮ್ಮಾಣಿ, ಶಿವಕಿರಣ ಪ್ಯಾಟಿ ಮಠ, ಮಲ್ಲಿಕಾರ್ಜುನ ಮಳಗಿ ಸೇರಿದಂತೆ ಅನೇಕರು ಇದ್ದರು.