ಡೆಂಗ್ಯೂ – ಮಲೇರಿಯ ಕಾಯಿಲೆ ಕುರಿತು ಸಾರ್ವಜನಿಕರಿಗೆ ಜಾಗೃತಿ
ಸಂಜೆವಾಣಿ ವಾರ್ತೆ
ದಾವಣಗೆರೆ. ಜು.೧೩; ಡೆಂಗ್ಯೂ ಹಾಗೂ ಮಲೇರಿಯ ಕಾಯಿಲೆ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ನಗರದ ವಿವಿಧ ಶಾಲಾ, ಕಾಲೇಜು, ಮತ್ತು ಸಾರ್ವಜನಿಕ ವಲಯದಲ್ಲಿ ನಮ್ಮ ದಾವಣಗೆರೆ ಫೌಂಡೇಶನ್ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.ನಗರದ 24 ನೇ ವಾರ್ಡಿನ ವಿಶ್ವಭರತಿ ಪ್ರಾಥಮಿಕ ಶಾಲೆ ಮತ್ತು 26ನೇ ವಾರ್ಡಿನ ಡಿ.ಜೆ.ವಿ ಸರ್ಕಾರಿ ಶಾಲೆಯಲ್ಲಿ ಫೌಂಡೇಶನ್ ಸದಸ್ಯರು ಮನೆ ಮನೆಗಳಿಗೆ ತೆರಳಿ ಕರಪತ್ರ ಹಂಚಿ ಜಾಗೃತಿ ಮೂಡಿಸಿದರು.ಈ ವೇಳೆ ಅರಸಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ರುದ್ರೇಶ್ ಮಾತನಾಡಿ ಡೆಂಗ್ಯೂ ಜ್ವರದ ಲಕ್ಷಣಗಳು, ತಡೆಗಟ್ಟಲು ಸಾರ್ವಜನಿಕರು ಕೈಗೊಳ್ಳಬೇಕಾದ ಕ್ರಮಗಳ ಕುರಿತು, ಪ್ರೊಜೆಕ್ಟರ್ ಮೂಲಕ ಸಂಪೂರ್ಣವಾಗಿ ವಿವರಿಸಿದರು, ದಿನದಿಂದ ದಿನಕ್ಕೆ ಹಬ್ಬುತ್ತಿರುವ ಡೆಂಗ್ಯೂ ರೋಗದ ಕುರಿತು ಜನಸಾಮಾನ್ಯರಲ್ಲಿ ಮತ್ತಷ್ಟು ಅರಿವು ಮೂಡಿಸಲು, ಯುವ ಅವನಿ ಗ್ರೀನ್ ಪೌಂಡೇಶನ್, ನಗರದ ಪರಿಸರಾಸಕ್ತ ಬಳಗವಾದ ನಮ್ಮ ದಾವಣಗೆರೆ ಫೌಂಡೇಶನ್ ಹಾಗು ಮಹಾನಗರ ಪಾಲಿಕೆ ದಾವಣಗೆರೆ ಜೊತೆ ಕೈ ಜೋಡಿಸಿ ಜಾಗೃತಿ ಕಾರ್ಯಕ್ರಮವನ್ನು ಶಾಲಾ, ಕಾಲೇಜು ಮತ್ತು ಸಾರ್ವಜನಿಕ ವಲಯದಲ್ಲಿ ಹಮ್ಮಿ ಕೊಂಡಿದ್ದು. ನಗರದ 24 ನೇ ವಾರ್ಡಿನ ವಿಶ್ವಭಾರತಿ ಪ್ರಾಥಮಿಕ ಶಾಲೆಯಲ್ಲಿ ಅರಿವು ಮೂಡಿಸಿದ್ದೇವೆ ಎಂದರು. ಕಾರ್ಯಕ್ರ ಮದ ಮುಖ್ಯ ಅತಿಥಿಗಳಾಗಿ ಪಾಲಿಕೆ ಸದಸ್ಯರು ಮತ್ತು ನಮ್ಮ ದಾವಣಗೆರೆ ಫೌಂಡೇಷನ್ ಪ್ರಮುಖರಾದ  ಪ್ರಸನ್ನ ಕುಮಾರ್ ಮಾತನಾಡಿ ಡೆಂಗ್ಯೂ ಮುಕ್ತ ದಾವಣಗೆರೆಗಾಗಿ ಮಹಾನಗರ ಪಾಲಿಕೆ ಮತ್ತು ದಾವಣಗೆರೆ ಜಿಲ್ಲಾಡಳಿತದೊಂದಿಗೆ ಅರಿವಿನ ಹೆಜ್ಜೆ ಇಡೋಣ ಎಂದು ಮಕ್ಕಳಿಗೆ ಅರಿವನ್ನ ಮೂಡಿಸಿದರು. ಎಲ್ಲಾ ಮಕ್ಕಳೂ ಮತ್ತು ಪೋಷಕರು ತಮ್ಮ ಮನೆ ಸುತ್ತ, ತಮ್ಮ ಓಣಿಗಳಲ್ಲಿ ಎಲ್ಲಿಯೂ ನೀರು ನಿಲ್ಲದಂತೆ ಗಮನವಹಿಸೋಣ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು. ನಂತರ ಮನೆ ಮನೆಗಳಿಗೆ ತೆರಳಿ, ಡೆಂಗ್ಯೂ ಜ್ವರದ ಕುರಿತು ಮಾಹಿತಿಯನ್ನು ಹೊಂದಿರುವ ಕರ ಪತ್ರ ಹಂಚುವುದರೊಂದಿಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.ವಿಶ್ವಭಾರತಿ ಪ್ರಾಥಮಿಕ ಶಾಲೆಯಲ್ಲಿ ನಡೆಸಿದ ಕಾರ್ಯಕ್ರಮದಲ್ಲಿ ನಮ್ಮ ದಾವಣಗೆರೆ ಸಂಸ್ಥೆಯ ಪವನ್ ರೇವಣಕರ್, ಮುಖ್ಯೋ ಪಾಧ್ಯಾಯರಾದ ಎಂ.ಸಿ ಗೂಳಪ್ಪ,  ಪಾಲಿಕೆ ಆರೋಗ್ಯ ನಿರೀಕ್ಷಕರಾದ  ಮದನ್ ಕುಮಾರ್, ರಾಜಪ್ಪ, ಮಾಂತೇಶ್, ಹರೀಶ್ ಕೆ.ಎನ್, ಶಾಲೆಯ ಸಮಾಜ ವಿಜ್ಞಾನದ ಉಪಾಧ್ಯಾಯ ವಿಜಯ್ ಕುಮಾ‌ರ್ ಇದ್ದರು.