ಕನ್ನಡ ಭಾಷೆ, ಸಾಹಿತ್ಯಕ್ಕಾಗಿ ವೆಂಕಟರಾವ ಜೀವನವನ್ನೇ ಮುಡುಪಾಗಿಟ್ಟಿದ್ದರು
ಧಾರವಾಡ,ಜು13: ಮುಂಬಯಿ ಪ್ರಾಂತ್ಯದಲ್ಲಿದ್ದ ಕನ್ನಡ ಪ್ರದೇಶಗಳಲ್ಲಿ ಮರಾಠಿ ಭಾμÉಯ ಪ್ರಾಬಲ್ಯ ಹೆಚ್ಚಾದ ಸಂದರ್ಭದಲ್ಲಿ ವೆಂಕಟರಾವ ಅವರು 1906 ರಲ್ಲಿ ವಾಗ್ಭೂಷಣ ಎಂಬ ಪತ್ರಿಕೆ ಆರಂಭಿಸಿದರು. ತಮ್ಮ ವಕೀಲ ವೃತ್ತಿಯನ್ನು ತೊರೆದು ಸ್ವದೇಶಿ ಚಳುವಳಿಯಲ್ಲಿ ಭಾಗವಹಿಸಿದರು. 1922 ನವೆಂಬರ್ 4 ರಂದು ಜಯಕರ್ನಾಟಕ ಪತ್ರಿಕೆಯನ್ನು ಪ್ರಾರಂಭಿಸಿದರು. ಈ ಮೂಲಕ ಕರ್ನಾಟಕ ಏಕೀಕರಣದ ಚಳುವಳಿಯಲ್ಲಿ ಕನ್ನಡ ಭಾಷೆ, ಸಾಹಿತ್ಯಕ್ಕಾಗಿ ಆಲೂರು ವೆಂಕಟರಾಯರು ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು ಎಂದು ಶಾಲಾ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಈಶ್ವರ ನಾಯಕ ಅವರು ಹೇಳಿದರು.
ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ ಸಾಂಸ್ಕøತಿಕ ಭವನದಲ್ಲಿ ಆಯೋಜಿಸಲಾಗಿದ್ದ ಸುವರ್ಣ ಕರ್ನಾಟಕ 50 ರ ಸಂಭ್ರಮಾಚರಣೆ ಮತ್ತು ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ ಅವರ 144ನೇ ಜನ್ಮ ದಿನಾಚರಣೆಯ ಅಂಗವಾಗಿ ಆಲೂರು ವೆಂಕಟರಾವ ಅವರ ಭಾವ ಚಿತ್ರಕ್ಕೆ ಪುμÁ್ಪರ್ಚನೆ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ, ಕವಿವಿ ವಿಶ್ರಾಂತಿ ಕುಲಪತಿ ಡಾ. ಪ್ರಮೋದ ಗಾಯಿ ಕರ್ನಾಟಕ ಎಂಬ ಪದವನ್ನು ತಂದು ಕೊಟ್ಟವರು ಆಲೂರು ವೆಂಕಟರಾವ. ವಿದ್ಯಾರ್ಥಿಗಳು ಇವರ ಭಾವ ಚಿತ್ರವನ್ನು ನೋಡಿರಬಹುದು ಆದರೆ ಇವರ ಜೀವನ, ಸಾಧನೆಗಳ ಬಗ್ಗೆ ಯಾರಿಗೂ ಗೊತ್ತಿರುವುದಿಲ್ಲ, ಇವರು ಬರೆದಂತಹ ಪುಸ್ತಕ, ಸಾಹಿತ್ಯಗಳನ್ನು ಓದಿದರೆ ಇವರ ಸಂಪೂರ್ಣ ಜೀವನ ಚರಿತ್ರೆಯನ್ನು ತಿಳಿಯಬಹುದು ಎಂದು ಹೇಳಿದರು.
ಆಲೂರು ವೆಂಕಟರಾವ ಅವರು ಪತ್ರಿಕಾ ರಂಗಕ್ಕೆ ನೀಡಿದ ಕೊಡುಗೆ ಮತ್ತು ಪತ್ರಿಕಾ ರಂಗದಲ್ಲಿ ಭಾಷೆಯ ಬಳಕೆಯ ಕುರಿತು ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ನಿವೃತ್ತಿ ಸಂಪಾದಕ ಮನೋಜಗೌಡ ಪಾಟೀಲ ಅವರು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ದೀಪಕ ಆಲೂರು, ವೆಂಕಟೇಶ ದೇಸಾಯಿ, ಪಾರ್ವತಿ ಹಾಲಭಾವಿ ದಂಪತಿಗಳು ಮತ್ತು ವಿವಿಧ ಗಣ್ಯ ವ್ಯಕ್ತಿಗಳು ಹಾಗೂ ಶಾಲೆಯ ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.