ವೀರಶೈವ ಉಪ ಜಾತಿಗಳು ಒಂದಾಗಲಿ – ಕಳಕನಗೌಡ
ಸಂಜೆವಾಣಿ ವಾರ್ತೆ
ಕುಕನೂರ ಜು 13:   ವೀರಶೈವ ಉಪ ಜಾತಿಗಳು ಒಂದಾಗಿ, ಎಲ್ಲಾರು ಧರ್ಮದ ಹೆಸರಲ್ಲಿ ಸಂಘಟಿತರಾಗಬೇಕು ಎಂದು  ಕೊಪ್ಪಳ ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭದ ನೂತನ ಅಧ್ಯಕ್ಷ ಕಳಕನಗೌಡ ಕಲ್ಲೂರು ಹೇಳಿದರು.
 ಅವರು ಕುಕನೂರ ಪಟ್ಟಣದ ಅನ್ನದಾನೀಶ್ವರ ಮಠದಲ್ಲಿ  ಪೂಜ್ಯರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ ಈ ನಾಡಿನ ಪೂಜ್ಯರ ಕೃಪೆಯಿಂದ ಜಿಲ್ಲಾ ಅಧ್ಯಕ್ಷ ನಾಗಿದ್ದೇನೆ ಸಮಾಜದ ಋಣವನ್ನ ತೀರಿಸುವ ಕಾರ್ಯ ಮಾಡುತ್ತೇನೆ ವೀರಶೈವ ಉಪ ಜಾತಿಗಳು ಎಲ್ಲಾರು ಒಂದೇ ಎಂಬ ಭಾವನೆ ಮೂಡುವಂತೆ ಕೆಲಸ ಮಾಡುತ್ತೇನೆ, ಮುಂದಿನ ದಿನಗಳಲ್ಲಿ ಪ್ರತಿ ತಾಲೂಕಿಗೂ ಬೇಟಿ ನೀಡಿ ಆ ತಾಲೂಕಗಳ ಸಂಘಟನೆ ಮಾಡುತ್ತೇನೆ ಅದಕ್ಕೆ ಎಲ್ಲಾ ಸಹಕಾರ ಜೊತೆಗೆ ಪೂಜ್ಯರ ಮಾರ್ಗದರ್ಶನ ಇರಬೇಕು ಎಂದರು.
ನಂತರ ಶ್ರೀ ಮಠದ ಪೂಜ್ಯ ಡಾ ಮಹಾದೇವ ಸ್ವಾಮೀಜಿ ಮಾತನಾಡಿ ಕಳಕನಗೌಡ ಒಬ್ಬ ಧರ್ಮವಂತ ನಾಯಕ ಎಲ್ಲಾರನ್ನ ಕರೆದುಕೊಂಡು ಹೋಗುವ ಸಾಮಾರ್ಥ್ಯ ಇವರಿಗೆ ಇದೆ ಇಂತವರಿಂದ ಸಮಾಜ ಇನ್ನಷ್ಟು ಅಭಿವೃದ್ಧಿ ಯಾಗಲಿ ಎಂದರು..  ಈ ಸಂದರ್ಭದಲ್ಲಿ ಪೂಜ್ಯರು ಶ್ರೀಮಠದಿಂದ ಅವರನ್ನ ಸನ್ಮಾನಿಸಿ ಗೌರವಿಸಿದರು.
  ಗಂಗಾವತಿ ದೇಸಾಯಿ ಸೇರಿದಂತೆ ಸಮಾಜದ ಪ್ರಮುಖರು ಇದ್ದರು.