ಇಂದಿರಾ ಕ್ಯಾಂಟೀನ್‍ಗೆ ಭೂಮಿ ಪೂಜೆ
ನವಲಗುಂದ,ಜು13: ಆಶ್ರಯ ಯೋಜನೆ ಜಾರಿಯಲ್ಲಿದ್ದು, ಇನ್ನುಳಿದ ಬಡವರಿಗೆ ನಿವೇಶನ ಹಂಚಿಕೆ ಮಾಡಲು ಜಮೀನು ಖರೀದಿಸುವ ಸಲುವಾಗಿ ಸರ್ಕಾರ 5 ಕೋಟಿ 50ಲಕ್ಷ 80ಸಾವಿರ ಹಣ ಬಿಡುಗಡೆ ಮಾಡಿದೆ ಎಂದು ಶಾಸಕ ಹಾಗೂ ನಗರ ಆಶ್ರಯ ಸಮಿತಿ ಅಧ್ಯಕ್ಷರಾದ ಎನ್.ಹೆಚ್.ಕೋನರಡ್ಡಿ ಹೇಳಿದರು.
ನಗರದಲ್ಲಿ ಬಡವರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಉಪಹಾರ ಒದಗಿಸಲು ಪುರಸಭೆ ಎದುರಿಗೆ ಲೋಕೋಪಯೋಗಿ ಇಲಾಖೆಯ ಜಾಗೆಯಲ್ಲಿ ನೂತನವಾಗಿ “ಇಂದಿರಾ ಕ್ಯಾಂಟಿನ” ಕಟ್ಟಡದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಮೂರು ತಿಂಗಳಲ್ಲಿ ಕಟ್ಟಡ ನಿರ್ಮಿಸಿ ಉಪಹಾರ ವಿತರಿಸಲು ಕ್ರಮ ತೆಗೆದುಕೊಳ್ಳಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಜೀವನ ಪವಾರ, ಪ್ರಕಾಶ ಶಿಗ್ಲಿ, ಮಂಜು ಜಾಧವ, ಮೋದಿನ ಶಿರೂರ, ಸುರೇಶ ಮೇಟಿ, ಹನಮಂತ ವಾಲಿಕಾರ, ಶ್ರೀಮತಿ ಪದ್ಮಾವತಿ ಪೂಜಾರ, ಹುಸೇನಬಿ ಧಾರವಾಡ, ಆಶ್ರಯ ಸಮಿತಿ ಸದಸ್ಯರಾದ ಮದಾರಸಾಬ ಉಗರಗೋಳ, ಲಕ್ಷ?ಮಣ ಹಳ್ಳದ, ಕೆ.ಡಿ.ಪಿ ಸಮಿತಿ ಸದಸ್ಯರಾದ ಶ್ರೀಮತಿ ನಂದಿನಿ ಹಾದಿಮನಿ ನಗರದ ಪ್ರಮುಖರಾದ ಜಯಾ ಜಿನಗಾ, ಪಕ್ಕು ಯಡ್ರಾವಿ, ಬಸು ಈಟಿ, ಏಕನಾಥ ಜಾಧವ, ಮುತ್ತಣ್ಣ ಹೊನಕೇರಿ ಮುಖ್ಯಾಧಿಕಾರಿ ವೆಂಕಟೇಶ ನಾಗನೂರ, ಕ್ಷೇತ್ರ ಶಿಕ್ಷಣಾಧಿಕಾರಿ, ಮಲ್ಲಾಡ, ಗುತ್ತಿಗೆದಾರ ಸಂಸ್ಥೆಯಾದ ಎಕ್ಸ್‍ಎಲ್ ಪ್ರಿಕಾಸ್ಟ ಪರವಾಗಿ ಮಹಮ್ಮದ ಜೊಹಾರ ಸೇರಿದಂತೆ ಮುಂತಾದವರು ಉಪಸ್ತಿತರಿದ್ದರು.