ಕೇಂದ್ರದ ಮಲತಾಯಿ ಧೋರಣೆ ವಿರುದ್ಧ ಪ್ರತಿಭಟನೆ
ನವಲಗುಂದ, ಜು13 : ಜುಲೈ 21 ರಂದು ನವಲಗುಂದ-ನರಗುಂದ ರೈತ ಬಂಡಾಯದ ರೈತ ಹುತಾತ್ಮ ದಿನಾಚರಣೆ ಇದ್ದು ಅಂದು ನವಲಗುಂದದಲ್ಲಿ ಮಹದಾಯಿ ಕಳಸಾ-ಬಂಡೂರಿ ಯೋಜನೆ ಜಾರಿಗೆ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ವಿರುದ್ಧ ರೈತರ ಬೃಹತ್ ಪ್ರತಿಭಟನೆ ಮಾಡುತ್ತೇವೆ ಎಂದು ಶಾಸಕ ಎನ್ ಎಚ್ ಕೋನರಡ್ಡಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡ, ಬೆಳಗಾವಿ, ಗದಗ ಹಾಗೂ ಬಾಗಲಕೋಟ 4 ಜಿಲ್ಲೆಗಳ 13 ತಾಲ್ಲೂಕುಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವೆ. ಸಂಸದರು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕೆಂದರು.
ಕಳಸಾ ಬಂಡೂರಿಗೆ ತಡೆ ನೀಡಲು ಗೋವಾ ರಾಜ್ಯ ಸರಕಾರ ಸಂಚು ರೂಪಿಸುತ್ತಿದ್ದು ನಮ್ಮ ಸಂಸದರೆಲ್ಲರೂ ಒಗ್ಗಟ್ಟಾಗಿ ಅದನ್ನು ತಡೆಯಬೇಕು ಆ ಯೋಜನೆ ಆರಂಭಕ್ಕೆ ಎಲ್ಲ ಸಿದ್ಧತೆ ನಡೆದಿರುವಾಗ ಗೋವಾ ಮುಖ್ಯಮಂತ್ರಿ ಪ್ರವಾಹ ಪ್ರಾಧಿಕಾರ ಕಳುಹಿಸುವ ಮೂಲಕ ವಿಳಂಬ ಧೋರಣೆ ಅನುಸರಿಸುವ ತಂತ್ರ ಹೂಡಿದ್ದಾರೆ ಎಂದರು.