ಸನ್ಮಾನ ಕಾರ್ಯಕ್ರಮ
ಲಕ್ಷ್ಮೇಶ್ವರ,ಜು13: ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಕಳೆದ 36 ವರ್ಷಗಳಿಂದ ನೀರಘಂಟಿ ಅಂದರೆ ವಾಟರ್ಮನ್ ಸೇವೆ ಸಲ್ಲಿಸಿ ನಿವೃತ್ತಿಯಾದ ಗುಡ್ಡಪ್ಪ ಭೀಮಪ್ಪ ಗುಡಿಮನಿ ಅವರನ್ನು ಗ್ರಾಮ ಪಂಚಾಯಿತಿಯ ವತಿಯಿಂದ ದಂಪತಿ ಸಮೇತ ಸನ್ಮಾನಿಸಿ ಸರ್ಕಾರದ ಉಪದಾನದ ಚೆಕ್ಕನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವಿ ಎಸ್ ಕೊರಕ್ಕನವರ್ ಮಾತನಾಡಿ ಸರ್ಕಾರದ ನಿಯಮಾವಳಿ ಪ್ರಕಾರ ಸೇವಾ ಅವಧಿ ಮುಗಿದ ನಂತರ ಎಲ್ಲರೂ ನಿವೃತ್ತಿ ಆಗಲೇ ಬೇಕಾಗುತ್ತದೆ ಆದರೆ ಸೇವಾ ಅವಧಿಯಲ್ಲಿ ಅವರು ಸಲ್ಲಿಸಿದ ಸೇವೆ ಎಂದಿಗೂ ಮರೆಯದ ಹಾಗೆ ಇರುತ್ತದೆ ಎಂದು ಹೇಳಿ ನೌಕರನಿಗೆ ಮೂಲವೇತನಕ್ಕೆ ಸೇವಾದಿಯವರೆಗಿನ ಚೆಕ್ಕನ್ನು ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ದುಂಡವ್ವ ಹಾದಿಮನಿ ವಹಿಸಿದರು ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಶೈಲಾ ಜನಿವಾರದ ಸೇರಿದಂತೆ ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರು ಸರ್ವ ಸಿಬ್ಬಂದಿಗಳು ಭಾಗವಹಿಸಿದ್ದರು.