ವನಮಹೋತ್ಸವ ಕಾರ್ಯಕ್ರಮ
ಲಕ್ಷ್ಮೇಶ್ವರ,ಜು13: ತಾಲೂಕಿನ ಯಳವತ್ತಿ ಗ್ರಾಮದಲ್ಲಿ ಶಿರಹಟ್ಟಿ ಸಾಮಾಜಿಕ ವಲಯ ಅರಣ್ಯ ಇಲಾಖೆಯ ವತಿಯಿಂದ ಗ್ರಾಮದ ರುದ್ರ ಭೂಮಿಯಲ್ಲಿ ಸಸಿ ನೆಡುವ ಮೂಲಕ ವನಮಹೋತ್ಸವಕ್ಕೆ ಶಾಸಕ ಡಾಕ್ಟರ್ ಚಂದ್ರು ಲಮಾಣಿ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಪರಿಸರದ ಮೇಲೆ ವಿಶೇಷ ಕಾಳಜಿಯನ್ನು ವಹಿಸಬೇಕು ಪರಿಸರವನ್ನು ನಾವು ಕಾಪಾಡಿದರೆ ಪರಿಸರ ನಮ್ಮನ್ನು ಕಾಪಾಡುತ್ತದೆ ಪ್ರತಿ ವರ್ಷ ಸರ್ಕಾರ ಮಳೆಗಾಲದಲ್ಲಿ ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ವನಮೋತ್ಸವ ಹಮ್ಮಿಕೊಳ್ಳುತ್ತಿದ್ದು ನೆಟ್ಟ ಗಿಡಗಳನ್ನು ಪ್ರತಿಯೊಬ್ಬರು ಉಳಿಸಿ ಬೆಳೆಸಿ ಸಂರಕ್ಷಿಸುವ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಇಲಾಖೆಯ ಯೋಜನೆಗಳನ್ನು ವಿವರಿಸಿ ತಾಲೂಕಿನಾದ್ಯಂತ ರಸ್ತೆ ಬದಿ ಸರ್ಕಾರಿ ನಿವೇಶನ ರೈತರಿಗೆ ಬದುವುಗಳ ಮೇಲೆ ಮತ್ತು ಶಾಲಾ-ಕಾಲೇಜುಗಳ ಆವರಣಗಳಲ್ಲಿ ಸಸಿ ನೆಡಲಾಗುತ್ತಿದೆ ಎಂದು ಹೇಳಿದ ಸಾಮಾಜಿಕ ವಲಯ ಅರಣ್ಯಾಧಿಕಾರಿ ಕೌಶಿಕ್ ದಳವಾಯಿಯವರು ಸಾರ್ವಜನಿಕರು ನೆಟ್ಟ ಸಸಿಗಳನ್ನು ಕಾಪಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಯಳವತ್ತಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಷ್ಮಾ ಭಾನು ಹಳೆಮನೆ ಉಪಾಧ್ಯಕ್ಷರಾದ ಬಸವಣ್ಣಪ್ಪ ಚಿಣಗಿ ಶಿವಯೋಗಿ ಹೊಸಕೇರಿ ವಿರೂಪಾಕ್ಷಪ್ಪ ಮೇಟಿ ಬಸನಗೌಡ ಪಿಡ್ಡನಗೌಡರ ರಸೂಲ್ ಸಾಬ್ ಹಳೆಮನೆ ಸಾಮಾಜಿಕ ವಲಯ ಅರಣ್ಯ ಇಲಾಖೆಯ ವನಪಾಲಕ ಮಹಾಂತೇಶ್ ಲಮಾಣಿ ಶಿವಯ್ಯ ಮಠಪತಿ ಸೇರಿದಂತೆ ಗ್ರಾಮಸ್ಥರು ಗ್ರಾಪಂ ಸದಸ್ಯರು ಹಿರಿಯರು ಮುಖಂಡರು ಭಾಗವಹಿಸಿದ್ದರು.