ಕೂಡ್ಲಿಗಿ ಆಜಾದ್ ನಗರದಲ್ಲಿ ಓಣಿ ಸುತ್ತಿದ ಕರಡಿ.
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜು.13 :- ಪಟ್ಟಣದ ಆಜಾದ್ ನಗರದಲ್ಲಿ ಮನೆಗಳ ಮುಂದೆ ಓಣಿ ಸುತ್ತುವ ಮೂಲಕ  ಓಡಾಟ ಮಾಡುವುದು ಅಲ್ಲಿನ ಹುಳ್ಳಿ ಅಜ್ಜಪ್ಪ ಎನ್ನುವವರ  ವಾಸದ ಮನೆಯೊಂದರಲ್ಲಿರುವ ಸಿ ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಪಟ್ಟಣದ ಆಜಾದ್ ನಗರದಲ್ಲಿ ನಿನ್ನೆ ನಸುಕಿನ ಜಾವ 4-18ಗಂಟೆಗೆ ಮನೆಯ ಮುಂದೆ ರಾಜಾರೋಷವಾಗಿ ಹೋಗುವ ಕರಡಿ ಚಿತ್ರಣವನ್ನು ಹುಳ್ಳಿ ಅಜ್ಜಪ್ಪ ಎನ್ನುವವರ ಮನೆಯಲ್ಲಿ ಹಾಕಲಾಗಿರುವ ಸಿ ಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಇದೇ ರೀತಿಯ ಕರಡಿ ಪಟ್ಟಣದ ಮಹಾದೇವ ಮೈಲಾರ ಕ್ರೀಡಾಂಗಣದಲ್ಲಿ ಬೆಳಿಗ್ಗೆ 4ಗಂಟೆಗೆ ಸಮರ್ಥ ಎನ್ನುವ ಯುವಕ ಜಾಗಿಂಗ್ ಹೋದ ಸಂದರ್ಭದಲ್ಲಿ ಕಂಡಿದ್ದು ಅದು ಸಹ ಮೊಬೈಲ್ ನಲ್ಲಿ ಸೆರೆಯಾಗಿದೆ ಎಂದು ಹೇಳಬಹುದಾಗಿದ್ದು ಬಹುಷಃ ಎರಡು ಜಾಗದಲ್ಲಿ ಕಂಡ ಕರಡಿ ಒಂದೇ ಎನಿಸುತ್ತಿದ್ದೂ ಕರಡಿ ಕ್ರೀಡಾಂಗಣದ ಮೂಲಕ ಆಜಾದ್ ನಗರದತ್ತ ಸಾಗಿ ಓಣಿಗಳಲ್ಲಿನ ಮನೆಯ ಮುಂದೆ ಹೋಗುವಾಗ ಹುಳ್ಳಿ ಅಜ್ಜಪ್ಪರ ಮನೆಯ ಸಿ ಸಿ ಕ್ಯಾಮರಾದಲ್ಲಿ ಸೆರೆಯಾಗಿರಬಹುದು ಎಂದು ಹೇಳಬಹುದಾಗಿದೆ.
ಆಜಾದ್ ನಗರದ ಕೆಂಗವ್ವನ ಬೀಳು ಎಂದು ಹೆಸರಿರುವ ಜಾಗದಲ್ಲಿ ಈಗ ಸಾಕಷ್ಟು ಮನೆಗಳಾಗಿದ್ದು ಅಲ್ಲಿಯೇ ಸಮೀಪದಲ್ಲಿ ಉಜ್ಜಿನರ್ ಹಳ್ಳ ಹರಿಯುತ್ತದೆ ಅಲ್ಲದೆ ಮುಂದೆ ದಾಟಿದಂತೆ ವಿದ್ಯಾನಗರ ಮತ್ತು ಮುಂದಕ್ಕೆ ಸಾಗಿದರೆ ರಾಷ್ಟ್ರೀಯ ಹೆದ್ದಾರಿ 50ಸಮೀಪವಾಗಲಿದೆ ಅಲ್ಲಿನ ಸುತ್ತಮುತ್ತಲಿನ ಹೊಲಗಳಿಂದ ಆಹಾರ ತಿಂದು ಇನ್ನಷ್ಟು ಆಹಾರ ಹುಡುಕಿಕೊಂಡು ಪಟ್ಟಣದಲ್ಲಿ ಕರಡಿ ನಸುಕಿನ ಜಾವ 5ಗಂಟೆವರೆಗೆ ಸುತ್ತಾಡುತ್ತಿದೆ.
ಜನತೆಗೆ ಎಚ್ಚರ : ಆಹಾರ ಹುಡಿಕಿಕೊಂಡು ಬರುವ ಕರಡಿಗಳು ಪಟ್ಟಣದೊಳಗೆ ಪ್ರವೇಶ ಮಾಡುವ ಬಗ್ಗೆ ವಿಡಿಯೋಗಳು ವೈರೆಲ್ ಆಗುತ್ತಿದ್ದು ಬೆಳಕು ಆಗುವ ಮುನ್ನ ಯಾವುದೇ ಕಾರಣಕ್ಕೂ ನಿದ್ದೆಯಿಂದ ಏಳದೆ ಬಯಲು ಬಹಿರ್ದೆಸೆಗೆ ಹೋಗುವ ಬಗ್ಗೆ ಹಾಗೂ ಮನೆಯ ಮುಂದೆ ಒಬ್ಬರೇ ಓಡಾಟ ಮಾಡದೇ ಮೂರ್ನಾಕು ಜನ ಇರುವುದು ಒಳ್ಳೆಯದು ಎಂದು ಜನತೆಗೆ ಎಚ್ಚರಿಕೆ ಸಂದೇಶವನ್ನು ಅಲ್ಲಿನ ಅಕ್ಕಪಕ್ಕದ ಜನತೆಗೆ ಅಧಿಕಾರಿ ವರ್ಗದವರು ತಿಳಿಸುತ್ತಿದ್ದು ಪಟ್ಟಣ ವ್ಯಾಪ್ತಿಯ ಹಳ್ಳ, ಹೊಲಗಳಿರುವ ಭಾಗದಲ್ಲಿ ನಾಯಿಗಳ ಬೊಗಳುವಿಕೆ ಗಮನಿಸಿ ಅರಣ್ಯ ಇಲಾಖೆಯ ಮಾಹಿತಿಗೆ ತರುವಂತೆ ಅಧಿಕಾರಿಗಳು ತಿಳಿಸುತ್ತಿದ್ದಾರೆ.