ತಪ್ಪದೇ ಬೆಳೆವಿಮೆ ನೊಂದಾಯಿಸಿ – ಮಹಾಂತೇಶ್.
ಕೂಡ್ಲಿಗಿ. ಜು.13 :- ಬೆಳೆವಿಮೆ ಮಾಡಿಸಿದಲ್ಲಿ ಬೆಳೆದ ಬೆಳೆ ಆಕಸ್ಮಿಕ ಅತಿವೃಷ್ಟಿ ಅನಾವೃಷ್ಟಿ ಯಿಂದ  ಬೆಳೆನಷ್ಟವಾದರೆ ಬೆಳೆವಿಮೆ ಪರಿಹಾರ ನೀಡುವ ಮೂಲಕ ರೈತರ ಬದುಕಿನಲ್ಲಿ ತುಸು ನೆಮ್ಮದಿ ತರಲಿದೆ ತಪ್ಪದೆ ಎಲ್ಲಾ
ರೈತರು ತಮ್ಮ ಬೆಳೆಗಳಿಗೆ  ಬೆಳೆವಿಮೆ ನೋಂದಾಯಿಸಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಟ್ಟೂರು ವಲಯದ ಕೃಷಿ ಅಧಿಕಾರಿ ಮಹಂತೇಶ್ ತಿಳಿಸಿದರು.
ಅವರು ತಾಲೂಕಿನ ಸಕಲಾಪುರದಹಟ್ಟಿ ಗ್ರಾಮದಲ್ಲಿ ರೈತರ ಜಮೀನಿನಲ್ಲಿ ಶುಕ್ರವಾರ ನಡೆದ ಬೆಳೆವಿಮೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ  ಪ್ರಧಾನಮಂತ್ರಿ ಫಸಲ್‌ಬಿಮಾ ಯೋಜನೆಯಡಿ ರೈತರು ಸರಕಾರ ನಿಗದಿಪಡಿಸಿರುವ ಬೆಳೆಗಳಿಗೆ ವಿಮಾ ಮೊತ್ತವನ್ನು ಸಕಾಲದಲ್ಲಿ ಪಾವತಿಸಿ ನೋಂದಾಯಿಸಬೇಕು. ಇದರಿಂದ ಪ್ರಕೃತಿ ವಿಕೋಪದಿಂದ ಬೆಳೆನಷ್ಟವಾದಲ್ಲಿ ಪರಿಹಾರ ಪಡೆಯಲು ಅನುಕೂಲವಾಗಲಿದೆ. ಹೀಗಾಗಿ, ಪ್ರತಿಯೊಬ್ಬರೂ ಸರಕಾರದ ಯೋಜನೆಯ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೋಡಲ್ ಅಧಿಕಾರಿ ಶಿವರಾಜ, ಒಕ್ಕೂಟದ ಪದಾಧಿಕಾರಿ ತಿಪ್ಪೀರಮ್ಮ ಸಕಲಾಪುರದಹಟ್ಟಿ, ಸಂಘದ ಸದಸ್ಯರು, ರೈತ ಮಹಿಳೆಯರು ಸೇರಿ ಇತರರಿದ್ದರು. ಇದಲ್ಲದೆ, ಕಾನಹೊಸಹಳ್ಳಿ ವಲಯದ ಹುಲಿಕೆರೆ, ಕಾನಮಡುಗು, ಸಕಲಾಪುರದಹಟ್ಟಿ ಗ್ರಾಮಗಳ ಸೇವಾಕೇಂದ್ರದ ಸಿಬ್ಬಂದಿ ನಾನಾ ಕಡೆ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ಕುರಿತು ಜಾಗೃತಿ ಮೂಡಿಸಲಾಯಿತು.