ವಿಶ್ವ ಜನಸಂಖ್ಯಾ ದಿನಾಚರಣೆ
ಬಾಗಲಕೋಟೆ,ಜು13 : ಜನಸಂಖ್ಯೆ ಹೆಚ್ಚಳದಿಂದಾಗುವ ಪರಿಣಾಮಗಳನ್ನು ವಿದ್ಯಾರ್ಥಿಗಳು ಅರಿತುಅದರ ನಿಯಂತ್ರಣದಲ್ಲಿ ಮಹತ್ವದ ಪಾತ್ರವನ್ನು ವಹಿಸಬೇಕು ಎಂದು ಪ್ರಾಚಾರ್ಯ ಶ್ರೀನಿವಾಸ ನರಗುಂದ ಹೇಳಿದರು.
ನಗರದ ವಿದ್ಯಾ ಪ್ರಸಾರಕ ಮಂಡಳದ ಎಸ್.ಆರ್. ನರಸಾಪೂರ ಕಲಾ ಹಾಗೂ ಎಂ.ಬಿ. ಶಿರೂರ ವಾಣಿಜ್ಯ ಮಹಾವಿದ್ಯಾಲಯದಅರ್ಥಶಾಸ್ತ್ರ ವಿಭಾಗ ಆಯೋಜಿಸಿದ್ದ ವಿಶ್ವಜನಸಂಖ್ಯೆ ದಿನಾಚರಣೆಕಾರ್ಯಕ್ರಮದಲ್ಲಿಅವರು ಮಾತನಾಡಿದರು.
ಸರ್ಕಾರಜನಸಂಖ್ಯೆ ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ತಗೆದುಕೊಳ್ಳುತ್ತಿದೆ. ಇದರಜೊತೆಗೆಜನರಲ್ಲಿಜಾಗೃತಿಯನ್ನು ಮೂಡಿಸುವುದರ ಮೂಲಕ ಇಂತಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.
ಜನಸಂಖ್ಯೆ ಹೆಚ್ಚಳದಿಂದ ಅಭಿವೃದ್ಧಿಗೆ ಹಿನ್ನೆಡೆಯಾಗತ್ತದೆ. ಯುವ ಸಮುದಾಯಇಂತಹ ಸಂಗತಿಗಳನ್ನು ತಿಳಿದುಕೊಂಡು ಉಳಿದವರಲ್ಲೂ ಇದರ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕುಎಂದು ಸಲಹೆ ನೀಡಿದರು. ನಮ್ಮದೇಶದಒಟ್ಟುಜನಸಂಖ್ಯೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವಯುವ ಸಮುದಾಯದ ಸಾಮಥ್ರ್ಯವನ್ನು ಸರಿಯಾದರೀತಿಯಲ್ಲಿ ಬಳಸಿಕೊಂಡು ಅವರಲ್ಲಿ ವಿವಿಧ ಕೌಶಲಗಳನ್ನು ಬೆಳೆಸಿದಲ್ಲಿ ಅವರುದೇಶಕ್ಕೆ ಆಸ್ತಿಯಾಗಬಲ್ಲರುಎಂದರು.
ಉಪನ್ಯಾಸಕಿಎಸ್.ಪಿ.ದೇಶಪಾಂಡೆ ಮಾತನಾಡಿ ಸಶಕ್ತ ಭಾರತ ನಿರ್ಮಾಣ ಮಾಡುವಉದ್ದೇಶದಿಂದ ಸರ್ಕಾರ ವಿವಿಧ ಕಾರ್ಯಕ್ರಮಗಳನ್ನು ಜಾರಿಗೆತರುತ್ತಿದೆಎಂದರು.
ವಿದ್ಯಾರ್ಥಿಗಳಾದ ಸಂಗೀತಾ ಭಜಂತ್ರಿ ಮತ್ತು ಸುಗಂಧಾರಾಮೋಡಗಿ ಮಾತನಾಡಿದರು.
ಸ್ವಪ್ನಾಗೌಡರ ಪ್ರಾರ್ಥಿಸಿದರು. ಉಪನ್ಯಾಸಕಿಎ.ಎ.ಗಂಗಲ್ ನಿರೂಪಿಸಿದರು. ಉಪನ್ಯಾಸಕಿಎನ್.ಎಚ್.ಹವಾಲ್ದಾರ ವಂದಿಸಿದರು.