ನಾಲ್ವರು ದರೋಡೆಕೋರರ ಬಂಧನ
ಬಾದಾಮಿ,ಜು13: ತಾಲೂಕಿನ ಮಹಾಕೂಟದ ಹತ್ತಿರ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ರಾತ್ರಿ ವೇಳೆ ಓಡಾಡುತ್ತಿದ್ದ ಐವರು ದರೋಡೆಕೋರರು ಗಸ್ತು ಕರ್ತವ್ಯದಲ್ಲಿದ್ದ ಪೆÇಲೀಸ್ ಸಿಬ್ಬಂದಿಯನ್ನು ನೋಡಿ ಓಡಿ ಹೋಗುತ್ತಿದ್ದಾಗ ನಾಲ್ವರನ್ನು ಬಂಧಿಸಿರುವ ಬಗ್ಗೆ ಇಲ್ಲಿನ ಪೆÇಲೀಸ್ ಮೂಲಗಳು ತಿಳಿಸಿವೆ.
ಇದರಲ್ಲಿ ಓರ್ವ ವಯಸ್ಕನಿದ್ದು, ಉಳಿದ ಮೂವರು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರು ಇದ್ದಾರೆ, ಓರ್ವ ಆರೋಪಿ ಪರಾರಿಯಾಗಿದ್ದಾನೆ. ಇವರಿಂದ 10 ಲಕ್ಷ ರೂ. ಮೌಲ್ಯದ ವಾಹನ ಮತ್ತು 6.27 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಗಳ 42 ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ.
ದರೋಡೆಗೆ ಬಳಸಲು ಹಗ್ಗ, ರಾಡ್, ಖಾರದಪುಡಿಯನ್ನು ತಂದಿದ್ದು, ದರೋಡೆ ಸಮಯದಲ್ಲಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದರು ಎಂದು ತಿಳಿಸಿರುವ ಅವರು ಈ ಮೊಬೈಲಗಳನ್ನು ವಿವಿಧ ನಗರ ಪ್ರದೇಶಗಳಲ್ಲಿ ಸಂತೆ ಸಮಯದಲ್ಲಿ ದರೋಡೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಎಸ್ಪಿ ಅಮರನಾಥ ರ ರಡ್ಡಿ, ಡಿವೈಎಸ್ಪಿ ಪ್ರಸನ್ನ ದೇಸಾಯಿ, ವಿಶ್ವನಾಥರಾವ್ ಕುಲಕರ್ಣಿ ಇವರ ಮಾರ್ಗದರ್ಶನದಲ್ಲಿ ಸಿಪಿಐ ಕರಿಯಪ್ಪ ಬನ್ನೆ, ಪಿಎಸ್‍ಐ ವಿಠಲ ನಾಯಕ, ವಿಜಯಕುಮಾರ ರಾಠೋಡ, ಸಿಬ್ಬಂದಿ ಎ.ಎಸ್. ಚವ್ಹಾಣ, ಎಸ್.ಬಿ. ಮುತ್ತಲಗೇರಿ, ವಿ.ಜಿ. ರಾಠೋಡ, ಎನ್.ಪಿ. ಅಂಕೋಲಿ, ಜಿ.ಎಸ್. ಸುನಗದ, ಎಮ್.ಬಿ. ಖಾನಾಪುರ, ಎಲ್. ಎನ್. ತೋಳಮಟ್ಟಿ, ಬಿ.ಎಸ್. ಹುಲ್ಲಣ್ಣವರ, ಎಮ್. ಎಲ್. ಗೌಡರ, ಎಚ್.ಎಸ್. ಮಸಳಿ, ವೈ.ಜಿ. ಕುರಬರ, ಎಸ್.ಎಲ್. ಚಲವಣ್ಣವರ, ಚಂದ್ರಶೇಖರ ಜೆ.ಎಂ., ಎಮ್.ಪಿ. ಹರದೊಳ್ಳಿ ಇತರರು ಇದ್ದರು.