ಸರ್ಕಾರಗಳು ಶಿಕ್ಷಣಕ್ಕೆ ಕಡೆ ಸ್ಥಾನ
ಕೆಜಿಎಫ್.ಜು೧೩- ನಮ್ಮ ನಾಡಿನಲ್ಲಿ ಸರ್ಕಾರಗಳು ಎಲ್ಲಾ ವಿಭಾಗಗಳಿಗೂ ಅಧ್ಯತೆಯನ್ನು ನೀಡುತ್ತದೆ ಆದರೆ ಶಿಕ್ಷಣಕ್ಕೆ ಅತ್ಯಂತ ಕನಿಷ್ಠ ಸ್ಥಾನವನ್ನು ಸಹ ನೀಡದಿರುವುದು ಬೇಸರದ ಸಂಗತಿ ಪೋಷಕರಿಗೆ ಶಿಕ್ಷಣ ಸಂಸ್ಥೆಗಳು ವಿಧ್ಯಾರ್ಥಿಗಳಲ್ಲಿ ಅಂಕ ಪಡೆಯುವುದನ್ನೇ ಸಾಧನೆ ಎಂದು ಪರಿಗಣಿಸದೆ ವಿದ್ಯಾರ್ಥಿಗಳನ್ನು ಉತ್ತಮ ಮಾನವನಾಗಿ ಮಾಡುವ ಶಿಕ್ಷಣ ಸಂಸ್ಥೆಗಳಾಗಬೇಕು ಎಂದು ಬೆಂಗಳೂರು ವಿವಿ ಕುಪಪತಿ ನಿರಂಜನ ವಾನಳ್ಳಿ ಹೇಳಿದರು.
ನಗರದ ಮಹಾವೀರ್ ಜೈನ್ ಕಾಲೇಜಿನಲ್ಲಿ ಪದವಿ ಪೂರ್ಣಗೊಳಿಸಿದ ವಿಧ್ಯಾರ್ಥಿಗಳಿಗೆ ಬಿಲ್ಕೋಡುಗೆ ಸಮಾರಂಭ( ಗ್ರಾಜ್ಯುಯೆಷನ್ ಡೇ)ದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವಿವಿ ಕುಲಪತಿ ನಿರಂಜನ ವಾನಳ್ಳಿ ಮಾತನಾಡಿ ದೇಶದಲ್ಲಿ ಎಲ್ಲಾ ಕ್ಷೇತ್ರಗಳನ್ನು ಮುಂದುವರೆಯುವ ನಿಟ್ಟಿನಲ್ಲಿ ಹೆಚ್ಚಿನ ಆಸಕ್ತಿಯನ್ನು ಸಮಾಜ ಹಾಗೂ ಸರ್ಕಾರಗಳು ಮಾಡುತ್ತವೆ ಆದರೆ ಶಿಕ್ಷಣ ಕ್ಷೇತ್ರವನ್ನು ಅಭಿವೃದ್ಧಿಪಡಿಸುವತ್ತ ನಿರ್ಲಕ್ಷವಹಿಸುತ್ತಾರೆ ಏಕೆ ಎಂದು ಅರ್ಥವಾಗದ ಸಂಗತಿಯಾಗಿದೆ ಎಂದು ಹೇಳಿದರು.
ಶಿಕ್ಷಣ ಎಂಬುದು ಹರಿಯುವ ನದಿಯಂತೆ ವಿದ್ಯಾರ್ಥಿಗಳು ವಿದ್ಯೆಯನ್ನು ಪಡೆಯುವುದು ಅತಿ ಮುಖ್ಯವಾಗಿರುತ್ತದೆ ಇಂದಿನ ಸ್ಪರ್ಧತ್ಮಕ ಯುಗದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ವಿವಿಧ ಕೋರ್ಸ್‌ಗಳು ಪ್ರಾರಂಭವಾಗಿದ್ದು ವಿಧ್ಯಾರ್ಥಿಗಳು ಅಳೆದು ತೊಗಿ ನಿಮಗೆ ಆಸಕ್ತಿಯಿರುವ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಮುಂದುವರೆದಾಗ ಸಾಧನೆ ನಿಮ್ಮ ಪಾಲಾಗಲಿದೆ ಎಂದರು.
ಬಂಗಾರಪೇಟೆ ಕೆಜಿಎಫ್ ಎಲ್ಲಾ ಒಂದೇ ಎಂದು ತಿಳಿದುಕೊಂಡಿದ್ದೇ ಆದರೆ ಪ್ರಥಮ ಬಾರಿಗೆ ಇಲ್ಲಿಗೆ ಬಂದಾಗ ತಿಳಿದಿದ್ದು ಕೆಜಿಎಫ್ ಬೇರೆ ಬಂಗಾರಪೇಟೆ ಬೇರೆ ಎಂದು ಒಟ್ಟಿನಲ್ಲಿ ಎರಡರಲ್ಲೂ ಬಂಗಾರವಿದೆ ಎಂದರು.