ರಸ್ತೆಗೆ ಹೊಸ ಹೆಸರು: ಶಾಸಕರ ಆಕ್ಷೇಪ
ಚಿಕ್ಕಬಳ್ಳಾಪುರ.ಜು.೧೩-ರಾಜಕೀಯವಾಗಿ ರಾಜ್ಯಕ್ಕೆ ಒಬ್ಬ ಸಂಸದ ಹಾಗೂ ಒಬ್ಬ ಶಾಸಕರನ್ನು ನೀಡಿರುವ ಪೆರೇಸಂದ್ರ ಗ್ರಾಮದ ಪ್ರಮುಖ ರಸ್ತೆಗೆ ತರಕಾರಿ ವೆಂಕಟಪ್ಪ ರಸ್ತೆ ಎಂದು ಹೆಸರಿಡಲು ಶಾಸಕರು ಮುಂದಾಗಿರುವುದು ಸರಿಯಲ್ಲ ಹಾಗೂ ಸಮರ್ಪಕವಾಗಿಯೂ ಇಲ್ಲ ಎಂದು ಭಗತ್ ಸಿಂಗ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್ ಬಿ ರೆಡ್ಡಿ ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿರುವ ಅವರ ಹೇಳಿಕೆ ಪೆರೆಸಂದ್ರ ಗ್ರಾಮ ಇಡೀ ತಾಲೂಕಿನಲ್ಲಿ ಅತ್ಯಂತ ಹೆಸರುವಾಸಿಯಾಗಿದ್ದು ರಾಜಕೀಯವಾಗಿ ಪೆರೇಸಂದ್ರ ಗ್ರಾಮದವರೇ ಆದ ಪ್ರದೀಪ್ ಈಶ್ವರ್ ಶಾಸಕರಾಗಿ ಹಾಗೂ ಡಾಕ್ಟರ್ ಕೆ ಸುಧಾಕರ್ ಸಂಸದರಾಗಿ ಆಯ್ಕೆಗೊಂಡಿರುವುದು ಈ ಊರಿನ ಹೆಗ್ಗಳಿಕೆಯಾಗಿದೆ ಆದರೆ ಇದೀಗ ಶಾಸಕ ಪ್ರದೀಪ್ ಈಶ್ವರ್ ಅವರು ತಮ್ಮ ತಾತ ತರಕಾರಿ ವೆಂಕಟಪ್ಪನವರ ಹೆಸರನ್ನು ಪೆ
ರೆಸಂದ್ರ ಕ್ರಾಸ್‌ನಿಂದ ಊರಿನ ಒಳಗೆ ಹೋಗುವ ಪ್ರಮುಖ ರಸ್ತೆಗೆ ಹೆಸರು ಇಡಲು ತೀರ್ಮಾನಿಸಿರುವುದು ಸರಿಯಾದ ಕ್ರಮ ಅಲ್ಲವೆಂದಿದ್ದಾರೆ.
ಹಾಗೆ ನೋಡಿದರೆ ನೂರಾರು ವರ್ಷಗಳಿಂದ ಫೆರೆಸಂದ್ರದಲ್ಲಿ ಚಕ್ಕಲಿ ಉದ್ಯಮ ಪ್ರಾರಂಭಿಸಿ ದೇಶ ವಿದೇಶಗಳಲ್ಲಿ ಖ್ಯಾತಿಗಳಿಸಿದ ಕೃಷ್ಣ ವೇಣಮ್ಮ ಸಂಸದ ಡಾಕ್ಟರ್ ಕೆ ಸುಧಾಕರ್ ಅವರ ವಂಶಸ್ಥರಾದ ರೆಡ್ಡಿ ಅವಲಪ್ಪ ಚಿಕ್ಕಬ್ಬಿಡ್ದಪ್ಪ ನಮ್ಮ ತಾತ ಪಟೇಲ್ ಅವರ ಕೊಂಡ ರೆಡ್ಡಿ ಪೇಟೆ ಸುಬ್ಬರಾಯಪ್ಪ ಕೃಷ್ಣ ರೆಡ್ಡಿ ಒಳಗೊಂಡಂತೆ ಅನೇಕ ಮಹನೀಯರು ಪೆರೆಸಂದ್ರ ಗ್ರಾಮ ಅತ್ಯಂತ ಹೆಚ್ಚು ಅಭಿವೃದ್ಧಿ ಸಾಧಿಸಲು ಕಾರಣಕರ್ತರಾಗಿದ್ದಾರೆ ಅವರೆಲ್ಲರ ಹೆಸರುಗಳನ್ನು ಇಡಬೇಕು ಎಂದರೆ ಇಡಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ಹಾಗೊಂದು ವೇಳೆ ಶಾಸಕರಿಗೆ ಈ ಪ್ರಮುಖ ರಸ್ತೆಗೆ ಹೆಸರನ್ನು ಇಡಬೇಕು ಎಂದು ಅನಿಸಿದರೆ ಮಹಾತ್ಮ ಗಾಂಧೀಜಿ ಡಾ. ಬಿಆರ್ ಅಂಬೇಡ್ಕರ್ ಅಥವಾ ಸರ್ದಾರ್ ಭಗತ್ ಸಿಂಗ್ ರವರ ಹೆಸರುಗಳಲ್ಲಿ ಯಾವುದಾದರೂ ಒಂದನ್ನು ಇಡಲಿ ಎಂದರು.
ಹೇಳಿಕೆ ಮುಖಾಂತರ ತಿಳಿಸಿದ್ದಾರೆ.