ಕಷ್ಟ ಕಾರ್ಪಣ್ಯಗಳೊಂದಿಗೆ ಜೀವಿಸುವುದು ಅನಿರ್ವಾಯ
ಬಂಗಾರಪೇಟೆ.ಜು.೧೩-ಮಾನವ ಮೂಲತಃ ಸಂಘ ಜೀವಿಯಾಗಿದ್ದು, ಪರಸ್ಪರ ಭಾವನೆಗಳ ವಿನಿಮಯದೊಂದಿಗೆ ಜೀವಿಸುವವನಾಗಿದ್ದಾನೆ. ಒಬ್ಬರು ಮತ್ತೊಬ್ಬರಿಗೆ ಸಹಕಾರ, ಪ್ರೀತಿ, ವಿಶ್ವಾಸ, ಕಷ್ಟ ಕಾರ್ಪಣ್ಯಗಳೊಂದಿಗೆ ಜೀವಿಸುವುದು ಅನಿರ್ವಾಯ, ರಕ್ತದಾನ ಜೀವನವನ್ನು ಉಳಿಸುವ ಬಹುದೊಡ್ಡ ಸೇವೆಯಾಗಿದೆ ಎಂದು ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.
ಪಟ್ಟಣದ ಹೊರವಲಯದ ಕೆಸರನಹಳ್ಳಿ ಗ್ರಾಮದ ಮಾರ್ಸ್ ಡಿಜಿಟಲ್ ಶಾಲೆಯ ಆವರಣದಲ್ಲಿ ಸೂರ್ಯ ತೇಜ ಪೌಂಡೇಶನ್ ಹಾಗೂ ಆರ್.ಎಲ್.ಜಾಲಪ್ಪ ವೈದ್ಯಕೀಯ ಸಂಶೋದನಾ ರಕ್ತ ನಿಧಿ ಕೇಂದ್ರ ಸಹಯೋಗದಲ್ಲಿ ಆಯೋಜಿಸಲಾಗಿದ್ದ, ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜೀವ ಮತ್ತು ಜೀವನ ಒಂದಕ್ಕೊಂದು ಪೂರಕ ಸಂಬಂಧವನ್ನು ಹೊಂದಿದೆ. ರಕ್ತದಾನ ಮಾಡುವುದು ಪ್ರತಿಯೊಬ್ಬ ಕರ್ತವ್ಯವಾಗಿದೆ. ಜನರಲ್ಲಿರುವ ತಪ್ಪು ಕಲ್ಪನೆಗಳು ಮರೆಯಾಗಿ ಸೇವಾ ಮನೋಭಾವದೊಂದಿಗೆ ಜೀವ ಉಳಿಸುವ ನಿಟ್ಟಿನಲ್ಲಿ ರಕ್ತದಾನ ಮಾಡುವುದು ಉತ್ತಮ ಎಂದರು.
ಮಾರ್ಸ್ ಡಿಜಿಟಲ್ ಶಾಲೆಯ ಕಾರ್ಯದರ್ಶಿ ಮಂಜುನಾಥ್ ಮಾತನಾಡಿ, ಸೂರ್ಯ ತೇಜ ಪೌಂಡೇಶನ್ ಏಕಪಥದಲ್ಲಿ ಸೇವಾ ಕಾರ್ಯವನ್ನು ಮಾಡದೇ ಸಮಾಜದ ಕೃಷಿ, ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ನಿರಂತರವಾಗಿ ಸೇವೆ ಮಾಡುತ್ತಿದ್ದಾರೆ. ಕೆಲವು ಟ್ರಸ್ಟ್ಗಳು, ಸಂಘಸಂಸ್ಥೆಗಳು, ಪೌಂಡೇಶನ್‌ಗಳು ಪ್ರಾರಂಭದಲ್ಲಿ ಉತ್ಸಕತದಿಂದ ಆರಂಭಿಸಿ ತದನಂತರ ದಿನಗಳಲ್ಲಿ ನಿರುತ್ಸಾಹ ತೋರುತ್ತಾರೆಂಬ ಮನೋಭಾವನೆ ನನ್ನದಾಗಿತ್ತು. ಆದರೆ ನನ್ನ ಕಲ್ಪನೆಯನ್ನೂ ಮೀರಿ ಸಮಾಜ ಸೇವೆ ಮಾಡುತ್ತಿರುವುದು ಅತ್ಯಂತ ಹೆಮ್ಮೆಯ ವಿಚಾರ. ನಾನು ಈಗಾಗಲೇ ೨೫ಭಾರಿ ರಕ್ತದಾನ ಮಾಡಿದ್ದೇನೆ. ಇದರಿಂದ ಯಾವುದೇ ಅಡ್ಡಪರಿಣಾಮಗಳು ಉದ್ಬವಿಸುವುದಿಲ್ಲ. ಮಾನವನ ದೇಹದಲ್ಲಿ ಹೊಸ ರಕ್ತ ಉತ್ಪತಿಯಾಗುವುದರ ಜೊತೆಗೆ ಹೊಸ ಹುರುಪು ಮತ್ತು ಚೇತನವನ್ನು ತಂದುಕೊಡುತ್ತದೆ, ಆದ್ದರಿಂದ ಪ್ರತಿಯೊಬ್ಬರು ರಕ್ತದಾನ ಮಾಡಿ ಎಂದರು.
ಈ ಸಂದರ್ಭದಲ್ಲಿ ಸೂರ್ಯ ತೇಜ ಪೌಂಡೇಶನ್‌ನ ಸಂಸ್ಥಾಪಕ ಅಧ್ಯಕ್ಷ ವೆಂಕಟೇಶ್ ಬಾಬು, ಗ್ರಂಥಪಾಲಕ ಬಾಬು ಪ್ರಸಾದ್, ಬೆನಿಸನ್ ಪೌಂಡೇಶನ್‌ನ ಸಂಸ್ಥಾಪಕ ಅಧ್ಯಕ್ಷ ಡಾ.ರಾಜ್‌ರೆಡ್ಡಿ, ಪ್ರಧಾನ ಕಾರ್ಯದರ್ಶಿ ಎಂ.ರಾಮಕೃಷ್ಣಪ್ಪ, ಅಗ್ನಿ ಶಾಮಕದಳದ ಸತೀಶ್‌ಕುಮಾರ್, ಸಹ ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ್.ಎಂ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.