ಒಬ್ಬರು ಎಲ್ಲರಿಗಾಗಿ – ಎಲ್ಲರೂ ಪ್ರತಿಯೊಬ್ಬರಿಗಾಗಿ
ಕೋಲಾರ,ಜು.೧೩: ಬಂಗಾರಪೇಟೆ ತಾಲ್ಲೂಕು ಹಂಚಾಳ ಗೇಟ್‌ನಲ್ಲಿರುವ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸಮೂಹ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಸಂಸ್ಥೆಯ ಅವರಣದಲ್ಲಿ ಕೋಲಾರ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಪಾಕರಹಳ್ಳಿ ಪಿ.ಎಂ. ವೆಂಕಟೇಶಪ್ಪರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಚಂದ್ರಶೇಖರ್ ಮಾತನಾಡಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಾಲಾಭಿವೃದ್ದಿ ಸಮಿತಿಯ ಕಾರ್ಯಾಧ್ಯಕ್ಷರಾಗಿ ೧\೪ ರಷ್ಟು ಶತಮಾನಕ್ಕೂ ಹೆಚ್ಚು ಕಾಲದಿಂದ ತುಂಬಾ ಅಕ್ಕರೆಯಿಂದ ಶಾಲೆಯ ಅಭಿವೃದ್ಧಿಗಾಗಿ ಸಹಕಾರ ನೀಡುತ್ತಿದ್ದಾರೆ ಇವರ ಸೇವೆ ಪ್ರಶಂಸನೀಯ ಎಂದರು.
ನಮ್ಮದು ಬಡಜನರಿಂದ ಕೂಡಿದ ಶ್ರೀಮಂತ ದೇಶವಾಗಿದೆ. ಸಹಕಾರ ಪದದ ಅರ್ಥ ತುಂಬಾ ವಿಶಾಲವಾದ ವಿಷಯ ವ್ಯಾಪ್ತಿಯನ್ನು ಹೊಂದಿದೆ. ಸಹಕಾರ ಪದ ಅರ್ಥಒಬ್ಬರು ಎಲ್ಲರಿಗಾಗಿ ಮತ್ತು ಎಲ್ಲರೂ ಪ್ರತಿಯೊಬ್ಬರಿಗಾಗಿ” ಎಂಬ ಅರ್ಥವಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಹಕಾರ ಮಂಡಳಿಯ ಸದಸ್ಯರು ಮತ್ತು ಅಧ್ಯಕ್ಷರ ಆಯ್ಕೆ ಮತದಾನದ ಮೂಲಕ ಆಯ್ಕೆಯಾಗುವ ವಿಧಾನ ಇಂದು ಬಹು ಕ್ಲಿಷ್ಠ ಮತ್ತು ಸ್ಪರ್ಧಾತ್ಮಕವಾಗಿರುತ್ತದೆ. ಕಾರಣ ಇಂದಿನ ಆಧುನಿಕ ಸಹಕಾರ ಸಂಘಗಳು ರಾಜಕೀಯ ಪ್ರೇರಿತ ಸಂಘಗಳಾಗಿರುತ್ತದೆ ಎಂದರು.
ಇಂದು ಜಾತಿ, ವರ್ಗ, ವೃತ್ತಿ, ಮತ್ತು ಲಿಂಗ, ಆಧಾರಿಸಿ ಇಂದು ಹಲವಾರು ಸಹಕಾರ ಸಂಘಗಳು ರಚನೆಯಾಗಿರುತ್ತವೆ. ಕೋಲಾರ ಜಿಲ್ಲಾ ಸಹಕಾರ ಒಕ್ಕೂಟಕ್ಕೆ ಪಾಕರಹಳ್ಳಿ ಪಿ.ಎಂ.ವೆಂಕಟೇಶಪ್ಪ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಿರುವುದು ನಮ್ಮೆಲ್ಲರಿಗೂ ತುಂಬಾ ಹೆಮ್ಮೆಯ ವಿಷಯವಾಗಿದೆ. ಶ್ರೀಯುತರು ತುಂಬಾ ಸರಳ ಸ್ವಬಾವ, ಸಮಾಜಸೇವೆಯ, ಸಹಕಾರಿ ಮುಖಿಗಳು ಬಾಲ್ಯದಿಂದಲೂ ಪ್ರಮಾಣಿಕವಾಗಿ ದುಡಿಮೆ ಮಾಡಿ ಪಾಕರಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಗಳಿಂದ ಮೊದಲುಗೊಂಡು ಇಂದು ಸಹಕಾರ ಒಕ್ಕೂಟದ ಅಧ್ಯಕ್ಷರಾಗಿ ಹಂತ ಹಂತವಾಗಿ ಖ್ಯಾತಿಗಳಿಸಿದ್ದಾರೆ ಎಂದು ಅವರ ಸೇವೆಯನ್ನು ನೆನಪಿಸಿಕೊಂಡರು.
ಇವರ ಅಧ್ಯಕ್ಷತೆ ಅವಧಿಯಲ್ಲಿ ಒಕ್ಕೂಟ ಕೋಲಾರ ಜಿಲ್ಲೆಯ ದೀನ-ದಲಿತ ಹಿಂದುಳಿದ ಅಲ್ಪ ಸಂಖ್ಯಾತರೈತ ಮತ್ತು ಮಹಿಳಾ ವರ್ಗಕ್ಕೆ ಒಕ್ಕೂಟದಿಂದ ಸಾಲ ಸೌಲಭ್ಯಗಳನ್ನು ಕಲ್ಪಿಸಿ ಆರ್ಥಿಕವಾಗಿ ಸಹಕಾರ ನೀಡಬೇಕು, ಗ್ರಾಮೀಣ ಭಾಗದ ಜನರು ಹೈನುಗಾರಿಕೆ, ಕರಕುಶಲ, ಕಮ್ಮಾರಿಕೆ, ಕುಂಬಾರಿಕೆ, ಕುರಿ ಮತ್ತು ಮೇಕೆ ಸಾಕಣಿಕೆಗೆ ಬೇಕಾದ ಸಾಲ ಸೌಲಭ್ಯ ಪಡೆದು ಜಿಲ್ಲೆಯ ಜನತೆ ಆರ್ಥಿಕವಾಗಿ ಸ್ವಾವಲಂಭಿಗಳಾಗಿ ಬೆಳೆಯಲಿ ಎಂದು ಹೇಳುತ್ತಾ ಅಧ್ಯಕ್ಷರಿಗೆ ಪೇಟಾ, ಶಾಲು, ಹಣ್ಣಿನ ಬುಟ್ಟಿ, ನೀಡಿ ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪಿ.ಎಂ. ವೆಂಕಟೇಶಪ್ಪ, ನಾನು ನನ್ನ ಜೀವ ಇರುವ ತನಕ ಫೀಲ್ಡ್ ಮಾರ್ಷಲ್ ಕೆ.ಎಂ. ಸಮೂಹ ವಿದ್ಯಾ ಸಂಸ್ಥೆಯ ಅಧ್ಯಕ್ಷ ಡಾ.ಎಂ. ಚಂದ್ರಶೇಖರ್, ಆಡಳಿತ ಮಂಡಳಿ ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರಿಗೂ ಚಿರರುಣಿಯಾಗಿದ್ದುಕೊಂಡು ಕಾಯ, ವಾಚ, ಮನಸ, ಸಂಸ್ಥೆಯ ಅಭಿವೃದ್ದಿಗಾಗಿ ಶ್ರಮಿಸುತ್ತೇನೆಂದು ಪ್ರಮಾಣಿಕರಿಸಿದರು.
ಎಲ್ಲಾ ಮಟ್ಟದಲ್ಲಿ ವೈಯಕ್ತಿಕವಾಗಿ ನನ್ನಿಂದ ಮತ್ತು ಕೋಲಾರ ಜಿಲ್ಲಾ ಸಹಕಾರ ಒಕ್ಕೂಟದಿಂದ ಶಾಲೆಯ ಅಭಿವೃದ್ದಿಗೆ ನಾನಾ ವಿಧಗಳಲ್ಲಿ ಸಹಕಾರ ಸಹಾಯ ನೀಡಿ ಶಕ್ತಿ ಮೀರಿ ಸಂಸ್ಥೆಯ ಜೊತೆಗಿರುತ್ತೇನೆಂದು ಮತ್ತೊಮ್ಮೆ ನಿಮ್ಮೆಲ್ಲಾರಿಗೂ ಆಶ್ವಾಸನೆ ನೀಡುತ್ತೇನೆ. ಸಂಸ್ಥೆಯಲ್ಲಿರುವ ಎಲ್ಲಾ ವಿಭಾಗಗಳು ಏಕ ಕಾಲದಲ್ಲಿ ಸನ್ಮಾನಿಸಿ ಪ್ರಶಂಸೆ ಹೇಳಿರುವುದಕ್ಕೆ ನಿಮ್ಮಗಳ ಶ್ರೇಯೋಭಿವೃದ್ದಿಗೆ ಶ್ರಮಿಸುವುದೇ ನನ್ನ ಧ್ಯೇಯವೆಂದು ಘೋಷಿಸಿದರು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ, ಶಾಲಾಭಿವೃದ್ದಿ ಸಮಿತಿ ಆಡಳಿತಾಧಿಕಾರಿಗಳು ವಿವಿಧ ವಿಭಾಗಗಳ ಪ್ರಾಂಶುಪಾಲರುಗಳು ವಿವಿದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಸಮಾರಂಭದಲ್ಲಿ ಎಂ. ಮುನಿಕೃಷ್ಣಪ್ಪ ಪ್ರಾರ್ಥಿಸಿ, ವಿ.ಎನ್, ಪ್ರಭಾರಿ ಮುಖ್ಯೋಪಾಧ್ಯಾಯ ವಿ.ಎನ್.ನಾರಾಯಣಸ್ವಾಮಿ ಸ್ವಾಗಿತಿಸಿ, ಶಿಕ್ಷಕ ಎಂ.ಪಾಪಣ್ಣ ವಂದಿಸಿ, ನಿರೂಪಿಸಿದರು.