ರಾಜಿ ಮೂಲಕ ವ್ಯಾಜ್ಯ ಮುಕ್ತಗೊಳಿಸಿ
ಕೋಲಾರ, ಜುಲೈ ೧೩-ಕಂದಾಯ ವ್ಯಾಜ್ಯಗಳನ್ನು ತ್ವರಿತಗತಿಯಲ್ಲಿ ಮತ್ತು ರಾಜಿ ಮೂಲಕ ಇತ್ಯರ್ಥ ಮಾಡಲಾಗುತ್ತಿದ್ದು, ಎರಡು ಮೂರು ವರ್ಷಗಳಿಂದ ಬಾಕಿ ಇದ್ದ ವ್ಯಾಜ್ಯಗಳನ್ನು ರಾಜಿ ಮೂಲಕ ವಿಲೇವಾರಿ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ಹೇಳಿದರು.
ನಗರದ ಕೋಲಾರ ಉಪವಿಭಾಗಾಧಿ ಕಾರಿಗಳ ಕಚೇರಿಯ ಆವರಣದಲ್ಲಿ ಹಮ್ಮಿಕೊಂಡಿದ್ದ ಕಂದಾಯ ಅದಾಲತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ. ಹಿಂದಿನ ವರ್ಷ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಸುಮಾರು ೨೦೦೦ ಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದ್ದು, ತಹಶೀಲ್ದಾರರ ಕೇಸುಗಳನ್ನು ಗಣನೀಯವಾಗಿ ಕಡಿಮೆ ಮಾಡಲಾಗುತ್ತಿದೆ ಎಂದರು. ಸುಮಾರು ೭೦೦ ರಿಂದ ೮೦೦ ಕೇಸುಗಳು ತಹಶೀಲ್ದಾರರ ಬಳಿ ಇರುತ್ತಿತ್ತು, ಆದರೆ ಈಗ ೨೫೦ಕ್ಕೆ ಇಳಿಸಲಾಗಿದೆ. ೨೫೦ ಕೇಸುಗಳನ್ನು ೬೦ ದಿನಗಳಲ್ಲಿ ಇಲ್ಲದಿದ್ದರೆ ಮೂರು ತಿಂಗಳ ಒಳಗಡೆ ಇತ್ಯರ್ಥಪಡಿಸಬೇಕೆಂದು ಹೇಳಿದರು.
ಸಕಾಲ ಸೇವೆಗಳನ್ನು ನೀಡುವುದರಲ್ಲಿ ಕೋಲಾರ ಜಿಲ್ಲೆಯು ಇಡೀ ರಾಜ್ಯದಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಎಲ್ಲಾ ಇಲಾಖೆಗಳಲ್ಲಿ ೭೫,೦೦೦ ಸಕಾಲ ಸೇವೆಗಳನ್ನು ಜನರಿಗೆ ನೀಡಲಾಗುತ್ತಿದೆ ಇದರ ಜೊತೆಗೆ ರಾಜ್ಯದಲ್ಲಿ ೭೭೧ ನಾಡಕಚೇರಿಗಳಿವೆ. ಕೋಲಾರ ಜಿಲ್ಲೆಯಲ್ಲಿ ೨೭ ನಾಡಕಚೇರಿಗಳನ್ನು ಹೊಂದಿವೆ, ಟಾಪ್ ಟೆನ್ ನಾಡಕಚೇರಿಗಳಲ್ಲಿ ಜಿಲ್ಲೆಯ ಒಂಬತ್ತು ನಾಡಕಚೇರಿಗಳು ಸ್ಥಾನವನ್ನು ಪಡೆದುಕೊಂಡಿವೆ ಎಂದರು.
ನಾಡಕಚೇರಿಗಳು ತುಂಬಾ ಕ್ರಿಯಾಶೀಲವಾಗಿ ಕೆಲಸ ನಿರ್ವಹಣೆ ಮಾಡುತ್ತಿವೆ, ೪೦,೦೦೦ ದಾಖಲೆಗಳನ್ನು ಕೇವಲ ಒಂದು ತಿಂಗಳಲ್ಲಿ ನೀಡಿ, ಅಟಲ್ ಜಿ ಜನಸ್ನೇಹಿ ಕೇಂದ್ರದಲ್ಲಿ ಮೊದಲನೇ ಸ್ಥಾನವನ್ನು ಪಡೆದಿದೆ. ಆಧಾರ್ ಸೀಡಿಂಗ್ ಮೂಲಕ ಅತಿವೃಷ್ಟಿ ಮತ್ತು ಅನಾವೃಷ್ಟಿ ಬಂದಾಗ ಖಾತೆಗಳಿಗೆ ಪರಿಹಾರವನ್ನು ನೀಡಲು ಹಾಗೂ ತಮ್ಮ ಜಮೀನುಗಳನ್ನು ಬೇರೆಯವರು ಅಕ್ರಮವಾಗಿ ಬೇರೆಯವರಿಗೆ ಮಾರಲು ಸಾಧ್ಯವಾಗುವುದಿಲ್ಲ ದಂದು ತಿಳಿಸಿದರು.
ಆರ್‌ಟಿಸಿ ಯಲ್ಲಿ ಆಧಾರ್ ಜೋಡಣೆಯಿಂದ ಕೋಲಾರ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ ಇದು ಒಂದು ಮಹತ್ವದ ಯೋಜನೆಯಾಗಿದೆ. ೩೪,೦೦೦ ಸರ್ಕಾರಿ ಜಾಗಗಳಿಗೆ ಈಗಾಗಲೇ ೩೩,೦೦೦ ಸರ್ಕಾರಿ ಜಾಗಗಳನ್ನು ಗುರುತಿಸಿ ಅದಕ್ಕೆ ಜಿಯೋ ಫೆನ್ಸಿಂಗ್ ಮಾಡಲಾಗಿದೆ. ಯಾರಾದರೂ ಸರ್ಕಾರಿ ಜಾಗವನ್ನು ಅಕ್ರಮಣ ಮಾಡಿರುವುದನ್ನು ಸುಲಭವಾಗಿ ಗುರುತಿಸಲು ಒಂದು ಆಪ್ ಬಳಸಿ ನೋಡಬಹುದಾಗಿದೆ. ಸರ್ಕಾರಿ ಜಾಗಗಳನ್ನು ಗುರುತಿಸುವುದರಲ್ಲಿ ಸಹ ಕೋಲಾರ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಸಾರ್ವಜನಿಕರ ದಾಖಲೆಗಳನ್ನು ಗಣಕೀಕರಣ ಮಾಡಲಾಗುತ್ತಿದೆ ಇದರಿಂದ ಜನರಿಗೆ ತಮ್ಮ ದಾಖಲೆಗಳನ್ನು ಎಲ್ಲಿಯಾದರೂ ಪಡೆಯಲು ಸಾಧ್ಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರ ಕುಂದು ಕೊರತೆಗಳು ಪತ್ರಿಕೆಗಳಲ್ಲಿ ಬಂದ ತಕ್ಷಣ ಅವುಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಅದಕ್ಕೆ ಸ್ಪಂದಿಸುತ್ತಿದ್ದಾರೆ ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೇಗಳ ಪ್ರಾದಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸುನಿ ಎಸ್. ಹೊಸಮನಿ ಅವರು ಮಾತನಾಡಿ ಇದು ಎಂಟನೇ ಕಂದಾಯ ಅದಾಲತ್ ಆಗಿದ್ದು, ಕಳೆದ ಏಳು ಅದಾಲತ್‌ಗಳಲ್ಲಿ ಸುಮಾರು ಮುನ್ನೂರು ಪ್ರಕರಣಗಳನ್ನು ರಾಜಿ ಮೂಲಕ ಮುಕ್ತಾಯಗೊಳಿಸಲಾಗಿದೆ. ಅದಾಲತ್‌ನಲ್ಲಿ ರಾಜಿ ಮಾಡುವ ಮೂಲಕ ಯಾವುದೇ ಮೇಲ್ಮನವಿ ಇರುವುದಿಲ್ಲ ಇದರಿಂದ ಶೀಘ್ರಗತಿಯಲ್ಲಿ ಕಡಿಮೆ ವೆಚ್ಚದಲ್ಲಿ ನ್ಯಾಯ ಸಿಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಡಾ|| ಮೈತ್ರಿ, ಕೋಲಾರ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಮುನೇಗೌಡ, ಉಪಾಧ್ಯಕ್ಷರಾದ ರವೀಂದ್ರ ಬಾಬು, ಸೇರಿಂದತೆ ಮತ್ತಿತರರು ಉಪಸ್ಥಿತರಿದ್ದರು.