ಸ್ಮರಣ ಶಕ್ತಿ ಸ್ಪರ್ಧೆ, ಶ್ರೀಯಾ ಆರ್ಕಾಟ್ ಅದ್ವಿತೀಯ ಸಾಧನೆ
ಕೋಲಾರ,ಜು.೧೩: ಇಂಡಿಯನ್ ಮೆಮೊರಿ ಸ್ಪೋರ್ಟ್ಸ್ ಕೌನ್ಸಿಲ್ ವತಿಯಿಂದ ಬೆಂಗಳೂರಿನ ಗೋಲ್ಡ್‌ನ್ ಮೆಟ್ರೋ ಹೋಟೆಲ್‌ನಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ಮೆಮೊರಿ ಚಾಂಪಿಯನ್ ಶೀಫ್ ಸೀಸನ್ ೨ರಲ್ಲಿ ಶ್ರೀಯಾ.ಎಸ್ ಆರ್ಕಾಟ್ ಅದ್ವಿತೀಯ ಸಾಧನೆ ತೋರುವ ಮೂಲಕ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಚಾಂಪಿಯನ್ ರನ್ನರ್ ಆಗಿ ಹೊರಹೊಮ್ಮಿದ್ದಾರೆ.
ಕೋಲಾರ ಮೂಲದ ಶ್ರೀಕಾಂತ್ (ರಾಜು) ಹಾಗೂ ಪೂಜಾ ರವರ ಜೇಷ್ಠ ಪುತ್ರಿ ಹಾಗೂ ಚೇಂಬರ್ ಆಫ್ ಕಾಮರ್ಸ್‌ನ ಉಪಾಧ್ಯಕ್ಷ ಎ.ಎಸ್.ಚಲಪತಿ ರವರ ಮೊಮ್ಮಗಳಾದ ಶ್ರೀಯಾ.ಎಸ್ ಆರ್ಕಾಟ್ ಕೋಲಾರದ ಶ್ರೀ.ಆರ್.ವಿ ಇಂಟರ್ನ್ಯಾಷನಲ್ ಸ್ಕೂಲ್‌ನಲ್ಲಿ ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸ್ಪರ್ಧೆಯಲ್ಲಿ ಇವರು ಎರಡು ಚಿನ್ನ ಮೂರು ಬೆಳ್ಳಿ ಹಾಗೂ ಒಂದು ಕಂಚಿನ ಪದಕಗಳನ್ನು ಗೆದ್ದು ಮಕ್ಕಳ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಇದಕ್ಕೂ ಮುನ್ನಾ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸ್ಪರ್ಧೆ ಐದು ವಿವಿಧ ಹಂತಗಳಲ್ಲಿ ನಡೆಯಿತು ರಾಂಡಮ್ ವರ್ಡ್, ಸ್ಪೀಡ್ ನಂಬರ್‍ಸ್, ಬೈನರಿ ಡಿಜಿಟ್ಸ್, ಇವೆಂಟ್ಸ್ ಅಂಡ್ ಡೇಟ್, ಸ್ಪೀಡ್ ಕಾರ್ಡ್ಸ್ ವಿಭಾಗದಲ್ಲಿ ಅಂತಿಮ ಹಂತಕ್ಕೆ ಬರುವ ಮೂವರಿಗೆ ಮಾತ್ರ ಟ್ರೋಪಿ ಹಾಗೂ ನಗದು ಬಹುಮಾನ ನೀಡಲಾಗಿತ್ತು ೧೨೦ಕ್ಕೂ ಹೆಚ್ಚು ಮೆಮೊರಿ ಅಥ್ಲೆಟ್‌ಗಳು ಕರ್ನಾಟಕದ ವಿವಿಧ ಭಾಗಗಳಿಂದ ಭಾಗವಹಿಸಿದ್ದರು. ಕಿಡ್ಸ್, ಜೂನಿಯರ್, ಅಡಲ್ಟ್ಸ್ ಹಾಗೂ ಸೀನಿಯರ್ ವಿಭಾಗಗಳೆಂದು ವಿಂಗಡಿಸಿರುತ್ತಾರೆ. ಸ್ಪರ್ಧಿಗಳು ತಮ್ಮ ವಯಸ್ಸಿಗೆ ಅನುಗುಣವಾಗಿ ಸ್ಪರ್ಧಿಸುತ್ತಾರೆ.
ಅಷ್ಟೇ ಅಲ್ಲದೆ ೧೨೦ ಜನರ ಪೈಕಿ ಒಟ್ಟಾರೆ ವಿಜೇತರು ಎಂದು ಘೋಷಿಸುತ್ತಾರೆ ಅದರಲ್ಲೂ ನಮ್ಮ ಕೋಲಾರದ ಶ್ರೀಯಾ ದ್ವಿತೀಯ ಸ್ಥಾನವನ್ನು ಪಡೆದು ಕೋಲಾರಕ್ಕೆ ಹೆಮ್ಮೆ ತಂದಿದ್ದಾರೆ.
ಶ್ರೀಯಾ ಬೆಂಗಳೂರಿನ ಮೂಲದ ಜಯನಗರದ ಬೋಧಿ ವಿದ್ಯಾ ಸಂಸ್ಥೆಯ ವೈಷ್ಣವಿ ನವೀನ್ ರವರಿಂದ ಕಳೆದ ಆರು ತಿಂಗಳಿನಿಂದ ತರಬೇತಿ ಪಡೆಯುತ್ತಿದ್ದರು. ಮಕ್ಕಳ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದುದ್ದಕ್ಕೆ ಒಂದು ಟ್ರೋಪಿ ಹಾಗೂ ೨೦೦೦ ನಗದು ಬಹುಮಾನ ಹಾಗೂ ಒಟ್ಟಾರೆ ವಿಜೇತರಾಗಿ ಎರಡನೇ ಸ್ಥಾನ ಪಡೆದಿದ್ದಕ್ಕೆ, ೫೦೦೦ ನಗದು ಹಾಗೂ ಟ್ರೋಪಿ ನೀಡಿ ಗೌರವಿಸಲಾಗಿದೆ.
ಮಗಳ ಈ ಸಾಧನೆಗೆ ಪೋಷಕರು ಗುರುಗಳು ಹಾಗೂ ಕುಟುಂಬಸ್ಥರು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಸ್ಮರಣ ಶಕ್ತಿ ಒಂದು ವ್ಯಕ್ತಿಯ ವಿಕಸನಕ್ಕೆ ಬಹಳ ಮುಖ್ಯವಾದದ್ದು ಇದನ್ನು ಪ್ರತಿಯೊಬ್ಬರೂ ಕಲಿತು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಗತ್ಯ ಎಂದು ಶ್ರೀಯಾಳ ತಾಯಿ ಪೂಜಾ ರವರ ಅನಿಸಿಕೆಯಾಗಿದೆ. ಇದರಿಂದ ಮಕ್ಕಳ ಮೆದುಳು ಚುರುಕಾಗಿ ಕೆಲಸ ಮಾಡುತ್ತದೆ ಹಾಗೂ ಅವರ ಕಾನ್ಸಂಟ್ರೇಶನ್ ಲೆವೆಲ್ ಹೆಚ್ಚುತ್ತದೆ. ಮಕ್ಕಳಲ್ಲಿ ಸೆಲ್ಸ್ ಕಾನ್ನಿಡೆನ್ಸ್ ಒಂದು ಇದ್ದರೆ ಮಕ್ಕಳು ಉನ್ನತ ಮಟ್ಟಕ್ಕೆ ತಲುಪಲು ಸಹಾಯ ಆಗುತ್ತದೆ ಎಂದು ತಿಳಿಸಿದರು.